ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣ

Last Updated 25 ಜೂನ್ 2011, 5:05 IST
ಅಕ್ಷರ ಗಾತ್ರ

ಬಳ್ಳಾರಿ: ಸ್ವಂತ ನಿವೇಶನ ಹೊಂದಿ ಅದರಲ್ಲಿ ಗುಡಿಸಲು ಕಟ್ಟಿಕೊಂಡಿರುವ ನಗರದ ಬಡ ಜನತೆಗೆ ರೂ 1.30 ಲಕ್ಷ ವೆಚ್ಚದಲ್ಲಿ ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.

ನಗರದಲ್ಲಿ ಗುರುವಾರ ಮಹಾನಗರ ಪಾಲಿಕೆಯ ಬಡತನ ನಿರ್ಮೂಲನಾ ಕೋಶವು ಏರ್ಪಡಿಸಿದ್ದ ಸಮಾರಂಭದಲ್ಲಿ `ನಮ್ಮ ಮನೆ ಹಾಗೂ ವಾಜಪೇಯಿ ನಗರ ಯೋಜನೆ ಅಡಿ ಮನೆ ನಿರ್ಮಾಣ ಕ್ಕಾಗಿ ಆಯ್ಕೆಯಾದ  ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

ನಗರದಲ್ಲಿ ಇಂಥ ಬಡವರಿಂದ 4 ಸಾವಿರ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1922   ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುವುದು. ಉಳಿದ ವರಿಗೆ ನಂತರ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರಸ್ತುತ ರೂ 15 ಸಾವಿರ ಮೌಲ್ಯದ ಚೆಕ್ ನೀಡಲಾಗುತ್ತಿದ್ದು,  ಕಾಮಗಾರಿ ಪ್ರಗತಿಯನ್ನು ಆಧರಿಸಿ, ಹಂತಹಂತವಾಗಿ ಮಿಕ್ಕ ಹಣ ನೀಡಲಾಗುವುದು. ರೂ 1.30 ಲಕ್ಷ ಅನುದಾನದಲ್ಲಿ ರೂ 70 ಸಾವಿರ ಸಹಾಯಧನ ನೀಡಲಾಗು ವುದು. ರೂ 50 ಸಾವಿರದಷ್ಟು ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗುವುದು. ಉಳಿದ 10 ಸಾವಿರವನ್ನು ಫಲಾನುಭವಿ ಗಳೇ ಭರಿಸಬೇಕು ಎಂದರು.

ಮೇಯರ್ ಪಾರ್ವತಿ, ಉಪ ಮೇಯರ್ ಶಶಿಕಲಾ ಉಪಸ್ಥಿತರಿದ್ದರು. ಪೌರಾಯುಕ್ತ ಡಿ.ಎಲ್. ನಾರಾಯಣ ಸ್ವಾಗತಿಸಿದರು. ಬಾಲಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT