ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಜಂಟಿ ಅಗ್ರಸ್ಥಾನದಲ್ಲಿ ರಾಹಿಲ್

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಬಲ ಪೈಪೋಟಿ ಎದುರಿಸಿದ ರಾಹಿಲ್ ಗ್ಯಾಂಗ್ಜಿ ಇಲ್ಲಿ ನಡೆಯುತ್ತಿರುವ ಪಿಜಿಟಿಐ -ಈಗಲ್‌ಬರ್ಗ್ ಓಪನ್ ಗಾಲ್ಫ್ ಟೂರ್ನಿಯ ಮೊದಲ ಸುತ್ತಿನ ಅಂತ್ಯಕ್ಕೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು.

ಈಗಲ್ಟನ್ ಗಾಲ್ಫ್ ಕೋರ್ಸ್‌ನಲ್ಲಿ ಮಂಗಳವಾರ ಮೊದಲ ದಿನ ಸಾಕಷ್ಟು ಸವಾಲು ಎದುರಿಸಿದ ಏಷ್ಯನ್ ಟೂರ್‌ನ ಚಾಂಪಿಯನ್ ರಾಹಿಲ್, ಗುಡಗಾಂವ್‌ನ ಅರ್ಷಪ್ರೀತ್ ಹಾಗೂ ಶ್ರೀಲಂಕಾದ ಕೆ. ಪ್ರಭಾಕರನ್ 68 ಅವಕಾಶಗಳನ್ನು ಬಳಸಿಕೊಂಡು ಮೊದಲ ಸುತ್ತಿನ ಸ್ಪರ್ಧೆಯನ್ನು ಅಂತ್ಯಗೊಳಿಸಿದರು. ಸಂಜಯ್ ಕುಮಾರ್, ಕಪಿಲ್ ಕುಮಾರ್, ಮುಖೇಶ್ ಕುಮಾರ್ ಮತ್ತು ವಿಶಾಲ್ ಸಿಂಗ್ (69) ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

`ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದೇನೆ. ಕಳೆದ ವಾರ ನಡೆದ ಪಿಜಿಟಿಐ ಟೂರ್ನಿಯಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆದಿದ್ದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಗತ್ಯವಿದೆ' ಎಂದು ಕೋಲ್ಕತ್ತದ ರಾಹಿಲ್ ನುಡಿದರು.

ಪ್ರಬಲ ಹೋರಾಟದ ನಡುವೆ ನಿಖರ ಪ್ರದರ್ಶನ ತೋರಲು ತಡವರಿಸಿದ ಬೆಂಗಳೂರಿನ ಸಿ. ಮುನಿಯಪ್ಪ (70) ಎಂಟನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಮಟ್ಟಿಗೆ ಇದು ಶ್ರೇಷ್ಠ ಸಾಧನೆ. ಆದರೆ, ಯುವ ಗಾಲ್ಫರ್ ಎಸ್. ಚಿಕ್ಕರಂಗಪ್ಪ (72) 25ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಮಾತ್ರ ನಿರಾಸೆ ಮೂಡಿಸಿತು. ಇನ್ನೊಬ್ಬ ಸ್ಥಳೀಯ ಪ್ರತಿಭೆ ಅನಿರ್ಬನ್ ಲಾಹಿರಿ (73) ಕೂಡಾ ನಿರಾಸೆಗೆ ಕಾರಣರಾದರು.

ರಾಜು ಅಲಿ ಮೊಲ್ಹಾ, ದೀಪಿಂದರ್ ಸಿಂಗ್ ಕುಲ್ಲಾರ್, ನಮನ್ ದಾವರ್ 71 ಅವಕಾಶ ಬಳಸಿಕೊಂಡು ಮೊದಲ ಸುತ್ತಿನ ಸ್ಪರ್ಧೆ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT