ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪ್ರಸಾದ್ ವರ್ಗ, ಅಚ್ಯುತರಾವ್‌ಗೆ ಬಡ್ತಿ

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ, ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಸಿಐಡಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರನ್ನು ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿಪಿಯನ್ನಾಗಿ ವರ್ಗ ಮಾಡಲಾಗಿದೆ.

ಅಪರಾಧ ಮತ್ತು ತಾಂತ್ರಿಕ  ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಅಚ್ಯುತರಾವ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ಸಿ.ಐ.ಡಿ.ಗೆ ವರ್ಗ ಮಾಡಲಾಗಿದೆ.

ಪೊಲೀಸ್ ಆಧುನೀಕರಣ, ಲಾಜಿಸ್ಟಿಕ್ಸ್, ಕಮ್ಯೂನಿಕೇಷನ್ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಎಂ.ಕೆ.ಶ್ರೀವಾತ್ಸವ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗ ಮಾಡಲಾಗಿದೆ. ಹುದ್ದೆ ನಿರೀಕ್ಷೆಯಲ್ಲಿದ್ದ ರೋಹಿಣಿ ಕಟೋಚ್ ಅವರನ್ನು ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾಗಿರುವ ಎನ್.ಶಶಿಕುಮಾರ್, ವೈ.ಎಸ್.ರವಿ ಕುಮಾರ್, ಅಮಿತ್‌ಸಿಂಗ್ ಮತ್ತು ಚೇತನ್‌ಸಿಂಗ್ ರಾಥೋರ್ ಅವರಿಗೆ ಸೀನಿಯರ್ ಟೈಂ ಸ್ಕೇಲ್‌ಗೆ ಬಡ್ತಿ ನೀಡಿ, ಹಾಲಿ ಇರುವ ಸ್ಥಾನಗಳಲ್ಲಿಯೇ ಮುಂದುವರಿಸಲಾಗಿದೆ.

ಐಎಫ್‌ಎಸ್ ಅಧಿಕಾರಿ ಟಿ.ಜ್ಞಾನಪ್ರಕಾಶ್ ಅವರನ್ನು ಬಾಗಲಕೋಟೆ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಡಾ.ಡಿ.ವಿ.ಗುರುಪ್ರಸಾದ್ ಎನ್.ಅಚ್ಯುತರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT