ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಪೌರ ಕಾರ್ಮಿಕ ಸಾವು: ಬಿಬಿಎಂಪಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಕೆಂಗೇರಿ: ಅಂಜನಾ ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಹಾವು ಕಚ್ಚಿದ್ದರಿಂದ ಮೃತಪಟ್ಟ ಗುತ್ತಿಗೆ ಪೌರ ಕಾರ್ಮಿಕ ಎ.ನರಸಿಂಹಯ್ಯ ಅವರ ಶವವನ್ನು ಬಿಬಿಎಂಪಿ ಕಚೇರಿ ಮುಂದೆ ಇಟ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

`ನಾಲ್ಕು ದಿನಗಳ ಹಿಂದೆ ಕಸ ತೆಗೆಯುವಾಗ ನರಸಿಂಹಯ್ಯ ಅವರಿಗೆ ಮಂಡಲದ ಹಾವು ಕಚ್ಚಿತು. ತಕ್ಷಣ ವಿಷಯ ತಿಳಿಸಿದರೂ ಗುತ್ತಿಗೆದಾರರು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಯಾರೊಬ್ಬರೂ ಚಿಕಿತ್ಸೆ ಕೊಡಿಸಲು ಬರಲಿಲ್ಲ. ಪರಿಣಾಮ ಚಿಕಿತ್ಸೆ ದೊರಕದೇ ನರಸಿಂಹಯ್ಯ ಮೃತಪಟ್ಟರು~ ಎಂದು ಪ್ರತಿಭಟನಾ ನಿರತ ಪೌರ ಕಾರ್ಮಿಕರು ದೂರಿದರು.

`ಸ್ವಚ್ಛತಾ ಕಾರ್ಯ ಕೈಗೊಳ್ಳುವಾಗ ಧರಿಸಬೇಕಾದ ಸುರಕ್ಷಾ ಕವಚಗಳನ್ನು ನೀಡಿರಲಿಲ್ಲ. ಊರಿನ ಸ್ವಚ್ಛತೆ, ಆ ಮೂಲಕ ನಾಗರಿಕರ ಆರೋಗ್ಯಕ್ಕೆ ಶ್ರಮಿಸುವ ಪೌರ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸರ್ಕಾರ ಇನ್ನಾದರೂ ಪೌರ ಕಾರ್ಮಿಕರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು~ ಎಂದು ಆಗ್ರಹಿಸಿದರು.

ಗುತ್ತಿಗೆ ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಗೌರಿ ಮಾತನಾಡಿ, `ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಮೃತರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಪರಿಹಾರ ನೀಡಬೇಕು. ಇ್ಲ್ಲಲವಾದರೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ~ ಎಂದು ಎಚ್ಚರಿಸಿದರು.

ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

ಪೌರ ಕಾರ್ಮಿಕರಾದ ಮುನಿಯಮ್ಮ, ಬೋರಯ್ಯ, ಜಯಮ್ಮ, ನಿರ್ಮಲಾ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT