ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಸಮಸ್ಯೆ: ಇನ್ಫಿ ಜೊತೆ ಬಿಸಿಸಿಐ ಮಾತುಕತೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಮುಖ ಆಟಗಾರರು ಗಾಯದಿಂದ ಬಳಲುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಆಟಗಾರರಿಗೆ ಸಂಬಂಧಿಸಿದ `ಇಂಜುರಿ ಡಾಟಾಬೇಸ್~ ಸಿದ್ಧಪಡಿಸುವಂತೆ ಕೋರಿ ದೇಶದ ಪ್ರಮುಖ ಐಟಿ ಕಂಪೆನಿ ಇನ್ಫೋಸಿಸ್‌ನ್ನು ಸಂಪರ್ಕಿಸಿದೆ.

`ಆದರೆ ಇನ್ಫೋಸಿಸ್ ಜೊತೆಗಿನ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ~ ಎಂದು ಬಿಸಿಸಿಐ ಹೇಳಿದೆ.
`ಎನ್‌ಸಿಎ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ ಅವರು `ಇಂಜುರಿ ಮ್ಯಾನೇಜ್‌ಮೆಂಟ್~ಗೆ ಸಂಬಂಧಿಸಿದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕುರಿತು ಇನ್ಫೋಸಿಸ್ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಈಗ ನಡೆದಿರುವುದು ಪ್ರಾಥಮಿಕ ಹಂತದ ಮಾತುಕತೆ ಮಾತ್ರ~ ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಸೋಮವಾರ ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT