ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರಿಂದ ಕಾಮಗಾರಿ ಸ್ಥಗಿತ

Last Updated 11 ಆಗಸ್ಟ್ 2011, 8:00 IST
ಅಕ್ಷರ ಗಾತ್ರ

ಜಮಖಂಡಿ: ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ತಮ್ಮ ವಾಹನಗಳನ್ನು ಇಲ್ಲಿನ ಜಿಎಲ್‌ಬಿಸಿ ಕಚೇರಿಗಳ ಆವರಣದಲ್ಲಿ ನಿಲ್ಲಿಸಿದ ಘಟನೆ ಬುಧವಾರ ನಡೆದಿದೆ.

ಅಭಿವೃದ್ಧಿ ಕಾಮಗಾರಿಗೆ ಬೇಕಾದ ಕೆಂಪು ಮಣ್ಣನ್ನು ಅರಣ್ಯ ಪ್ರದೇಶದಿಂದ ತರಬೇಕು. ಇದಕ್ಕಾಗಿ ಅರಣ್ಯಕ್ಕೆ ಹೋದರೆ ಅಧಿಕಾರಿಗಳು ತೊಂದರೆ ನೀಡುತ್ತಾರೆ. ಅರಣ್ಯ ಅಧಿಕಾರಿಗಳು ವಿಧಿಸುವ ದಂಡ ವನ್ನು ತೆರಲಾಗುತ್ತದೆ. ಅವರು ಕೇಳಿದಷ್ಟು ಗೌರವಧನ ಕೊಡಲಾಗುತ್ತದೆ. ಆದರೂ ತಮ್ಮನ್ನು ಕಳ್ಳರಂತೆ ಕಾಣಲಾಗುತ್ತದೆ ಎಂದು ಗುತ್ತಿಗೆದಾರರು ದೂರಿದರು.

ಅಭಿವೃದ್ಧಿ ಕಾಮಗಾರಿಗೆ ಕೆಂಪು ಮಣ್ಣು, ಜಲ್ಲಿಕಲ್ಲು ಹಾಗೂ ಮರಳು ಬೇಕು. ಇದು ಜಮಖಂಡಿ ಪ್ರದೇಶಲ್ಲಿ ದೊರೆಯುವುದಿಲ್ಲ. ಸರ ಕಾರಿ ಒಡೆತನದ ಕ್ವಾರಿ ಅಥವಾ ಜಮೀನು ಜಮ ಖಂಡಿಯಲ್ಲಿಲ್ಲ. ಹೀಗಾಗಿ ಅರಣ್ಯ ಪ್ರದೇಶದಿಂದ ಅವುಗಳನ್ನು ತರುವುದು ಅನಿವಾರ್ಯ ಎಂಬುದು ಅವರ ಅಳಲು.

ದೂರದ ಊರುಗಳಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಣೆ ಮಾಡುವ ಪ್ರಸಂಗ ಇರುವುದರಿಂದ ದುಬಾರಿ ವೆಚ್ಚ ದಲ್ಲಿ ಸಾಗಾಟ ಮಾಡುತ್ತೇವೆ. ಹಾಗೆಂದು ನಮಗೇನೂ ಹೆಚ್ಚಿನ ದರದಲ್ಲಿ ಕಾಮ ಗಾರಿಗಳ ಗುತ್ತಿಗೆ ನೀಡುವುದಿಲ್ಲ. ಅಥಣಿ ಮತ್ತು ಮುಧೋಳದಲ್ಲಿ ಗುತ್ತಿಗೆದಾರರಿಗೆ ನೀಡುವ ಗುತ್ತಿಗೆ ದರವನ್ನೇ ನೀಡಲಾಗುತ್ತದೆ. ಗುತ್ತಿಗೆ ದರಗಳು ಅವೈಜ್ಞಾನಿಕವಾಗಿವೆ ಎಂದು ಅವರು ದೂರಿದರು.

ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ಕಿರುಕುಳ ತಡೆ ಯಲಸಾಧ್ಯವಾಗಿದೆ.
ಅಧಿಕಾರಿಗಳ ತೊಂದರೆಯಿಂದಾಗಿ ಕಾಮಗಾರಿ ಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.  ಒಂದು ದಿನ ಕಾಮಗಾರಿ ಸ್ಥಗಿತಗೊಳಿಸಿದರೆ ಕಾರ್ಮಿಕರು ತಮ್ಮ ಊರಿಗೆ ತೆರಳುತ್ತಾರೆ. ಅವರನ್ನು ಕರೆತರಲು ನಾವೇ ಹೋಗಬೇಕು ಎಂದ ಅವರು ಈ ಸಮಸ್ಯೆ ಮುಂದುವರಿದರೆ ಗುತ್ತಿಗೆ ಪಡೆಯುವುದನ್ನೇ ಬಹಿಷ್ಕರಿಸುವುದಾಗಿ  ಎಚ್ಚರಿಕೆ ನೀಡಿದರು.

ಗುತ್ತಿಗೆದಾರರಾದ ಜಿ.ಸಿ.ಅರ್ಜುಣಗಿ, ಎಸ್.ಎಸ್.ಪಾಟೀಲ, ಎಸ್.ಪಿ.ಪಾಟೀಲ, ಎಸ್.ವಿ.ಹಿರೇಮಠ, ಎಸ್.ಜಿ.ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT