ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ವಕೀಲರ ಸಂಖ್ಯೆ ಹೆಚ್ಚಾಗಲಿ: ನ್ಯಾಯಾಧೀಶ

Last Updated 18 ಡಿಸೆಂಬರ್ 2012, 10:38 IST
ಅಕ್ಷರ ಗಾತ್ರ

ಯಳಂದೂರು: `ಸಮಾಜದ ಮುಖ್ಯ ಅಂಗಗಳಲ್ಲಿ ವಕೀಲರ ಪಾತ್ರವೂ ಮುಖ್ಯವಾಗಿದೆ. ಸಮಾಜಕ್ಕೆ ಇವರ ಕೊಡುಗೆ ಅನನ್ಯವಾಗಿದೆ. ಹಾಗಾಗಿ ಗುಣಾತ್ಮಕ ವಕೀಲರ ಸಂಖ್ಯೆ ಹೆಚ್ಚಾಗಬೇಕು' ಎಂದು ಸಿವಿಲ್ ನ್ಯಾಯಾಧೀಶ ಎಚ್.ಆರ್.ರವಿಕುಮಾರ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಚೆಗೆ ಕಾನೂನು ಪದವಿ ಪಡೆದವರು ಬೇರೆ ಕ್ಷೇತ್ರಗಳನ್ನು ಆರಿಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ. ಹಾಗಾಗಿ ಮುಂದೊಂದು ದಿನ ಇವರ ಸಂಖ್ಯೆ ಕ್ಷೀಣಿಸುವ ಸಾಧ್ಯತೆಯೂ ಇದೆ ಎಂದರು.

ಹಿರಿಯ ವಕೀಲರಾದ ಪುಟ್ಟನಂಜಯ್ಯ, ಎಂ. ಮಾದೇಶ್, ಉಮ್ಮತ್ತೂರು ಇಂದುಶೇಖರ್, ಅಧ್ಯಕ್ಷ ಚಿನ್ನಸ್ವಾಮಿ, ವಿದ್ಯಾಲತಾ, ನಾಗಲಕ್ಷ್ಮಿ, ಎನ್. ನಾಗರಾಜು, ಕಾರ್ಯದರ್ಶಿ ಎಂ. ಜಯಶಂಕರ್, ನವೀನ್ ಇತರರು ಹಾಜರಿದ್ದರು. ವಕೀಲರಾದ ಎಂ. ಶಿವರಾಮು, ಮಹಾಲಿಂಗ ಗಿರ್ಗಿ, ಮಂಜುನಾಥ್ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT