ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್ ಪಟ್ಟಣ ಪಂಚಾಯಿತಿ: ಶಾರದಾ ಕಡೇಚೂರ್ ಅಧ್ಯಕ್ಷೆ

Last Updated 22 ಫೆಬ್ರುವರಿ 2012, 6:45 IST
ಅಕ್ಷರ ಗಾತ್ರ

ಗುರುಮಠಕಲ್: ಕಾಂಗ್ರೆಸ್ ಭದ್ರ ಕೋಟೆ ಎಂದೆ ಪ್ರಸಿದ್ದಿ ಪಡೆದ ಗುರುಮಠಕಲ್ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಪ್ರಥಮ ಬಾರಿಗೆ ಜೆಡಿಎಸ್ ಮಡಿಲು ಸೇರಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಶಾರದಾ ಕಡೇಚೂರ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾ ಅಧಿಕಾರಿಯಾದ ತಹಸೀಲ್ದಾರ ಖಾಜಿ ನಫೀಸಾ ಘೋಷಿಸಿದ್ದಾರೆ.

ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ ಸ್ಥಾನದ ಆಯ್ಕೆ ಬಂದಾಗಿನಿಂದ ಪಟ್ಟಣ ಪಂಚಾಯಿತಿ ಸದಸ್ಯರಲ್ಲಿನ ವೈಮನಸ್ಸು ತಾರಕಕ್ಕೆರಿತು. ಅಧ್ಯಕ್ಷ ಆಯ್ಕೆ ಕುರಿತಂತೆ ಸಭೆಗಳು ನಡೆದಾಗ ಮುಖಂಡರ ನಡುವೆ ಮಾರಾ ಮಾರಿ ನಡೆದಿರುವುದು ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿನ ಅಂತರ ಹೆಚ್ಚಿಸಿದೆ.

ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಬಿರುಕು ಇತರೆ ಪಕ್ಷಗಳ ಗೆಲುವಿಗೆ ಸಹಾಯಕವಾಯಿತು. ಮಂಗಳವಾರ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಶಾರದಾ ಕಡೇಚೂರ್ ಹಾಗೂ ಈಶ್ವರಮ್ಮ ಹೂಗಾರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಯಾವ ಸದಸ್ಯರು ನಾಮಪತ್ರ ಸಲ್ಲಿಸಲ್ಲ್ಲಿಲ. ನಿಗದಿತ ಸಮಯದಲ್ಲಿ ಈಶ್ವರಮ್ಮ ತನ್ನ ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದಾಗಿ ಅವಿರೋಧವಾಗಿ ಶಾರದಾ ಕಡೇಚೂರ ಆಯ್ಕೆಯಾದರು.

ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಪಕ್ಷದ ಸದಸ್ಯರಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದ್ದರು. ತಾವು ಪಟ್ಟಣಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಯಾರೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದಿರುವುದು ತಿಳಿದ ಅವರು ಯಾದಗಿರಿಯಿಂದಲೇ ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವುದಾಗಿ ತಿಳಿದು ಬಂದಿದೆ.

ಒಟ್ಟು 17 ಸದಸ್ಯರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕೇವಲ 4 ಕಾಂಗ್ರೆಸ್ ಸ್ಥಾನಗಳು ಪಡೆದಿರುವಾಗಲೂ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾದ ಕಾಂಗ್ರೆಸ್ ಇಂದು ತನ್ನ ಕೈ ಬಲ ಕಳೆದುಕೊಂಡಂತಾಗಿದೆ.

ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ಸದಸ್ಯ ದಶರಥರಾವ್ ದಡಂಗೆ, ಬಿಜೆಪಿಯ ನವಿತಾ, ಜೆಡಿಎಸ್‌ನಿಂದ ಗೆಲುವು ಸಾಧಿಸಿ ನಂತರ ಕಾಂಗ್ರೆಸ್ ಸೇರಿದ ಸದಸ್ಯ ಜಿ.ಕೆ.ಕೃಷ್ಣಾ, ಲಲಿತಾಬಾಯಿ ತಿವಾರಿ, ಜೆಡಿಎಸ್‌ನ ಮಹಿಪಾಲರೆಡ್ಡಿ, ಜಿ.ತಮ್ಮಣ್ಣ, ಮಸಿಯುದ್ದಿನ್ ಆಸೀಮ್ ಹಾಗೂ ಈಶ್ವರಮ್ಮ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.

ವಿಜಯೋತ್ಸವ: ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಪಕ್ಷದ ಜಿಲ್ಲಾ ಅಧ್ಯಕ್ಷ ನಾಗನಗೌಡ ಕಂದಕೂರ, ಮತಕ್ಷೇತ್ರ ಅಧ್ಯಕ್ಷ ನವಾಜರೆಡ್ಡಿ ಪಾಟೀಲ್, ಯುವ ಅಧ್ಯಕ್ಷ ಶರಣಗೌಡ ಕಂದಕೂರ, ತಿಮ್ಮಣ್ಣ ಹೆಡಿಗಿಮದ್ರಿ, ವಿಶ್ವನಾಥರೆಡ್ಡಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT