ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ-ಮಳೆ: ಉರುಳಿದ ವಿದ್ಯುತ್ ಕಂಬ, ಮರ

Last Updated 17 ಏಪ್ರಿಲ್ 2013, 10:41 IST
ಅಕ್ಷರ ಗಾತ್ರ

ಮಳವಳ್ಳಿ: ಸೋಮವಾರ ಬಿದ್ದ ಮಳೆ ಹಾಗೂ ಬೀಸಿದ ಗಾಳಿಗೆ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಹಳೆಯದಾದ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸೋಮವಾರ ರಾತ್ರಿ 5 ಸೆಂ.ಮೀ.ಮಳೆ ಬಿದ್ದಿದ್ದು ಹೆಚ್ಚು ಗಾಳಿ ಬೀಸಿದ ಹಿನ್ನೆಲೆಯಲ್ಲಿ ಮರಗಳೂ ಉರುಳಿವೆ. ಇದರ ಜೊತೆಗೆ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.

ಇದರಿಂದ ರಾತ್ರಿ ಕಡಿತಗೊಂಡ ವಿದ್ಯುತ್ ಸಂಪರ್ಕ ಮಂಗಳವಾರ ಸಂಜೆಯಾದರೂ ಸರಿಯಾಗಿರಲಿಲ್ಲ. ಮಧ್ಯಾಹ್ನವಾದರೂ ಮರ ತೆರವುಗೊಳಿಸುವ ಕೆಲಸವು ನಡೆದಿರಲಿಲ್ಲ. ನಂತರ ಮರ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು.

ಇದಲ್ಲದೇ ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಹಲವು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ಪರದಾಡುವಂತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT