ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬೇವಾಡ ಗ್ರಾಮಸ್ಥರಿಂದ ಪ್ರತಿಭಟನೆ

Last Updated 3 ಡಿಸೆಂಬರ್ 2013, 8:26 IST
ಅಕ್ಷರ ಗಾತ್ರ

ಸಿಂದಗಿ: ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ಮತ್ತು ಮನಸ್ವನಿ ಯೋಜನೆ ಗಳ ಮಂಜೂರಾತಿಗಾಗಿ ಆಗ್ರಹಿಸಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮದ ಮಹಿಳೆಯರನ್ನೊಳಗೊಂಡು ನೂರಾರು  ಜನರು ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ  ನಗರದ ಮಿನಿವಿಧಾನಸೌಧ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಧರಣಿ ನಡೆಸಿದ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡುವಂತೆ ಪಟ್ಟು ಹಿಡಿದರು.

ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದು ಬುಳ್ಳಾ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ ಬಿಜಾಪುರ ಮಾತನಾಡಿ, ಗುಬ್ಬೇವಾಡ ಗ್ರಾಮದಲ್ಲಿ ಸರ್ಕಾರ ವಿಧವಾ ವೇತನ, ವೃದ್ಧಾಪ್ಯವೇತನ, ಅಂಗವಿಕಲ ವೇತನ ಮತ್ತು ಮನಸ್ವಿನಿ ಯೋಜನೆ ಪ್ರಯೋ ಜನ ಯಾರೊಬ್ಬರಿಗೂ ದೊರಕಿಲ್ಲ. ಈ ಕುರಿತಾಗಿ ಸಾಕಷ್ಟು ಬಾರಿ ಸಂಬಂಧಿಸಿ ದವರಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಅರ್ಹ ಫಲಾನುಭವಿಗಳು ಅರ್ಜಿ ಸಹಿತ ಕಾರ್ಯಾಲಯಕ್ಕೆ ಬಂದರೆ ಅಧಿ ಕಾರಿ ವರ್ಗ ಎಳ್ಳಷ್ಟೂ ಸ್ಪಂದಿಸಿಲ್ಲ. ಆದರೆ ಏಜೆಂಟರ ಮೂಲಕ ಬಂದ ಅರ್ಜಿಗಳನ್ನು ಪರಿಗಣನೆ ತೆಗೆದುಕೊಳ್ಳುತ್ತಾರೆ. ಈ ಯೋಜನೆಗಳ ಫಲಾನುಭವಿಗಳ ಮಂಜೂರಾತಿಗೆ ಸಂಬಂಧಪಟ್ಟ ಅಧಿ ಕಾರಿ ನಿರೀಕ್ಷೆ ಮಾಡುತ್ತಾರೆ ಎಂದು ಆರೋಪಿಸಿದರು.

ಪ್ರತಿಭಟನೆ ನೇತೃತ್ವವನ್ನು ಕರವೇ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ದಸ್ಮಾ, ನಗರ ಘಟಕ ಅಧ್ಯಕ್ಷ  ಮೆಹಬೂಬ ಆಳಂದ, ಗುಬ್ಬೇವಾಡ ಗ್ರಾಮ ಘಟಕ ಅಧ್ಯಕ್ಷ ಮಂಜುನಾಥ ನಾಯ್ಕೋಡಿ, ರಾಜೂ ಮದರಖಾನ್, ಬಸವರಾಜ ಚಾವರ, ಬಾಬುಗೌಡ ಬಿರಾದಾರ, ತಾಲ್ಲೂಕು ವಕ್ತಾರ ಪರುಶರಾಮ ಬ್ಯಾಕೋಡ, ವಿದ್ಯಾರ್ಥಿ ಘಟಕ ಅಧ್ಯಕ್ಷ ಚೇತನ ರಾಂಪೂರ ಹಾಗೂ ಗ್ರಾಮದ ಸಣ್ಣಪ್ಪ ಕೋರಳ್ಳಿ, ರಾಜಾಪಟೇಲ ಬಿರಾ ದಾರ, ಬಲವಂತ್ರಾಯ ಪಾಟೀಲ, ಶರಣಪ್ಪ ಪಾಟೀಲ, ಬೀರಪ್ಪ ನಾಟೀ ಕಾರ, ಹಣಮಂತ ಭಜಂತ್ರಿ, ಸಾಬವ್ವ ಮಳ್ಳಿ, ಭೀಮವ್ವ ಮಳ್ಳಿ, ಲಕ್ಮ್ಷಿಬಾಯಿ ನಾಯ್ಕೋಡಿ, ಕಸ್ತೂರಿಬಾಯಿ ಬೋರಗಿ, ಶಾರದಾಬಾಯಿ ಕರಬಂಟನಾಳ ವಹಿಸಿ ಕೊಂಡಿದ್ದರು.

ಅಧಿಕಾರಿ ವರ್ಗವನ್ನು ಒಳ ಬಿಟ್ಟು ಅರ್ಧ ಗಂಟೆಗೂ ಅಧಿಕ ಸಮಯ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರಿಂದ ಸಾರ್ವ ಜನಿಕರಿಗೆ ತೀವ್ರ  ತೊಂದರೆ ಅನುಭವಿಸಬೇಕಾಯಿತು.

ನಂತರ ತಹಶೀಲ್ದಾರ ಗ್ರೇಡ್–2 ಜಿ. ಎಸ್. ಮಳಗಿ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಸ್ದಳಕ್ಕೆ ಧಾವಿಸಿ ಈಗಲೇ ಎಲ್ಲ ಫಲಾನುಭವಿಗಳಿಂದ ಅರ್ಜಿ ಪಡೆದು ಕೊಳ್ಳುವ ಭರವಸೆ ನೀಡಿದ್ದರಿಂದ ಪ್ರತಿಭಟನಕಾರರು ಬಾಗಿಲು ತೆರೆದು ಧರಣಿ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT