ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗೆ ಯುವಕ ಬಲಿ: ತನಿಖೆಗೆ ಆದೇಶ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಅರೆಸೇನಾ ಪಡೆಯ ಸಿಬ್ಬಂದಿಯ ಗುಂಡೇಟಿಗೆ ಯುವಕನೊಬ್ಬ ಬಲಿಯಾದ ಘಟನೆ ಗುರುವಾರ ಶಾಸನಸಭೆಯಲ್ಲಿ ಪ್ರತಿಧ್ವನಿಸಿತು.

ಪ್ರತಿಷ್ಠಿತ ನೀಟಾದ ಪ್ರದೇಶದಲ್ಲಿ ನಿಶಸ್ತ್ರ ಯುವಕ ನೊಬ್ಬನನ್ನು ಅರೆಸೇನಾ ಪಡೆಗಳು ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಿವೆ. ಇದೊಂದು ಎನ್‌ಕೌಂಟರ್ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು  ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಪ್ರಧಾನಿ ಈ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ನಗರದ ಹಡಗು ತಾಣವಾದ ಕ್ಲಿಫ್ಟಾನ್ ಪ್ರದೇಶ ದಲ್ಲಿ ಬುಧವಾರ ಸಂಜೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ನಿಶಸ್ತ್ರನಾಗಿದ್ದ ಶರ್ಫರಾಜ್ ಶಹಾ ಎಂಬ ಯುವಕ ಮೃತಪಟ್ಟಿದ್ದಾನೆ. `ಸಮಾ~ಟಿವಿಯ ವರದಿ ಗಾರನ ಸಹೋದರನಾಗಿದ್ದ.

ಈ ಯುವಕ ದರೋಡೆಕೋರನಾಗಿದ್ದ ಮತ್ತು ಆತ ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದಾಗ ಪ್ರತ್ಯುತ್ತರವಾಗಿ ಗುಂಡು ಹಾರಿಸಬೇಕಾಯಿತು ಎಂದು ಭದ್ರತಾ ಅಧಿಕಾರಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT