ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಬಸಪ್ಪಗೆ ಜಾನಪದ ಪ್ರಶಸ್ತಿ

Last Updated 24 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಸುರಪುರ: 2010ನೇ ಸಾಲಿನ ಕರ್ನಾಟಕ ಜಾನಪದ ಆಕಾಡೆಮಿಯ ‘ಜಾನಪದ’ ಪ್ರಶಸ್ತಿಗೆ ತಾಲ್ಲೂಕಿನ ರುಕ್ಮಾಪುರದ ಗುರುಬಸಪ್ಪ ಹೂಗಾರ್ ಭಾಜನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಡೋಲು ವಾದನ ದಲ್ಲಿ ತಲ್ಲೆನರಾಗಿರುವ ಗುರುಬಸಪ್ಪ ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೆ ಕೊಡುಗೆ ನೀಡಿದ್ದಾರೆ.

68ರ ಹರೆಯದ ಗುರುಬಸಪ್ಪ ಅವರಿಗೆ ತಂದೆಯೇ ಮೊದಲ ಗುರು. ಡೋಲು ವಾದನ ಕುಲ ಕಸುಬು. ಕಿತ್ತು ತಿನ್ನುವ ಬಡತನ ಇದ್ದರಿಂದ ಶಾಲೆಗೆ ಹೋಗಲಾಗಲಿಲ್ಲ. ತಂದೆಯ ಸಲಹೆ ಯಂತೆ ಚಿಕ್ಕ ವಯಸ್ಸಿನಲ್ಲಿ ವಾದ್ಯ ಬಾರಿಸುವುದನ್ನು ಕಲಿಯತೊಡಗಿ ದರು. ತಮ್ಮ 18ನೇ ವಯಸ್ಸಿನಲ್ಲಿ ಕಾರ್ಯಕ್ರಮಗಳಿಗೆ ಹೋಗಲು ಆರಂಭಿಸಿದ ಗುರುಬಸಪ್ಪ ಅವರ ಈ ಯಾತ್ರೆಗೆ ಈಗ ಅರ್ಧ ಶತಕ. ಈ ಸಂದರ್ಭದಲ್ಲಿ ಪ್ರಶಸ್ತಿಯ ಗರಿ ಅವರ ಉತ್ಸಾಹವನ್ನು ಇಮ್ಮಡಿಸಿದೆ.

ತಾಲ್ಲೂಕಿನ ಹೆಮನೂರಿನಲ್ಲಿ ವಾದ್ಯ ದಲ್ಲಿ ವಿಶೇಷ ತರಬೇತಿ ಪಡೆದು ಮದುವೆ, ಮುಂಜಿಗಳಲ್ಲಿ ವಾದ್ಯ ಬಾರಿಸತೊಡಗಿದರು. ಮಂಗಳ ಕಾರ್ಯ, ಪುರವಂತಿಗೆ, ಗುಗ್ಗಳ, ವೀರಭದ್ರದೇವರ ಕುಣಿತ, ಇತರ ಜಾನಪದ ಕಾರ್ಯಕ್ರಮ ಗಳಿದ್ದಲ್ಲಿ ಇವರ ವಾದನದ್ದೆ ಹೈಲೆಟ್. ಇವರಿಲ್ಲದಿದ್ದರೆ ಆ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಗುರುಬಸಪ್ಪ ಹಾಸುಹೊಕ್ಕಾಗಿದ್ದಾರೆ.
ಈ ಕಾಯಕವನ್ನೇ ಜೀವನ ನಿರ್ವ ಹಣೆಗೂ ನಂಬಿಕೊಂಡರು. ಬಂದ ಅಲ್ಪ ಸ್ವಲ್ಪ ಆದಾಯದಲ್ಲೆ 4 ಜನ ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಡೋಲು ವಾದನದ ಜೊತೆಗೆ ತಬಲಾ ಮತ್ತು ಹಾಡುಗಾರಿಕೆಯನ್ನೂ ಅಳವಡಿಸಿಕೊಂಡಿದ್ದಾರೆ. ಈತನ ಇಬ್ಬರು ಗಂಡು ಮಕ್ಕಳಿಗೂ ಡೋಲು ವಾದನ ಬರುತ್ತದೆ. ಆದರೆ ಅವರಿಗೆ ಅದರಲ್ಲಿ ಆಸಕ್ತಿಯಿಲ್ಲ.

ಸರ್ಕಾರ ನಡೆಸುವ ಯುವಜನ ಮೇಳ ಇತರ ಸ್ಪರ್ಧೆಗಳಲ್ಲಿ ಭಾಗ ವಹಿಸಿ ಸೈ ಎನಿಸಿಕೊಂಡಿದ್ದಾನೆ. ಕಾರ್ಯಕ್ರಮಗಳಲ್ಲಿ ಇವರ ಡೋಲುವಾದನ ಸವಿಯಲೆಂದೆ ಜನ ಕಾತುರದಿಂದ ಕಾಯುತ್ತಿರುತ್ತಾರೆ. ಜನ ಹಣ ನೀಡಿ ಇನ್ನೊಮ್ಮೆ, ಮತ್ತೊಮ್ಮೆ ಇವರ ವಾದನಕ್ಕೆ ತೆಲೆ ತುಗೂತ್ತಾರೆ. ಡೋಲಿನ ಮೇಲೆ ಇವರ ಬೆರಳುಗಳು ಸರಾಗವಾಗಿ ಚಲಿಸುತ್ತವೆ. ವೈವಿಧ್ಯಮಯ ವಾದನಕ್ಕೆ ಹೆಸರಾಗಿದ್ದಾರೆ.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಠ, ತುಮಕೂರಿನ ಸಿದ್ಧಗಂಗಾ ಮಠ, ದೇವಸುಗೂರಿನ ಮಠ, ಆಂಧ್ರದ ರಾಚೋಟಿ ವೀರಭದ್ರ ದೇವಸ್ಥಾನ, ತಿಂಥಣಿ ಮೌನೇಶ್ವರ ದೇವಸ್ಥಾನ ಮುಂತಾದೆಡೆ ಇವರ ಡೋಲುವಾದನ ಜನಮನಸೂರೆ ಗೊಂಡಿದೆ. ತಮಗರಿವಿಲ್ಲದಂತೆ ಗುರು ಬಸಪ್ಪ ತಮ್ಮ ವಾದ್ಯದ ಮೂಲಕ ಜಾನಪದವನ್ನು ಬೆಳೆಸುತ್ತಿದ್ದಾರೆ.

‘ಪ್ರಶಸ್ತಿ ಬಂದಿದ್ದು ತಿಳಿದು ನಾನು ಮೂಕ ವಿಸ್ಮಿತನಾದೆ. ಪ್ರಶಸ್ತಿಗಾಗಿ ನಾನು ಎಂದೂ ಕಾಯಕ ಮಾಡಿಲ್ಲ. ಊರಿನ ಹಿರಿಯರು ಸರ್ಕಾರಕ್ಕೆ ನನ್ನ ಬಯೋಡೆಟಾ ಕಳಿಸಿದ್ದರು. ಪ್ರಶಸ್ತಿ ಪಡೆಯುವಷ್ಟು ನಾನು ಸಮರ್ಥ ನಾಗಿದ್ದೇನೆ ಎಂದು ನನಗೆ ತಿಳಿದಿಲ್ಲ. ಆದರೆ ಪ್ರಶಸ್ತಿ ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ. ನನ್ನ ಕೊನೆಯ ಉಸಿರು ಇರುವವರೆಗೂ ವಾದ್ಯ ಬಾರಿ ಸುವುದನ್ನು ಬಿಡುವುದಿಲ್ಲ’ ಎಂದು ಒಂದೆ ಉಸುರಿನಲ್ಲಿ ಗುರುಬಸಪ್ಪ ಹೇಳುತ್ತಾರೆ.

ಗುರುಬಸಪ್ಪಗೆ ಪ್ರಶಸ್ತಿ ಬಂದಿದ್ದಕ್ಕೆ ಇಡೀ ರುಕ್ಮಾಪುರ ಗ್ರಾಮ ಸಂತಸ ದಲ್ಲಿದೆ. ತಮ್ಮ ಮನೆಯ ಮಗನಿಗೆ ಪ್ರಶಸ್ತಿ ಸಂದಿದಷ್ಟು ಜನರು ಖುಷಿ ಯಿಂದಿದ್ದಾರೆ. ರುಕ್ಮಾಪುರ ಗ್ರಾಮ ಸುಧಾರಣಾ ಸಮಿತಿಯ ಪದಾಧಿಕಾರಿ ಗಳು ಹಾಗೂ ಗ್ರಾಮದವರಾದ ನಿವೃತ್ತ ಎಸ್.ಪಿ. ಸಿ.ಎನ್. ಭಂಡಾರಿ ಗುರುಬಸಪ್ಪ ಅವರನ್ನು ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT