ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ವಂದನೆ: ಶಿಕ್ಷಕರಿಗೆ ಸನ್ಮಾನ

Last Updated 6 ಸೆಪ್ಟೆಂಬರ್ 2013, 6:13 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುವಾರ ಸಂಭ್ರಮದ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಯಿತು.

  ರಾಯಚೂರು ವರದಿ: ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ  ಡಾ.ಸರ್ವಪಲ್ಲಿ ರಾಧಾಕೃಷ್ಣನವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಶಿಕ್ಷಕರ ಪ್ರಶಸ್ತಿ ಪದಾನ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರು: ದೇವದುರ್ಗ ತಾಲ್ಲೂಕಿನ ಅಗ್ರಿಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಯ ಮುಖ್ಯಾಧ್ಯಾಪಕ ದೇವೇಂದ್ರಕುಮಾರ, ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜನಗೌಡ, ಮಾನ್ವಿಯ ಅಡವಿ ಅಮರೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಪಿ.ಎಂ ಯಲ್ಲಪ್ಪ, ರಾಯಚೂರು ನಗರದ ಕೆಇಬಿ ಶಾಲೆಯ ರಜ್ಜಬ್‌ಅಲಿ, ಸಿಂಧನೂರು ತಾಲ್ಲೂಕಿನ ಆರ್.ಎಚ್ ನಂ 2 ಶಾಲೆಯ ಶಿಕ್ಷಕ ಚಂದ್ರಪ್ಪ ಹೂಗಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತಗೊಂಡ ಪ್ರೌಢಶಾಲಾ ಶಿಕ್ಷಕರು: ದೇವದುರ್ಗದ ಸರಕಾರಿ ಪ್ರೌಢ ಶಾಲೆ ಕನ್ಯಾ ಶಿಕ್ಷಕ ಪದ್ಮಜಾ, ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕ ಡಾ.ನಿಂಗಪ್ಪ ಹೆಚ್. ಪೂಜಾರ, ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ನಾಗೇಶ, ರಾಯಚೂರು ತಾಲ್ಲೂಕಿನ ಸಿಂಗನೋಡಿ ಪ್ರೌಢಶಾಲೆಯ ಶಿಕ್ಷಕ ರಾಜಕುಮಾರ, ಸಿಂಧನೂರು ತಾಲ್ಲೂಕಿನ ಅಂಬಾಮಠದ ಪ್ರೌಢಶಾಲೆಯ ಶಿಕ್ಷಕ ಸಂಗಮೇಶ ಕೋಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಲ್ಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತಗೊಂಡ ಶಿಕ್ಷಕರು: ರಾಯಚೂರು ನಗರದ ಸ್ಟೇಷನ್‌ಬಜಾರ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಾರ್ವತಿ, ಉಡಗಲ್ ಖಾನಾಪುರ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಾವಿತ್ರಿ, ಗಾಣಧಾಳ ಗ್ರಾಮದ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಬಾವಿಮನಿ  ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಉಡಮಗಲ್-ಖಾನಾಪುರ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ರವಿ, ದೇವಸುಗೂರ ಗ್ರಾಮದ ಪ್ರೌಢಶಾಲೆಯ ಶಿಕ್ಷಕಿ ಮಂಜುಳಾ ಹಿರೇಮಠ,  ಯರಮರಸ್‌ಕ್ಯಾಂಪ್‌ನ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜಯಶ್ರೀ ಅವರಿಗೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲಿಂಗಸುಗೂರ ವರದಿ:  ಕೇಂಬ್ರಿಡ್ಜ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಯಿತು.

ಹಿರಿಯ ಪತ್ರಕರ್ತ ಕುಮಾರ ಬರುಡಿಕಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪಂದನಾ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗೌಡರ, ಶಾಲಾ ಮುಖ್ಯೋಪಾಧ್ಯಾಯ ಶಾಮಣ್ಣ ಕರಡಕಲ್ಲ, ಸವಿತಾ ಮಾತನಾಡಿದರು.

ಗಾಳಿಪಟ ಸ್ಪರ್ಧೆ: ಪಟ್ಟಣದ ಹೊರವಲಯದ ಸುಂದರ ಉದ್ಯಾನವನದ ಮೈದಾನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ (ಶಿಕ್ಷಕರ ದಿನಾಚರಣೆ) ಅಂಗವಾಗಿ ಶಾಲಾ ಮಕ್ಕಳಿಗೆ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿತ್ತು.  ಹುನಕುಂಟಿಯ ಶರಣಯ್ಯ ತಾತ ವಿಶೇಷ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪತ್ರಕರ್ತರಾದ ಗುರುರಾಜ ಹೂಗಾರ, ಸತೀಶ ಹಿರೇಮಠ ಹಾಗೂ ಪಾಲಕರು ಪಾಲ್ಗೊಂಡಿದ್ದರು. ಚೈತ್ರಾ ಸಂಗಡಿಗರು ಪ್ರಾರ್ಥಿಸಿದರು. ಪ್ರಶಾಂತ ಸ್ವಾಗತಿಸಿದರು. ಸುಮನಾ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ವಂದಿಸಿದರು.

ಮಾನ್ವಿವರದಿ: ಪಟ್ಟಣದ ಶ್ರೀಸಂಗಮೇಶ್ವರ ವೀರಮಾಂಬೆ ಕಲ್ಮಠ ಡಿ.ಇಡಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.

ಪ್ರಾಚಾರ್ಯ ಟಿ.ಶಿವಕುಮಾರ, ಉಪನ್ಯಾಸಕರಾದ ರಮೇಶ ಬಾಬು ಯಾಳಗಿ  ಹಾಗೂ ಬಿ.ಬಸವರಾಜ ಮಾತನಾಡಿದರು.
ಕಾಲೇಜಿನ ಆಡಳಿತಾಧಿಕಾರಿ ಶಂಕ್ರಯ್ಯ ಸ್ವಾಮಿ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ವಿರುಪಣ್ಣ ಪಾಟೀಲ್ ಇದ್ದರು.

ರಮಾದೇವಿ ನಿರೂಪಿಸಿದರು. ನಯನಾ ಕೊಡ್ಲಿ ಪ್ರಾರ್ಥಿನೆ ಗೀತೆ ಹಾಡಿದರು. ಲಲಿತಾ ಸ್ವಾಗತಿಸಿದರು. ಶಿವಗೀತಾ ವಂದಿಸಿದರು.
ಬಸವ ಐಟಿಐ ಕಾಲೇಜು: ಪಟ್ಟಣದ ಬಸವ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು  ಹಿರಿಯ ಪತ್ರಕರ್ತ  ಪಿ.ಪರಮೇಶ ಸಸಿಗೆ ನೀರು ಹಾಕುವ ಮೂಲಕಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಹೊಸಮನಿ ಅಧ್ಯಕ್ಷತೆವಹಿಸಿದ್ದರು. ಹ್ಯಾರಿಸ್ ಕೊಟ್ನೇಕಲ್ ಹಾಗೂ ಶರಣಬಸವ ಬೆಟ್ಟದೂರು , ಉಪನ್ಯಾಸಕರಾದ ಅಮರೇಶ, ವಿಜಯಲಕ್ಷ್ಮೀ, ಪ್ರಶಾಂತಿ, ಸುಮಲತಾ, ಚಂದ್ರಶೇಖರ ಮತ್ತಿತರರು ಇದ್ದರು. ಗೀತಾ ಪ್ರಾರ್ಥನೆ ಗೀತೆ ಹಾಡಿದರು. ರವಿಕುಮಾರ ಸ್ವಾಗತಿಸಿದರು. ಕಾವ್ಯಶ್ರೀ ನಿರೂಪಿಸಿದರು. ಅಮರೇಶ ವಂದಿಸಿದರು.

ನೇತಾಜಿ ಶಿಕ್ಷಣ ಸಂಸ್ಥೆ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ಉದ್ಘಾಟಿಸಿದರು. ಗುರು ಶಿಷ್ಯರ ನಡುವಿನ ಸಂಬಂಧ ಶ್ರೇಷ್ಠವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ಶಿಕ್ಷಕರಾದ ಅನೀಸ್ ಫಾತಿಮಾ, ಈರಮ್ಮ, ಯಲ್ಲಪ್ಪ, ಲಕ್ಷ್ಮೀ, ಸುಧಾ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆ ಪ್ರಕಟಿಸಿದ ಜಾಣ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶಾಲಾ ಮಕ್ಕಳಿಂದ ಬಿಡುಗಡೆಗೊಳಿಸಲಾಯಿತು.

ಮಾನ್ವಿ ಕಾನ್ವೆಂಟ್: ಪಟ್ಟಣದ ಎಲ್‌ಎಂಜಿಎಸ್ ಮಾನ್ವಿ ಕಾನ್ವೆಂಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚಣೆ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಅಧ್ಯಕ್ಷ ಎಂ.ನಾಗೇಶ್ವರರಾವ್ ಉದ್ಘಾಟಿಸಿದರು. ಶಿಕ್ಷಕರಾದ ಓಬೇದ್‌ಬಿನ್ ಖಲೀಲ್, ಬಸವರಾಜ, ದಿಲೀಪಕುಮಾರ ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಶಿವಶಂಕರ ಹಿರೇಮಠ, ಹೇಮಲತಾ ಕೆ,  ಕವಿತಾ ಪಾಟೀಲ್ ರಾಯಚೂರು ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಶಾಂತಾಬಾಯಿ ಜೈನ್, ಮಹಾವೀರ ಜೈನ್, ಅನಿತಾ ಜೈನ್ ಉಪಸ್ಥಿತರಿದ್ದರು. ಅಕ್ಷತಾ ಪಾಟೀಲ್ ನಿರೂಪಿಸಿದರು. ಅಯೂಬ್ ಖಾನ್ ವಂದಿಸಿದರು
.
ಸಿಂಧನೂರು ವರದಿ: ವಿದ್ಯಾರ್ಥಿಗಳು ಆದರ್ಶ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಇತರರಿಗೆ ಮಾದರಿಯಾದರೆ, ಅದೇ ವಿದ್ಯೆ ಕಲಿಸಿದ ಶಿಕ್ಷಕರಿಗೆ ನೀಡುವ ಕೊಡುಗೆ ಎಂದು ತಾಲ್ಲೂಕಿನ ಚಿಕ್ಕಬೇರಿಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಾಗಪ್ಪ ಹೇಳಿದರು.
ಶಾಲೆಯಲ್ಲಿ ಶಿಕ್ಷಕರ ದಿನದ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿ ಬಸವರಾಜ ಹಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕೆ.ಗೋನಾಳ ಮಾತನಾಡಿದರು. 
ಸಹ ಶಿಕ್ಷಕರಾದ ನಿಜಲಿಂಗಪ್ಪ, ಪ್ರಭಯ್ಯ, ಶಿವಪ್ಪ, ಶಿವಕುಮಾರ, ಅಮರೇಶ ಕೈಲವಾಡಗಿ, ಶಂಕ್ರಪ್ಪ, ರಾಜಣ್ಣ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT