ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿ ಕುರ್ಚಿ ಸದುಪಯೋಗ ಮಾಡಿಕೊಳ್ಳಿ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಾವೇರಿ ಭವನದ ಹಿಂಭಾಗದಲ್ಲಿರುವ ನಗರ ನ್ಯಾಯಾಲಯಗಳ ಸಂಕೀರ್ಣ ಆರು ಮಹಡಿ ಬೃಹತ್ ಕಟ್ಟಡವಾಗಿದ್ದು ಅದರಲ್ಲಿ ನಗರ -ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸುಮಾರು 53 ನ್ಯಾಯಾಲಯಗಳು ಹಾಗೂ ಲಘು ವ್ಯವಹಾರ ನ್ಯಾಯಾಲಯಗಳು ಅವುಗಳಿಗೆ ಹೊಂದಿಕೊಂಡಂತೆ ಕಚೇರಿಗಳು, ಎಂಜಿನಿಯರುಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ವಾಹನ ಅಪಘಾತ ಪರಿಹಾರ ನೀಡುವ ಕುರಿತಾದ ನ್ಯಾಯಾಲಯಗಳು ಕಟ್ಟಡದ 5-6ನೇ ಮಹಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಪಘಾತದಲ್ಲಿ ಗಾಯಗೊಂಡವರು, ಕಾಲು ಮುರಿದು ನಡೆಯಲಾಗದವರು ಹಾಗೂ ಅಂಗಾಂಗ ವೈಕಲ್ಯ ಹೊಂದಿದವರು ವಿವಿಧ ಮಹಡಿಗಳಿಗೆ ಹತ್ತಿ ಹೋಗಲು ನ್ಯಾಯಾಲಯ ಸಂಕೀರ್ಣದ ಆರು ಕಡೆಗಳಲ್ಲಿ ಲಿಫ್ಟ್ ವ್ಯವಸ್ಥೆಯಿದೆ. ಗಾಯಗೊಂಡು ನಡೆಯಲಾರದವರು, ಎಲುಬು ಕೀಲುಗಳ ಅಂಗವೈಕಲ್ಯ ಹೊಂದಿದವರು ವಿವಿಧ ಮಹಡಿಗಳಿಗೆ ಹೋಗಲು ಆಗುತ್ತಿರುವ ಅನಾನುಕೂಲವನ್ನು ಗುರುತಿಸಿ ಅಂತಹವರಿಗಾಗಿ ವಿವಿಧ ನ್ಯಾಯಾಲಯಗಳಿಗೆ ಲಿಫ್ಟ್ ಮೂಲಕ ತಲುಪಲು ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡುವ ಕುರಿತು ನ್ಯಾಯಾಲಯದ ವಿಲೇಖನಾಧಿಕಾರಿಗಳಿಗೆ (ರಿಜಿಸ್ಟ್ರಾರ್) ಮನವಿ ಮಾಡಿಕೊಳ್ಳಲಾಗಿತ್ತು.

ಅದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ನ್ಯಾಯಾಲಯದಲ್ಲಿ ಗಾಲಿಕುರ್ಚಿಗಳು ಲಭ್ಯವಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನ್ಯಾಯಾಲಯ ಸಂಕೀರ್ಣದ ನೆಲಮಹಡಿಯ ಲಘು ವ್ಯವಹಾರ ನ್ಯಾಯಾಲಯದ ಎರಡನೇ ಆಡಳಿತಾಧಿಕಾರಿಗಳನ್ನು ಹಾಗೂ ಮೂರನೇ ಮಹಡಿಯಲ್ಲಿರುವ ಎರಡನೇ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪಡೆಯುವ ಕುರಿತು ಸೂಚನಾ ಫಲಕಗಳನ್ನು ನ್ಯಾಯಾಲಯದಲ್ಲಿ ಸ್ಥಾಪಿತವಾದ ಲಿಫ್ಟ್‌ಗಳ ಬಳಿ ಹಾಕಿರುವರು. ನಮ್ಮ ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಜನತೆ ಪರವಾಗಿ ವಂದನೆಗಳು.

ನ್ಯಾಯಾಲಯ ಸಂಕೀರ್ಣದ ವಿವಿಧ ಮಹಡಿಗಳಿಗೆ ಹೋಗಬಯಸುವ ಅಂಗವಿಕಲ ಹಾಗೂ ಅಪಘಾತದಲ್ಲಿ ಅಂಗಾಂಗ ಊನವಾದವರು ನ್ಯಾಯಾಲಯ ಸಂಕೀರ್ಣದಲ್ಲಿರುವ ಗಾಲಿ ಖುರ್ಚಿಗಳನ್ನು ಸದುಪಯೋಗ ಮಾಡಿಕೊಳ್ಳಲು ಈ ಮೂಲಕ ಕೋರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT