ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಕಳೆದುಕೊಳ್ಳುತ್ತಿರುವ ಮಕ್ಕಳ ಚಿತ್ರಗಳು

`ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ'ದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ವಿಷಾದ
Last Updated 9 ಜನವರಿ 2013, 20:59 IST
ಅಕ್ಷರ ಗಾತ್ರ

ಬೆಂಗಳೂರು:  `ಹಿಂದಿನ ಮಕ್ಕಳ ಚಿತ್ರಗಳು ಗುಣಮಟ್ಟದಿಂದ ಕೂಡಿರುತ್ತಿದ್ದವು. ಆದರೆ, ಇಂದಿನ ಮಕ್ಕಳ ಚಿತ್ರಗಳು ಗುಣಮಟ್ಟವನ್ನು ಕಳೆದುಕೊಳ್ಳುತ್ತಿವೆ' ಎಂದು ಹಿರಿಯ ನಟಿ ಬಿ.ಸರೋಜಾದೇವಿ ವಿಷಾದಿಸಿದರು.

ಚಿಲ್ಡ್ರನ್ಸ್ ಇಂಡಿಯಾ ನಗರದಲ್ಲಿ ಬುಧವಾರ ಆಯೋಜಿಸಿದ್ದ `ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ'ದಲ್ಲಿ ಭಾಗವಹಿಸಿ  ಮಾತನಾಡಿದರು.
ನಾವು ಒಳ್ಳೆಯ ಚಿತ್ರಗಳನ್ನು ನೋಡಿ ನಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡು ಈ ಹಂತಕ್ಕೆ ಬಂದಿದ್ದೇವೆ. ಆದರೆ, ಇಂದಿನ ಮಕ್ಕಳಿಗೆ ಒಳ್ಳೆಯ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡು ಬೆಳೆಯಲು ಸಹಾಯಕವಾಗುವಂತಹ ಚಿತ್ರಗಳು ಮೂಡಿಬರುತ್ತಿಲ್ಲ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಕಲೆಯ ಬಗ್ಗೆ ಹೇಳಿಕೊಡಬೇಕು. ಅದರಲ್ಲೂ ಅಭಿನಯದ ಬಗ್ಗೆ ಅವರಿಗೆ ತಿಳಿಸಿಕೊಡಬೇಕು. ಆಗಲೇ ಅವರು ತಮ್ಮ ವ್ಯಕ್ತಿತ್ವದಲ್ಲಿ ಕಲೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, ಈ ಮಕ್ಕಳನ್ನು ನೋಡಿದರೆ, ನನಗೆ ಬಾಲ್ಯ ನೆನಪಾಗುತ್ತದೆ. ನನ್ನ ನೆಚ್ಚಿನ ಬಾಲ ನಟ ಮಾಸ್ಟರ್ ಮಂಜುನಾಥ್ ಆಗಿದ್ದರು. ಅವರು `ಮಾಲ್ಗುಡಿ ಡೇ' ನಲ್ಲಿ ಅಭಿನಯಸಿದ ನಟನೆ ಅದ್ಭುತವಾಗಿತ್ತು ಎಂದರು.

ಮಯೂರವರ್ಮ ಅಥವಾ ಶ್ರೀಕೃಷ್ಣದೇವರಾಯನ ಕಾರ್ಟೂನ್ ಚಿತ್ರಗಳನ್ನು ಮಾಡಲು ಮುಂದಾದರೆ, ಅದಕ್ಕೆ ಬೇಕಾದ ನೆರವನ್ನು ಕೊಡುತ್ತೇನೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಒಳ್ಳೆಯ ಗುಣಮಟ್ಟದ ಚಲನಚಿತ್ರಗಳು ಮೂಡಿಬಂದು ಮಕ್ಕಳಲ್ಲಿ ಒಳ್ಳೆಯ ಗುಣವನ್ನು ಬಿತ್ತಬೇಕು. ಮಕ್ಕಳು ಇಂದಿನ ಚಲನಚಿತ್ರಗಳನ್ನು ನೋಡಿ ತಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುವಂತಾಗಬೇಕು ಎಂದರು.

ಚಿಲ್ಡ್ರನ್ಸ್ ಇಂಡಿಯಾ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಒಳ್ಳೆಯ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಆಗ ಸರ್ಕಾರದ ಸಹಕಾರವೂ ದೊರೆಯುತ್ತದೆ. ಉತ್ಸವವು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿ.ಸರೋಜಾದೇವಿ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಲನಚಿತ್ರೋತ್ಸವವು ಜ. 13 ರವರೆಗೆ ನಡೆಯಲಿದೆ. ಚಲನಚಿತ್ರಗಳ ಪ್ರದರ್ಶನವು ಒರಾಯನ್ ಮಾಲ್, ಬಾದಾಮಿ ಹೌಸ್, ಬಾಲಭವನ ಮತ್ತು ಮೇನಕಾ ಥಿಯೇಟರ್‌ನಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT