ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡಾಪುರ ಜಾತ್ರೆಗೆ ಭಕ್ತರ ದಂಡು

Last Updated 3 ಡಿಸೆಂಬರ್ 2013, 8:44 IST
ಅಕ್ಷರ ಗಾತ್ರ

ವಿಜಾಪುರ: ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಗುಡ್ಡಾಪುರದ ದಾನಮ್ಮ ದೇವಿಯ ಜಾತ್ರೆ ಆರಂಭಗೊಂಡಿದೆ. ಮೂರು ದಿನಗಳ ಜಾತ್ರೆಯಲ್ಲಿ ಸೋಮವಾರ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ವಿಜಾಪುರ, ಬಾಗಲಕೋಟೆ, ಬೆಳ ಗಾವಿ, ಯಾದಗಿರಿ, ಗುಲ್ಬರ್ಗ ಮತ್ತಿತರ ಜಿಲ್ಲೆ ಹಾಗೂ ಮಹಾ ರಾಷ್ಟ್ರದ ವಿವಿಧೆಡೆಯಿಂದ ಪಾದಯಾತ್ರೆಯಲ್ಲಿ ಆಗಮಿಸಿರುವ ಬಹುತೇಕ ಭಕ್ತರು, ಗುಡ್ಡಾಪುರದಲ್ಲಿಯೇ ಬೀಡು ಬಿಟ್ಟಿ ದ್ದಾರೆ. ದೇವಿಯ ದರ್ಶನ ಪಡೆದು ವಾಪಸ್ಸಾಗುತ್ತಿರುವ ಭಕ್ತರ ಸಂಖ್ಯೆಯೂ ಅಧಿಕವಾಗಿದೆ.

ಸೋಮವಾರ ರಾತ್ರಿ ಭಕ್ತರಿಂದ ಸಾಮೂಹಿಕ ಕಾರ್ತಿಕೋತ್ಸವ, ನಂತರ ಪಲ್ಲಕ್ಕಿ ಉತ್ಸವ ನಡೆಯಿತು. ಮಂಗಳ ವಾರ (ಇದೇ 3ರಂದು) ಮಧ್ಯಾಹ್ನ 3ಕ್ಕೆ ರಥೋತ್ಸವ ನಡೆಯಲಿದೆ.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚು. ಭಾನುವಾರ  ಅಂದಾಜು ಐದು ಲಕ್ಷ ಭಕ್ತರು ದೇವಿಯ ದರ್ಶನ ಪಡೆದರು. ಸೋಮವಾರ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದರು’ ಎಂದು ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದ ಆಡಳಿತಾಧಿಕಾರಿ ಜಿ.ಡಿ. ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಮಲಗಿಕೊಳ್ಳಲು ಅನುಕೂಲವಾ ಗುವಂತೆ ಅಂದಾಜು ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾದ ಶಾಮಿ ಯಾನ ಹಾಕಲಾಗಿದೆ. ಎಲ್ಲ ಕಲ್ಯಾಣ ಮಂಟಪ, ಧರ್ಮಶಾಲೆಗಳಲ್ಲಿಯೂ ಭಕ್ತರಿಗೆ ಅವಕಾಶ ಕಲ್ಪಿಸ ಲಾಗಿದೆ’ ಎಂದು ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಸದಾಶಿವ ಗುಡ್ಡೋಡಗಿ ಹೇಳಿದರು.

‘10,000 ಜನರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಸಜ್ಜಕ, ಅನ್ನ–ಸಾರು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಭಕ್ತರಿಗೆ ಆತಿಥ್ಯ:  ಭಕ್ತರು ಪಾದ ಯಾತ್ರಿಕರಿಗೆ ಚಹಾ, ಕಾಫಿ, ನೀರು, ಹಣ್ಣು, ಉಪಾಹಾರ, ಊಟದ ವ್ಯವಸ್ಥೆ ಮಾಡಿರುತ್ತಾರೆ. ಬಿಸಿನೀರು, ಔಷಧಿ ಹಾಗೂ ವೈದ್ಯರ ಸೇವೆಯೂ ಅವರಿಗೆ ಲಭ್ಯವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT