ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಯಿಂದ ಪೆಟ್ರೋಲ್ ಉತ್ಪಾದನೆ!

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಗಾಳಿ ಮತ್ತು ವಿದ್ಯುತ್ ಶಕ್ತಿ ಬಳಸಿಕೊಂಡು ಪೆಟ್ರೋಲ್ ತಯಾರಿಸಬಹುದೇ?
ಹೌದು. ಇಂಥದ್ದೊಂದು ಹೊಸ ತಂತ್ರಜ್ಞಾನವನ್ನು ಬ್ರಿಟನ್ ಮೂಲದ ಕಂಪೆನಿ ಅಭಿವೃದ್ಧಿಪಡಿಸಿದೆ.
 
ಉತ್ತರ ಇಂಗ್ಲೆಂಡ್‌ನ ಏರ್ ಫ್ಯೂಅಲ್ ಸಿಂಡಿಕೇಶನ್ ಕಂಪೆನಿಯು ಕೃತಕ ಪೆಟ್ರೋಲ್ ತಯಾರಿಸುವ ಉದ್ದೇಶದಿಂದ `ಏರ್ ಕ್ಯಾಪ್ಚರ್~ (ಗಾಳಿ ಹಿಡಿಯುವಿಕೆ) ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟ ಮತ್ತು ಇಂಧನ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ವಿನೂತನ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

`ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ~ ಎಂದು `ದಿ ಟೆಲಿಗ್ರಾಫ್~ ವರದಿ ಮಾಡಿದೆ. `ಈ ತಂತ್ರಜ್ಞಾನದ ಮೂಲಕ ಮೂರು ತಿಂಗಳೊಳಗೆ ಐದು ಲೀಟರ್ ಪೆಟ್ರೋಲ್ ತಯಾರಿಸಲಾಗಿದೆ~ ಎಂದು ಕಂಪೆನಿ ತಿಳಿಸಿದೆ.

ನಿತ್ಯ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಉತ್ಪಾದಿಸಲು ದೊಡ್ಡ ಘಟಕ ಸ್ಥಾಪಿಸಲು ಕಂಪೆನಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT