ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆಯಿರಲಿ

Last Updated 8 ಅಕ್ಟೋಬರ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು: `ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಿಂದಲೇ ಪರಿಹಾರ. ಹಾಗಾಗಿ ಗುಣಾತ್ಮಕ ಹಾಗೂ ಮೌಲ್ಯಯುತ ಶಿಕ್ಷಣ ನೀಡಿಕೆಗೆ ಆದ್ಯತೆ ನೀಡಬೇಕು~ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.

ಪಿಇಎಸ್ ಕಾಲೇಜು ನಗರದ ಬನಶಂಕರಿ 3ನೇ ಹಂತದಲ್ಲಿರುವ ಪಿಇಎಸ್ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಶಿಕ್ಷಣ ಮತ್ತು ಮಾನವ ಅಭ್ಯುದಯ~ ವಿಷಯ ಕುರಿತು ಅವರು ಮಾತನಾಡಿದರು.

`ವಿದ್ಯಾರ್ಥಿಗಳಿಗೆ ಅಂಕ ಗಳಿಸುವುದೇ ಗುರಿಯಾಗಬಾರದು. ಅದೃಷ್ಟ ನೆಚ್ಚಿಕೊಂಡು ಜೀವನದಲ್ಲಿ ಯಾವುದೇ ಸಾಧನೆ ಮಾಡಲಾಗದು. ಶೇ 99ರಷ್ಟು ಪರಿಶ್ರಮವಿರಬೇಕು. ಶೇ 1ರಷ್ಟು ಸ್ಫೂರ್ತಿ ಹೊಂದಿದ್ದರೆ ಉದ್ದೇಶಿತ ಗುರಿ ತಲುಪಲು ಸಾಧ್ಯ~ ಎಂದರು.

`ಯುವ ಜನತೆ ಸಣ್ಣ ಪುಟ್ಟ ಗುರಿ ಇಟ್ಟುಕೊಳ್ಳಬಾರದು. ಬದಲಿಗೆ ಮಹತ್ವದ ಗುರಿ ಹೊಂದಿರಬೇಕು. ಆಸೆ ಪಡುವುದು ತಪ್ಪಲ್ಲ. ಆದರೆ ಪಡುವ ಆಸೆಯಲ್ಲಿ ಪಾವಿತ್ರ್ಯವಿರಬೇಕು. ಅದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು~ ಎಂದು ಹೇಳಿದರು.

`ಉತ್ತಮ ಚಾರಿತ್ರ್ಯ ರೂಪಿಸುವ, ಮಾನಸಿಕ ಶಕ್ತಿ ಹೆಚ್ಚಿಸುವ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಹಾಗೂ ಸ್ವಾವಲಂಬನೆ ಸಾಧಿಸಲು ಪೂರಕವಾದ ಅಂಶಗಳನ್ನು ನೀಡುವುದೇ ಶಿಕ್ಷಣ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕು~ ಎಂದರು.

`ಕೇವಲ ಶಿಕ್ಷಣ ನೀಡಿಕೆಯಿಂದ ಉತ್ತಮ ಪ್ರಜೆಗಳು ರೂಪುಗೊಳ್ಳುವುದಿಲ್ಲ. ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಶಿಕ್ಷಿತರೇ ಹೆಚ್ಚು ಅಕ್ರಮಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಮೌಲ್ಯಯುತ ಜೀವನ ನಡೆಸುವುದನ್ನು ಕಲಿಸಬೇಕು~ ಎಂದು ಹೇಳಿದರು.

ಪಿಇಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ರಹ್ಮಣ್ಯ, ಪಿಇಎಸ್ ಪದವಿಪೂರ್ವ ಕಾಲೇಜಿನ ನಿರ್ದೇಶಕ ಸತ್ಯನಾರಾಯಣ, ಪ್ರಾಧ್ಯಾಪಕ ಟಿ.ಆರ್.ಸೀತಾರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT