ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದ್ದಲೀಶ್ವರ ಶ್ರೀಗಳ ಷಷ್ಟ್ಯಬ್ದಿಗೆ ಚಾಲನೆ

Last Updated 5 ಜನವರಿ 2012, 8:25 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಹೊಸರಿತ್ತಿಯ ಗುದ್ದಲೀಸ್ವಾಮಿಮಠದ ಪೀಠಾಧಿಪತಿ ಗುದ್ದಲೀಶಿವಯೋಗಿಶ್ವರರ ಷಷ್ಟ್ಯಬ್ದಿ ಸಮಾರಂಭ ಹಾಗೂ ಗುದ್ದಲೀಶ್ವರರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು.

ಬೆಳಿಗ್ಗೆ ಶ್ರೀಮಠದ ಆವರಣದಲ್ಲಿ ನೀಲಕಂಠ ಸಾರಂಗ ದೇಶಿಕೇಂದ್ರ ಶ್ರೀಗಳು ಷಟಸ್ಥಲ ದ್ವಜಾರೋಹಣ ನೇರವೇರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಶ್ರೀಮಠದಿಂದ ಆರಂಭವಾದ 1001 ಕುಂಭಗಳ ಹಾಗೂ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ವಾಪಸ್ಸಾಯಿತು.

ಮೆರವಣಿಗೆಯಲ್ಲಿ ಗುದ್ದಲೀಶ್ವರ ಶ್ರೀಗಳು ಸಾರೂಟದಲ್ಲಿ ಬಂದರೆ, ಕುಂಭ ಹೊತ್ತ 1001 ಮಹಿಳೆಯರು ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ಬಂದರು.

ಡೊಳ್ಳು ಕುಣಿತ, ಜಗ್ಗಲಿಗೆ, ಪುರವಂತರು, ಬ್ಯಾಂಡ್ ಹಾಗೂ ಭಜನೆಯೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಭಕ್ತರ ಹರ್ಷೋದ್ಘಾರ ಮಧ್ಯ ಭವ್ಯ ಮೆರವಣಿಗೆ ನಡೆಸಲಾಯಿತು.

ಬೆಳ್ಳಟ್ಟಿಯ ಬಸವರಾಜ ಶ್ರೀಗಳು, ಗುಡ್ಡಆನ್ವೇರಿಯ ಶಿವಯೋಗಿಶ್ವರ ಶ್ರೀಗಳು, ಗ್ರಾಮದ ಗಣ್ಯರು ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ನಡೆದ ಸಮಾರಂಭದಲ್ಲಿ ಗುದ್ದಲೀಶ್ವರ ಶ್ರೀಗಳಿಗೆ ಭಕ್ತಿ ಗೌರವದ ಭಿನ್ನವತ್ತಳೆ ಸಮರ್ಪಣೆ ಮಾಡಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಂಡರಗಿಯ ಡಾ. ಅನ್ನದಾನೇಶ್ವರ ಶ್ರೀಗಳು ವಹಿಸಿದ್ದರು. ತಮಿಳುನಾಡಿನ ಕುಂಭಕೋಣಂ ವೀರಶೈವ ಪೆರಿಯಮಠಂನ ನೀಲಕಂಠ ಸಾರಂಗ ದೇಶಕೇಂದ್ರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.

ಷಷ್ಠ್ಯಬ್ದಿ ಸಮಾರಂಭದಲ್ಲಿ ಇಂದು
  ಗುದ್ದಲಿಸ್ವಾಮಿಮಠದ ಪೀಠಾಧಿಪತಿ ಗುದ್ದಲೀಶಿವಯೋಗಿಶ್ವರರ ಷಷ್ಠ್ಯಬ್ದಿ ಸಮಾರಂಭ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜ.5ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧ್ಯಕ್ಷತೆಯನ್ನು ಶಾಸಕ ನೆಹರೂ ಓಲೇಕಾರ, ಸಾನ್ನಿಧ್ಯವನ್ನುಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳುಮ ನೇತೃತ್ವವನ್ನು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ವಹಿಸಲಿದ್ದಾರೆ.

ಕನಕಪುರ ಮರಳೆ ಗವಿಮಠದ ಶಿವರುದ್ರ ಶ್ರೀಗಳು, ದೇಗುಲಮಠದ ಮುಮ್ಮಡಿ ನಿರ್ವಾಣ ಶ್ರೀಗಳು, ಗದ್ದಿಗೆ ಮಠದ ಮಹಾಂತ ಶ್ರೀಗಳು, ಚರಮೂರ್ತಿ ಶಿವರುದ್ರ ಶ್ರೀಗಳು ಬಾಣವಾಡಿ ಕಚ್ಚುಗಲ್ ಬಂಡೆಮಠದ ಚರಮೂರ್ತಿ ಬಸವಲಿಂಗ ಶ್ರೀಗಳು, ಮುಮ್ಮಡಿ ಮಹಾಂತಲಿಂಗ ಶ್ರೀಗಳು, ಚಂದ್ರಶೇಖರ ಶ್ರೀಗಳು, ನಂಜುಂಡ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ಸುರೇಶ ಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಕಾಡಾಧ್ಯಕ್ಷ ಸೋಮಣ್ಣ ಬೇವಿನಮರದ, ಕುರಿ ಮತ್ತು ಉಣ್ಣೆ ನಿಗಮ ಅಧ್ಯಕ್ಷ ಭೋಜರಾಜ ಕರೂದಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ 12ಕ್ಕೆ ಮಹಾಗಣರಾಧನೆ ಮತ್ತು ಸಂಜೆ 6ಗಂಟೆಗೆ ಸನಾತನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿಂದೂ ಜನ ಜಾಗೃತಿ ಸಮಿತಿಯಿಂದ ಪ್ರವಚನ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT