ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಲ-ಲಕ್ಷ್ಮೇಶ್ವರ: ಹದಗೆಟ್ಟ ರಸ್ತೆ

Last Updated 6 ಜುಲೈ 2012, 8:45 IST
ಅಕ್ಷರ ಗಾತ್ರ

ಗುತ್ತಲ : ಹಾವೇರಿ ಮತ್ತು ಶಿರಹಟ್ಟಿ ತಾಲ್ಲೂಕುಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಗುತ್ತಲ ಮತ್ತು ಲಕ್ಷ್ಮೇಶ್ವರ ರಸ್ತೆ ನಿರ್ಮಾಣ ಮಾಡಿ ಒಂದು ವರ್ಷ ಗತಿಸಿಲ್ಲ ಆಗಲೇ ರಸ್ತೆ ಹದಗೆಟ್ಟು ಹೋಗುತ್ತಿದೆ. 

 ಬೊಮ್ಮನ ಕಟ್ಟಿ ಕ್ರಾಸ್ ದಾಟಿ ನೆಗಳೂರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ  ಅರ್ಧ ಕೀಮಿ ಸಾಗಿದರೆ ಸಾಕು ರಸ್ತೆಯಲ್ಲಿ ಬೃಹ ದಾಕಾರದ  ತಗ್ಗು ದಿನ್ನೆಗಳು ಕಾಣ ಸಿಗುತ್ತಿವೆ. ಒಂದೇ ಒಂದು ಕಡೆಯಾದರೆ ಹೋಗಲಿ ಬಿಡಿ ಎನ್ನಬಹುದು, ಆದರೆ ಸುಮಾರು ಕಡೆ ತಗ್ಗು ದಿನ್ನೆಗಳು ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಯುಂಟಾಗಿದೆ.
ಒಂದು ದಿನಕ್ಕೆ ಏನಿಲ್ಲವಾದರೂ ನೂರಕ್ಕೂ ಹೆಚ್ಚು ಸರ್ಕಾರಿ ವಾಹನ ಗಳೂ ಮತ್ತು ನೂರಕ್ಕೂ ಹೆಚ್ಚು ಖಾಸಗಿ ವಾಹನಗಳು ಓಡಾಡುವ ಈ ರಸ್ತೆ ಕಳೆದ ವರ್ಷದಲ್ಲಿ ಹದಗೆಟ್ಟು ಹೋಗಿತ್ತು.

ನೆಗಳೂರ ಮತ್ತು ಗುತ್ತಲ ಸಾರ್ವಜನಿಕರ ವಿನಂತಿಗೆ ಎಚ್ಚುತ್ತು ಗೊಂಡ ಲೋಕೋಪಯೋಗಿ ಇಲಾಖೆ ಕಳೆದ ವರ್ಷ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಮಗಾರಿಯ ಕೆಲಸವನ್ನು ಮಾಡಿರುವುದು ಸ್ವಾಗ ತಾರ್ಹ ಆದರೆ ದುರಸ್ತಿಯಾದ  ರಸ್ತೆ  ಕೆಲವೇ ದಿನಗಳಲ್ಲಿ ಅವನತಿಯತ್ತ ಸಾಗುತ್ತಿರುವುದು ನೆಗಳೂರ ಮತ್ತು ಗುತ್ತಲ ಗ್ರಾಮಸ್ಥರನ್ನು ಕೆರಳಿಸಿದೆ ಅಲ್ಲದೇ ವಾಹನ ಚಾಲಕರಿಗೂ ಏನೂ ತೋಚದಂತಾಗಿದೆ.
ಮಳೆಗಾಲದ ವೇಳೆಯಲ್ಲಿ ರಸ್ತೆ ಹದಗೆಟ್ಟು ಹೋದರೆ ರಸ್ತೆಯಲ್ಲಿ ವಾಹನಗಳು ಓಡಾಡುವಾದರೂ ಹೇಗೆ ಎಂದು ಸಾರ್ವಜನೀಕರ ಪ್ರಶ್ನೆಯಾಗಿದೆ.

ರಸ್ತೆ ನಿರ್ಮಾಣವಾಗಿ ಡಾಂಬರೀ ಕರಣ ವಾಗಿರುವುದು ಸಂತೋಷಕರ ವಿಷಯವಾದರೂ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರದಾರರು ಗುಣಮಟ್ಟದ ಕಚ್ಚಾ ವಸ್ತುಗಳನ್ನು ಉಪ ಯೋಗಿಸದೇ ರಸ್ತೆ ನಿರ್ಮಾಣ ಮಾಡಿರುವುದರಿಂದ ರಸ್ತೆ ಹಾಳಾಗು ವುದಕ್ಕೆ ಕಾರಣವಾಗಿದೆ ಎಂದು  ಆರೋಪಿಸುತ್ತಾರೆ ನೆಗಳೂರ ಗ್ರಾಮದ ಅಶೋಕಣ್ಣ ತಳವಾರ. ಅಧಿಕಾರಿಗಳು ನಿರ್ಲಕ್ಷವೂ ಇದಕ್ಕೆ ಹೊರತಲ್ಲ ಎಂಬ ಮಾತನ್ನು ಹೇಳುತ್ತಾರೆ.
ಸಂಬಂಧಿಸಿದ ಅಧಿಕಾರಿಗಳು ಇನ್ನೂ ಹೆಚ್ಚಾಗಿ ಈ ರಸ್ತೆ ಹಾಳಾಗುವುದನ್ನು ತಡೆಗಟ್ಟಲು ಶ್ರಮೀಸುವರೇ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT