ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗೊಂಡ ಸಲಗ ಸಾವು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ 60 ವರ್ಷದ ಗಂಡಾನೆಯೊಂದು ಗಾಯ ಉಲ್ಬಣಗೊಂದು ಸಾವನ್ನಪ್ಪಿರುವುದು ಸೋಮವಾರ ಬೆಳಕಿಗೆ ಬಂದಿದೆ.

ವೀರನಹೊಸಹಳ್ಳಿ ಅಂಕಣ 10ರ ಮದ್ದನಕುಪ್ಪೆ ಹಾಡಿ (ಕುಟ್ಟೇರಿ ಹಾಡಿ) ಸ್ಥಳದಲ್ಲಿ ಈ ಆನೆ ನಾಲ್ಕೈದು ದಿನದ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ತಿಳಿಸಿದ್ದಾರೆ.
 
ಈ ಕಾಡಾನೆಗೆ ಹೊಟ್ಟೆ ಭಾಗದಲ್ಲಿ ತೀವ್ರ ಗಾಯವಾಗಿ ಕೊಳೆಯುವ ಹಂತ ತಲುಪಿತ್ತು. ವೀರನಹೊಸಹಳ್ಳಿ ಅರಣ್ಯದಂಚಿನಲ್ಲಿ ಟಿಬೆಟನ್ ನಾಗರಿಕರು ನಿರ್ಮಿಸಿರುವ ತಡೆಗೋಡೆಯನ್ನು ಹಾರುವ ಯತ್ನ ನಡೆಸಿದ್ದರಿಂದ ಈ ರೀತಿ ಗಾಯ ಮಾಡಿಕೊಂಡಿರಬಹುದು. ಅದು ಉಲ್ಬಣವಾಗಿ ಆನೆ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಆನೆಯ ಎರಡು ಮೀಟರ್ ಉದ್ದದ ಎರಡು ದಂತಗಳನ್ನು ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್, ಪಶುವೈದ್ಯ ಡಾ. ಉಮಾಶಂಕರ್ ಭೇಟಿ ನೀಡಿದ್ದರು.

ರೈಲು ಹಳಿ ತಪ್ಪಿ ಸಂಚಾರ ವಿಳಂಬ

ಗುಲ್ಬರ್ಗ: ಸೋಲಾಪುರ ಸಮೀಪದ ಅಕ್ಕಲಕೋಟ ಮತ್ತು ದುಧನಿ ಮಧ್ಯದ ನಾಗನಸೂರ ಎಂಬಲ್ಲಿ ಗೂಡ್ಸ್ ರೈಲೊಂದು ಸೋಮವಾರ ಸಂಜೆ ಹಳಿ ತಪ್ಪಿದ್ದರಿಂದ ಗುಲ್ಬರ್ಗ ಮಾರ್ಗದ ಮೂಲಕ ಚಲಿಸುವ ರೈಲುಗಳ ಸಂಚಾರವು ಕೆಲಕಾಲ ಸ್ಥಗಿತಗೊಂಡಿತ್ತು.

ಇದರಿಂದಾಗಿ ದೆಹಲಿಯಿಂದ ಗುಲ್ಬರ್ಗ ಮೂಲಕ ಬೆಂಗಳೂರಿಗೆ ಹೋಗಬೇಕಾಗಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ಮತ್ತಿತರ ರೈಲುಗಳನ್ನು ಹೊಟಗಿ-ವಿಜಾಪುರ ಮಾರ್ಗವಾಗಿ ಕಳುಹಿಸಿ ಕೊಡಲಾಗಿದೆ. ಇದರಿಂದಾಗಿ ರೈಲು ತಲುಪುವ ವೇಳೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ುರಸ್ತಿ ಕಾರ್ಯ ರಾತ್ರಿ ವೇಳೆ ಪೂರ್ಣಗೊಳ್ಳಲಿದ್ದು, ಮತ್ತೆ ರೈಲು ಸಂಚಾರ ಆರಂಭಗೊಳ್ಳುವ ಭರವಸೆಯನ್ನು ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT