ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ: ಕ್ರಮಕ್ಕೆ ಆಗ್ರಹ

Last Updated 8 ಅಕ್ಟೋಬರ್ 2011, 8:05 IST
ಅಕ್ಷರ ಗಾತ್ರ

ಹಾನಗಲ್: ಕ್ಷುಲ್ಲಕ ಕಾರಣಕ್ಕೆ ಗುರು ವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿ ಘಟನೆಯನ್ನು ಖಂಡಿಸಿ ನಗರದ ನಾಗರಿಕರು ಪ್ರತಿ ಭಟನೆ ನಡೆಸಿದರು.

ಘರ್ಷನೆ ನಡೆದ ಹಿನ್ನೆಲೆಯಲ್ಲಿ ಶುಕ್ರ ವಾರ ಹಾನಗಲ್ ಪೋಲಿಸ್ ಠಾಣೆ ಯಲ್ಲಿ ಪರಸ್ಪರ ದೂರು ದಾಖಲಾ ಗಿದ್ದು, ಬೀದಿಗಿಳಿದ ಸಹಸ್ರಾರು ಸಾರ್ವ ಜನಿಕರು ಗಲಭೆಯನ್ನು ಖಂಡಿಸಿ ಮೆರವಣಿಗೆ ನಡೆಸಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ತಪ್ಪಿತಸ್ಥರನ್ನು ಗಡಿ ಪಾರು ಮಾಡುವಂತೆ ಒತ್ತಾಯಿಸಿದರು.

ಗುರುವಾರ ತಡರಾತ್ರಿ ನಡೆದ ಗುಂಪು ಘರ್ಷಣೆಯಿಂದ ಪಟ್ಟಣದಾ ದ್ಯಂತ ಬಿಗುವಿನ ವಾತಾವರಣ ಕಂಡು ಬಂದಿತು. ಈ ನಡುವೆ ಹಲವಾರು ವದಂತಿಗಳು ಸಾರ್ವಜನಿಕರಲ್ಲಿ ಹರಿ ದಾಡುತ್ತಿರುವಾಗಲೇ ಬೆಳಿಗ್ಗೆ ಬೈಕ್‌ಗಳಲ್ಲಿ ಗುಂಪು ಗುಂಪಾಗಿ ಆಗಮಿಸಿದ ಯುವಕರ ದಂಡು ಪಟ್ಟಣದಲ್ಲಿನ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುವಲ್ಲಿ ಯಶಸ್ವಿಯಾದರು. ಇದ ರಿಂದ ಜನಜೀವನ ಅಸ್ಥವ್ಯಸ್ಥವಾಗಿ ಕ್ಷಣಾರ್ಧದಲ್ಲಿ ಅಘೋಷಿತ ಬಂದ್ ಕಂಡು ಬಂದಿತು. ವ್ಯಾಪಾರ ವಹಿ ವಾಟುಗಳು ಸ್ತಬ್ಧವಾದವು.

ನಂತರ ಇಲ್ಲಿನ ಗ್ರಾಮದೇವಿ ಮಂದಿರದ ಆವರಣದಲ್ಲಿ ಸಭೆ ಸೇರಿದ ಹಿರಿಯರು, ಮುಖಂಡರು ಸೇರಿದಂತೆ ನಾಗರಿಕರು ವಿನಾಕಾರಣ ಘರ್ಷಣೆಗೆ, ತ್ವೇಷಮಯ ವಾತಾವರಣಕ್ಕೆ ಕಾರಣ ವಾದ ದುಷ್ಕರ್ಮಿಗಳ ಮೇಲೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಸಮಾಜದ ಅಶಾಂತಿಗೆ ಕಾರಣರಾದ ಆರೋಪಿಗಳನ್ನು ಗಡಿಪಾರು ಮಾಡ ಬೇಕು ಎಂಬ ನಿರ್ಣಯದೊಂದಿಗೆ ಮೆರ ವಣಿಗೆ ನಡೆಸಿ ತಹಸೀಲ್ದಾರ ಕಚೇರಿ ಮತ್ತು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದರು.

ಹಿರಿಯ ಪೊಲೀಸ್ ಅಧಿಕಾರಿಗಳ ಆಶ್ವಾಸನೆಯ ಮೆರೆಗೆ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು.  ನಡೆಯದ ವಾರದ ಸಂತೆ: ಬೆಳಿಗ್ಗೆ ದಿಢೀರ್ ಬಂದ್ ಆಚರಿಸಿದ್ದರಿಂದಾಗಿ ವಾರದ ಸಂತೆಯ ದಿನವಾದ ಶುಕ್ರವಾರ ಪರ ಊರುಗಳಿಂದ ಆಗಮಿಸಿದ ಪ್ರಯಾಣಿಕರು ಮತ್ತು ವಿವಿಧ ಹಳ್ಳಿ ಗಳಿಂದ ಸಂತೆಗಾಗಿ ಬಂದಂತಹ ಗ್ರಾಮ ಸ್ಥರು ಹಾನಗಲ್ ಪಟ್ಟಣ ಬಿಕೋ ಎನ್ನುತ್ತಿರುವುದನ್ನು ಕಂಡು ಆಶ್ಚರ್ಯ ವಾಯಿತಲ್ಲದೆ, ಭೀತಿಯ ಮುಖ ಭಾವದೊಂದಿಗೆ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂದಿತು.

ಪಟ್ಟಣದಲ್ಲಿ ಕೆ.ಎಸ್.ಆರ್.ಪಿ ತುಕ ಡಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸೂಕ್ಷ್ಮಸ್ಥಳಗಳಲ್ಲಿ ಪೊಲೀಸ್ ವಾಹನ ಗಳನ್ನು ನಿಲ್ಲಿಸಲಾಗಿದೆ.

ಹಿರಿಯ ಅಧಿಕಾರಿಗಳಾದ ಎಎಸ್.ಪಿ ಎಂ.ಎಂ.ಅಗಡಿ, ಡಿ.ವೈ.ಎಸ್.ಪಿ      ವಿ.ಎ. ಪೂಜಾರ ಪಟ್ಟಣದಲ್ಲಿ ಮೊಕ್ಕಾಂ ಹೂಡಿ, ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದಾರೆ. 

ಒಂದು ಗುಂಪಿನ 25ಕ್ಕೂ ಅಧಿಕ ವ್ಯಕ್ತಿಗಳ ಮೇಲೆ ದೂರು ದಾಖಲಾ ಗಿದ್ದರೆ ಇನ್ನೊಂದು ಗುಂಪಿನ 17 ಜನರ ಮೇಲೆ ದೂರು ದಾಖಲಿಸಲಾಗಿದೆ. ನಾಲ್ವರನ್ನು ಈಗಾಗಲೇ ಬಂಧಿಸಲಾ ಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT