ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಯದಿಂದ ಪಾದಯಾತ್ರೆಗೆ ನಿರ್ಧಾರ

Last Updated 17 ಫೆಬ್ರುವರಿ 2012, 7:40 IST
ಅಕ್ಷರ ಗಾತ್ರ

ಹಾಸನ: `ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಆನೆ ದಾಳಿ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ಧೋರಣೆ ವಿರೋಧಿಸಿ ಮುಂದಿನ ಬಾರಿ ವಿಧಾನಸಭೆಯ ಅಧಿವೇಶನ ಆರಂಭವಾದ ದಿನದಂದೇ ಕಾಂಗ್ರೆಸ್‌ನ ಸಕಲೇಶಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗುಂಡ್ಯದಿಂದ ಸಕಲೇಶಪುರದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳ ಲಾಗುವುದು~ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಜಿಲ್ಲಾ ಘಟದ ಅಧ್ಯಕ್ಷ ಡಿ.ಸಿ. ಸಣ್ಣಸ್ವಾಮಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

 `ಆಲೂರಿನಲ್ಲಿ ಎರಡು ದಿನದ ಹಿಂದೆ ಆನೆ ತುಳಿತಕ್ಕೆ ಒಳಗಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಮಹಿಳೆ ಯೊಬ್ಬರು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬದವರಿಗೆ ಕೇವಲ ಎರಡು ಲಕ್ಷ ರೂಪಾಯಿ ಕೊಡಲಾಗಿದೆ. ಉಳಿದ ಮೂರು ಲಕ್ಷ ರೂಪಾಯಿ ಸರ್ಕಾರದಿಂದ ಹಣಬಂದ ಬಳಿಕ ಕೊಡು ತ್ತೇವೆ ಎಂದಿದ್ದಾರೆ. ಅರಣ್ಯ ಇಲಾಖೆ ಇಂಥ ತಾರತಮ್ಯ ಮಾಡಬಾರದು. ಗಾಯ ಗೊಂಡ ಮಹಿಳೆಗೆ ಕೇವಲ ಎರಡು ಸಾವಿರ ರೂಪಾಯಿ ನೀಡಿದ್ದಾರೆ. ಕೂಡಲೇ ಇವರಿಗೆ ಉಳಿದ ಹಣವನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ಸಣ್ಣಸ್ವಾಮಿ ಆಗ್ರಹಿಸಿದರು.

ಸಕಲೇಶಪುರದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ನಡೆದ ಮಾರಾಮಾರಿಗೆ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ವಿದ್ಯಾಶಂಕರ ಹಾಗೂ ಮುಖಂಡ ವೈ.ಪಿ. ರಾಜೇಗೌಡ ಕಾರಣ. ಕಾರ್ಯಕ್ರಮದ ಆಮಂತ್ರಣಪತ್ರದಲ್ಲಿ ಎಲ್ಲ ಪದಾಧಿಕಾರಿಗಳ ಹೆಸರು ಪ್ರಕಟಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದೊಳಗಿನ ವ್ಯವಸ್ಥೆಯಲ್ಲಿದೆ. ಆದರೆ ಇಲ್ಲಿ ತಮಗೆ ಬೇಕಾದವರ ಹೆಸರು ಮಾತ್ರ ಮುದ್ರಿಸಿದ್ದರು. ಇದನ್ನು ನಮ್ಮ ಕಾರ್ಯಕರ್ತರು ಕೇಳಿದಾಗ ಉಡಾಫೆ ಉತ್ತರ ನೀಡಿದರು. ಇದರಿಂದ ಗೊಂದಲ ಸೃಷ್ಟಿಯಾಗಿದೆ.

ಇದು ಅಷ್ಟು ದೊಡ್ಡ ವಿಚಾರವಲ್ಲ. ಆದರೆ ಇದಾದ ಬಳಿಕ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಈ ಮುಖಂಡರು ಹೇಳಿಕೆ ನೀಡುತ್ತಿರುವುದು ಖಂಡನೀಯ. ಘಟನೆ ಬಗ್ಗೆ ಇವರು ಕೆಪಿಸಿಸಿಗೆ ಮಾಹಿತಿ ನೀಡಬಹುದೇ ವಿನಾ ಉಚ್ಚಾಟನೆ ಮಾಡುವ ಅಧಿಕಾರ ವಾಗಲಿ, ಅಂಥ ಹೇಳಿಕೆ ನೀಡುವ ಅಧಿಕಾರವಾಗಿಲಿ ಈ ಮುಖಂಡರಿಗಿಲ್ಲ.
ನಾನು ನಡೆದ ಎಲ್ಲ ವಿಚಾರಗಳನ್ನು ರಾಜ್ಯ ಘಟಕದ ಅಧ್ಯಕ್ಷ ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದೇನೆ.

ಫೆ.20ರಂದು ಕೆಪಿಸಿಸಿಯಿಂದ ಪ್ರತಿನಿಧಿಗಳು ಬಂದು ಇಲ್ಲಿ ಮಾತುಕತೆ ನಡೆಸಲಿದ್ದಾರೆ~ ಎಂದು ಸಣ್ಣಸ್ವಾಮಿ ತಿಳಿಸಿದರು.  ಪಕ್ಷದ ತ್ಲ್ಲಾಲೂಕು ಘಟಕದ ಪದಾಧಿಕಾರಿಗಳಾದ ಸಂಜಯ್ ಹಾಗೂ ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT