ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 4-7-1963

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಭಾರತ ರಕ್ಷಣೆಗೆ ರಷ್ಯ ಕ್ಷಿಪಣಿ
ನವದೆಹಲಿ, ಜುಲೈ 3 - ಚೀಣೀಯರಿಂದ ಹಠಾತ್ತನೆ ನಡೆಯಬಹುದಾದ ಬಾಂಬ್ ದಾಳಿಯಿಂದ ಆಯಕಟ್ಟಿನ ಪ್ರದೇಶಗಳನ್ನು ರಕ್ಷಿಸುವುದಕ್ಕಾಗಿ ಭೂಮಿಯಿಂದ ಆಕಾಶಕ್ಕೆ ಹಾರಿಸಬಹುದಾದ ರಷ್ಯನ್ ನಿರ್ಮಿತ ಕ್ಷಿಪಣಿಗಳ ವ್ಯೆಹವನ್ನು ಈ ಪ್ರದೇಶಗಳ ಸುತ್ತಲೂ ರಚಿಸುವ ಸಂಭವವಿದೆ.

ಬಿಜಾಪುರ ಜಿಲ್ಲೆಯ ಬರಗಾಲ ನೀಗುವ ಮಲಪ್ರಭಾ ಯೋಜನೆಯ ಶಂಕುಸ್ಥಾಪನೆ
ಬಿಜಾಪುರ, ಜುಲೈ 3 - ಬಿಜಾಪುರ ಜಿಲ್ಲೆಯ ಬರಗಾಲವನ್ನು ನೀಗುವ ಇಪ್ಪತ್ತು ಕೋಟಿ ರೂಪಾಯಿಗಳ ವೆಚ್ಚದ ಮಲಪ್ರಭಾ ಯೋಜನೆಯ ಶಂಕುಸ್ಥಾಪನೆಯನ್ನು ಶ್ರೀಮತಿ ಇಂದಿರಾ ಗಾಂಧಿಯವರು `ನವಿಲು ತೀರ್ಥ'ದ ಬಳಿ ನೆರವೇರಿಸಿದರು. ಪರಶುರಾಮನು ಧರ್ಮಪಾಲನೆಗಾಗಿ ತಾಯಿಯ ಹತ್ಯೆ ಮಾಡಿದನೆಂಬ ಐತಿಹಾಸಿಕ ಹಿನ್ನೆಲೆಯಿಂದ ಕೂಡಿ ನವಿಲಿನ ಆಕಾರದಲ್ಲಿರುವ ಬೆಟ್ಟಗಳ ಸಾಲುಗಳ ಪ್ರದೇಶದಲ್ಲಿನ ಪುಣ್ಯ ಭೂಮಿಯಲ್ಲಿ ಈ ಅಣೆಕಟ್ಟೆಯನ್ನು ನಿರ್ಮಿಸಲಾಗುವುದು. ಈ ನೀರಾವರಿ ಯೋಜನೆಯಿಂದ ಬೆಳಗಾವಿ, ಬಿಜಾಪುರ, ಧಾರವಾಡ ಜಿಲ್ಲೆಗಳಲ್ಲಿ ಸುಮಾರು ಮೂರು ಲಕ್ಷ ಎಕರೆ ಭೂಮಿ ಸಾಗುವಳಿಗೆ ಬರುವುದು.

ಅಮೆರಿಕಕ್ಕೆ ಕೆನೆಡಿ ವಾಪಸ್
ವಾಷಿಂಗ್ಟನ್, ಜುಲೈ 3
- ಹತ್ತು ದಿನಗಳ ಐರೋಪ್ಯ ಪ್ರವಾಸದ ಬಳಿಕ ಅಧ್ಯಕ್ಷ ಕೆನೆಡಿಯವರು ಇಂದು ಇಲ್ಲಿಗೆ ವಿಮಾನದಲ್ಲಿ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT