ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ವಿದ್ಯುತ್‌ಗೆ ಒತ್ತಾಯ

Last Updated 21 ಮಾರ್ಚ್ 2011, 7:30 IST
ಅಕ್ಷರ ಗಾತ್ರ

ಕೊಪ್ಪ: ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿರು ವುದರಿಂದ ಕುಡಿಯುವ ನೀರು ಸರಬ ರಾಜು ದುಸ್ಥರವಾಗಿದ್ದು, ಕುಡಿಯುವ ನೀರಿನ ಸರಬರಾಜಿಗೆ ಅನುಕೂಲ ವಾಗುವಂತೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ, ಮೆಸ್ಕಾಂ ಸಹಾಯಕ ಎಂಜಿನಿಯರ್ ಅಶೋಕ್ ಕುಮಾರ್ ಅವರಿಗೆ ಪ.ಪಂ.ಅಧ್ಯಕ್ಷ ಕಿಶೋರ್ ಪೇಜಾವರ್ ನೇತೃತ್ವದ ಪ.ಪಂ ಸದಸ್ಯರ ನಿಯೋಗ ಶನಿವಾರ ಮನವಿ ಅರ್ಪಿಸಿತು.

 ಪಟ್ಟಣದ ಕುಡಿಯುವ ನೀರಿನ ಸರಬರಾಜಿಗೆ ಅಡ್ಡಿಯಾಗದಿರಲಿ ಎಂಬ ಕಾರಣಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡಲು ರೂ.11ಲಕ್ಷ ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿದ್ದರೂ ಗುಣಾತ್ಮಕ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂದು ದೂರಿದ ನಿಯೋಗ, ಪಟ್ಟಣದ ಕುಡಿಯುವ ನೀರಿನ ಸರಬರಾಜಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಸದಿದ್ದಲ್ಲಿ ಸರ್ಕಾರಕ್ಕೆ ಪಂಚಾಯಿತಿ ವಿಶೇಷ ದೂರು ಸಲ್ಲಿಸಲಿದೆ ಎಂದು ಎಚ್ಚರಿಸಲಾಯಿತು.

 ಮೆಸ್ಕಾಂ ಸಹಾಯಕ ಎಂಜಿನಿಯರ್ ಅಶೋಕ್ ಕುಮಾರ್ ಸ್ಪಷ್ಟನೆ ನೀಡಿ, ವಿದ್ಯುತ್ ಅಭಾವ ಎಲ್ಲಾ ಸಮಸ್ಯೆಗಳ ಮೂಲವಾಗಿದ್ದು ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಪ.ಪಂ. ಉಪಾಧ್ಯಕ್ಷೆ ವನಜ ತಂಗವೇಲು, ಸದಸ್ಯರಾದ ಕೆ.ವೈ.ರಮೇಶ್, ಉಮೇ ಶ್ ಶೇಟ್, ಜಯಶ್ರೀ ನವಿ ಲೇಕರ್, ವಾಣಿ ಸತೀಶ್, ಸುಶೀಲ, ಅನು ಸೂಯ, ದಿವಾಕರ್, ಶ್ರೀಪತಿ ಪ್ರಭು ಇದ್ದರು.

ವಿದ್ಯುತ್ ವ್ಯತ್ಯಯ ಆಕ್ರೋಶ
ಆಲ್ದೂರು: ಕಳೆದೊಂದು ತಿಂಗಳಿನಿಂದ ಆಲ್ದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಇಲ್ಲಿನ ಮೆಸ್ಕಾಂ ಕಚೇರಿಯ ಅಧಿಕಾರಿಗಳು ಮನಬಂದಂತೆ ವಿದ್ಯುತ್ ಕಡಿತಗೊಳಿಸುತ್ತಿದ್ದು ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಶಾಲಾ ಮಕ್ಕಳಿಗೆ, ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದು ಪಟ್ಟ ಣದ ನಾಗರಿಕರು ಆರೋಪಿಸಿದ್ದಾರೆ.

ಮೆಸ್ಕಾಂ ಅಧಿಕಾರಿಗಳು ಕಳೆದ ತಿಂಗಳಿನಿಂದ ಪ್ರತಿದಿನ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತ ಗೊಳಿಸುತ್ತಿರುವುದರಿಂದ ಪಟ್ಟಣದ ವ್ಯಾಪಾರಿಗಳಿಗೆ ನಷ್ಟ ವಾಗುತ್ತಿದ್ದು ಪ್ರತಿದಿನ ಅಂಗಡಿ ಮುಚ್ಚುವಂತಾಗಿದೆ. ನೀರು ಪೂರೈಕೆಗೂ ತೊಂದರೆ ಯಾಗಿದ್ದು ಪರದಾಡು ವಂತಾಗಿದೆ. ಪರೀಕ್ಷಾ ದಿನ ಮಕ್ಕಳಿಗೆ ಓದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೆಸ್ಕಾಂ ಕಚೇರಿ ಅಧಿಕಾರಿಗಳನ್ನು ವಿಚಾರಿಸಿದರೆ  ಸಮರ್ಪಕ ಉತ್ತರ ನೀಡದೇ ಸತಾಯಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿದ್ಯುತ್ ಕಡಿತ ಮಾಡುವ ವೇಳೆಯನ್ನು ಪ್ರತಿದಿನ ಸಾರ್ವಜನಿಕರಿಗೆ ಮುನ್ಸೂಚನೆ ನೀಡಬೇಕು ಹಾಗೂ ಪರೀಕ್ಷೆ ಮುಗುಯುವವರೆಗೆ ಶಾಲಾ ಮಕ್ಕಳ ವಿದ್ಯುತ್ ಕಡಿತ ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಅನಿಯ ಮಿತ ವಿದ್ಯುತ್ ಕಡಿತ ಮುಂದು ವರೆದಲ್ಲಿ ಕೆಇಬಿಗೆ ಸಾರ್ವಜನಿಕರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭ ಟಿಸುವುದಾಗಿ ಜೆಡಿಎಸ್‌ನ ಮೊಹ ಮ್ಮದ್ ಆಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT