ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನಿಸ್ ದಾಖಲೆಗಾಗಿ ಕೈ-ಕಾಲಿಗೆ ಕೋಳ ಹಾಕಿ ಈಜಿದ ಖಾರ್ವಿ

Last Updated 8 ಜನವರಿ 2012, 18:35 IST
ಅಕ್ಷರ ಗಾತ್ರ

ಉಡುಪಿ: ಗಿನ್ನಿಸ್ ದಾಖಲೆಗಾಗಿ ಈಜುಪಟು ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಕನ್ಯಾನದ ಗೋಪಾಲ ಖಾರ್ವಿ ಭಾನುವಾರ ಬೆಳಿಗ್ಗೆ 7.45ಕ್ಕೆ ಮಲ್ಪೆ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ ಕೈ-ಕಾಲಿಗೆ ಕೋಳ ತೊಡಿಸಿಕೊಂಡು ಸಮುದ್ರದಲ್ಲಿ ಯಶಸ್ವಿಯಾಗಿ ಈಜಿದರು.

ಸುಮಾರು 9 ಕಿ.ಮೀ. ದೂರವನ್ನು 2 ಗಂಟೆ 45 ನಿಮಿಷದಲ್ಲಿ ಅವರು ಈಜಿದರು. ಹವಾಮಾನ ಉತ್ತಮವಾಗಿದ್ದ ಕಾರಣ ಅವರಿಗೆ ಸಮುದ್ರದ ಅಲೆಗಳು ಕೂಡ ಸಹಕಾರಿಯಾದವು. ರಾಷ್ಟ್ರಧ್ವಜವನ್ನು ಹಿಡಿದಿದ್ದ ಅಭಿಮಾನಿಗಳು ಅವರನ್ನು ಸಾಕಷ್ಟು ಹುರಿದುಂಬಿಸಿ ದಡದತ್ತ ಬರಮಾಡಿಕೊಂಡರು. `ಎಲ್ಲರ ಸಹಕಾರದಿಂದ ಇಂಥದ್ದೊಂದು ಸಾಧನೆ ಸಾಧ್ಯವಾಗಿದೆ. ಇದು ನನಗೆ ಸಾಕಷ್ಟು ಖುಷಿ ನೀಡಿದೆ~ ಎಂದು ಖಾರ್ವಿ ಸಂತಸ ಹಂಚಿಕೊಂಡರು.

ಸೇಂಟ್ ಮೇರಿಸ್‌ನಿಂದ ಬೆಳಿಗ್ಗೆ 7.40ಕ್ಕೆ ಈಜಲು ಪ್ರಾರಂಭಿಸಿದ್ದರು. ಸೇಂಟ್ ಮೇರಿಸ್‌ನಲ್ಲಿ ಅವರಿಗೆ ಗಿನ್ನಿಸ್ ದಾಖಲೆಯ ಸಿದ್ದರಾಜು ಹಾಗೂ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ ಗಿರೀಶ್ ಕೈ, ಕಾಲಿಗೆ ಕೋಳ ತೋಡಿಸಿದರು. ಹಿಮ್ಮುಖವಾಗಿ ಕಟ್ಟಿದ ಕೈ ಹಾಗೂ ಮಡಚಿದ ಕಾಲುಗಳ ಮೂಲಕವೇ ಸಮುದ್ರದಲೆಗಳನ್ನು ಸರಿಸುತ್ತ, ಈಜಿ  10.25 ಕ್ಕೆ ಮಲ್ಪೆ ಬೀಚ್‌ಗೆ ಬಂದು ತಲುಪಿದರು.

2009ರ ಡಿಸೆಂಬರ್‌ನಲ್ಲಿ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ನ ವರೆಗೆ ಕೈಗೆ ಕೊಳವನ್ನು ಹಾಕಿ ಕಾಲಿಗೆ ಸರಪಳಿಯಿಂದ ಬಿಗಿದು 2 ಗಂಟೆ 20 ನಿಮಿಷಗಳ ಕಾಲ ಈಜಿ ಗಿನ್ನಿಸ್ ದಾಖಲೆಗಾಗಿ ಪ್ರಯತ್ನಿಸಿದ್ದರು. ಆದರೆ ದಾಖಲೆಯ ಚಿತ್ರೀಕರಣ ಸರಿಯಾಗಿಲ್ಲದ ಕಾರಣ ಈ ದಾಖಲೆ ಲಿಮ್ಕೋ ಬುಕ್ ಆಫ್ ರೆಕಾರ್ಡ್‌ಗೆ ಮಾತ್ರ ಸೇರ್ಪಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT