ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ ಅಗತ್ಯ

Last Updated 3 ಸೆಪ್ಟೆಂಬರ್ 2011, 6:40 IST
ಅಕ್ಷರ ಗಾತ್ರ

ಹುಕ್ಕೇರಿ: ಶಿಕ್ಷಕರ ಹಿತ ಕಾಪಾಡುವಲ್ಲಿ ಸ್ಥಾಪನೆಗೊಂಡಿರುವ ಶಾಲಾ ನೌಕರರ ಮತ್ತು ಪತ್ತಿನ ಸಹಕಾರಿ ಸಂಘಗಳ ಕಾರ್ಯ ಚಟುವಟಿಕೆಗಳು ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ ಕೂಡಾ ಸಕ್ರೆಯವಾಗಿ ಇರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಜಾನನ ಮನ್ನಿಕೇರಿ ಹೇಳಿದರು.

ಅವರು ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘ ಮತ್ತು ಪತ್ತಿನ ಸಹಕಾರಿ ಸಂಘ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನೌಕರರ ಸಂಘದ ಅಧ್ಯಕ್ಷ ಎಸ್.ಐ. ಸಂಬಾಳ, ಪತ್ತಿನ ಸಂಘದ ಅಧ್ಯಕ್ಷ ಪಿ.ಎಸ್. ಹತ್ತಿ, ಉಪಾಧ್ಯಕ್ಷ ಬಿ.ಕೆ. ಯರಗಟ್ಟಿ ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ತೇರದಾಳ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಬಿ. ಗುಡಸಿ, ಎಸ್.ಕೆ. ದೇವರ್ಸಿ, ಎಸ್.ಜೆ. ಕುಪ್ಪಾನಟ್ಟಿ, ಎಸ್.ಆರ್. ಮಾನವಾಡಿ, ಎನ್.ಬಿ. ಪರಮಾಜ, ಎಲ್.ಎಸ್. ಹಳೆಗೌಡರ, ಪ್ರಾಚಾರ್ಯ ಜೆ.ಎಂ. ಹವಾಲ್ದಾರ, ವೈ.ಆರ್. ಕಟ್ಟಿಮನಿ, ಡಿ.ಆರ್. ಕುಲಕರ್ಣಿ, ಎಸ್.ಸಿ. ಮಾನಗಾಂವಿ, ಎಸ್.ಎಸ್. ಕುದನೂರಿ, ಎಸ್.ಎಸ್. ಹಿರೇಮಠ, ಎಸ್.ಬಿ. ಶಿವಮೊಗ್ಗಿಮಠ ಉಪಸ್ಥಿತರಿದ್ದರು. ಎಂ.ಎಸ್. ಹಿರೇಕೋಡಿ ಸ್ವಾಗತಿಸಿದರು. ಜಿ.ಎಸ್. ಹಿರೇಕೋಡಿ ನಿರೂಪಿಸಿದರು. ಬಿ.ಬಿ. ಪಾಟೀಲ ವಂದಿಸಿದರು.

ಸಹಕಾರ ಬೇಕು: ಐಹೊಳೆ
ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಸರಕಾರ ಜಾರಿಗೊಳಿಸುವ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಸ್ವಾವಲಂಬನೆಯತ್ತ ಸಾಗಬೇಕು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ತಾಲ್ಲೂಕಿನ ಇಟ್ನಾಳ, ಡೋಣವಾಡ, ಬಂಬಲವಾಡ, ಕರೋಶಿ, ಮುಗಳಿ, ವಡ್ರಾಳ ಮುಂತಾದ ಗ್ರಾಮಗಳಲ್ಲಿ ಒಟ್ಟು 50.50 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡುತ್ತಿದ್ದರು.

ರಸ್ತೆ ಕಾಮಗಾರಿಗಳ ಗುಣಮಟ್ಟದ ಉಸ್ತುವಾರಿಯನ್ನು ಗ್ರಾಮಸ್ಥರು ವಹಿಸಿಕೊಂಡು ಉತ್ತಮವಾದ ರಸ್ತೆಗಳನ್ನು ನಿರ್ಮಿಸಿಕೊಳ್ಳಬೇಕು. ಕಾಮಗಾರಿ ಕಳಪೆ ಮಟ್ಟದಿಂದ ನಡೆಯದಂತೆ ಮುಂಜಾಗೃತೆ ವಹಿಸಬೇಕು ಎಂದು ಹೇಳಿದರು. ಜಿ.ಪಂ ಸದಸ್ಯ ಮಹೇಶ ಭಾತೆ, ತಾ.ಪಂ ಅಧ್ಯಕ್ಷ ಬಾಜಿರಾವ ಮಾದಿಗ, ಸದಸ್ಯ ಬಾಳಪ್ಪಾ ಬಾನಿ, ಮಾಳಿಂಗೆ, ಸಂತ್ರಾಮ ಕುಂಡ್ರುಕ್, ಮುರಿಗೆಪ್ಪಾ ಅಡಿಸೇರಿ, ದುಂಡಪ್ಪಾ ಬೆಂಡವಾಡೆ, ಲಕ್ಷ್ಮಣ ಪೂಜಾರಿ, ಅಜಿತ ಪಾಟೀಲ, ಅಣ್ಣಾಸಾಹೇಬ ಘರಬುಡೆ, ಎಂಜಿನಿಯರ್ ವಿ.ಬಿ. ಸಂಗಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT