ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ತಂದ ನೆಮ್ಮದಿ

Last Updated 30 ಡಿಸೆಂಬರ್ 2010, 14:00 IST
ಅಕ್ಷರ ಗಾತ್ರ

ನಮಗೆ ಇರುವುದು ಮೂರು ಎಕರೆ ಭೂಮಿ. ಅದರಿಂದಲೇ ನಮ್ಮ ಜೀವನ ಸಾಗಬೇಕು. ನಿರಂತರವಾಗಿ ಆದಾಯ ತರುವ ಬೆಳೆಗಳನ್ನು ಬೆಳೆದರೆ  ನೆಮ್ಮದಿಯ ಜೀವನ ನಡೆಸಬಹುದು ಎನ್ನುವುದನ್ನು ಅರಿತು ನಾವು ತರಕಾರಿ ಬೆಳೆಗಳ ಜತೆಗೆ ಗುಲಾಬಿ ಬೆಳೆಯಲು ಆರಂಭಿಸಿದೆವು. ಗುಲಾಬಿ ಬೇಸಾಯ ನಮಗೆ ಉತ್ತಮ ಆದಾಯ ತಂದು ಕೊಡುತ್ತಿದೆ ಎನ್ನುತ್ತಾರೆ ದೇವನಹಳ್ಳಿ ತಾಲ್ಲೂಕಿನ ನೀರಗಂಟಿ ಪಾಳ್ಯದ ರೈತ ಮುನಿವೆಂಕಟರಮಣಪ್ಪ.

ಮೂರು ಎಕರೆ ಭೂಮಿಯಲ್ಲಿ ಎರಡು ಎಕರೆಗಳಲ್ಲಿ ತರಕಾರಿ ಬೆಳೆಯುತ್ತಾರೆ. ಉಳಿದ ಒಂದು ಎಕರೆಯಲ್ಲಿ ನಾಲ್ಕು ವರ್ಷಗಳಿಂದ ಗುಲಾಬಿ ಬೆಳೆಯುತ್ತಿದ್ದಾರೆ. ಫಾರಂಗಳಲ್ಲಿ ಕಸಿ ಕಟ್ಟಿದ ಗುಲಾಬಿ  ಸಸಿಗಳನ್ನು ಹತ್ತು ರೂಗಳಿಗೆ ಒಂದರಂತೆ ಖರೀದಿಸಿ ತಂದು ತಮ್ಮ ಹೊಲದಲ್ಲಿ ನಾಟಿ ಮಾಡಿದರು. ಮಾಡುವಾಗ ಎಕರೆಗೆ 25ರಿಂದ 30 ಲಾರಿ ಲೋಡುಗಳಷ್ಟು ತಿಪ್ಪೆ ಗೊಬ್ಬರ ಹಾಕಿದ್ದೆವು. ಈ ಖರ್ಚುಗಳೆಲ್ಲ ಸೇರಿ ಎಕರೆಗೆ 70ರಿಂದ 80 ಸಾವಿರ ರೂಪಾಯಿ ಹಣ ಬೇಕಾಯಿತು. ಒಮ್ಮೆ ಹಣ ಖರ್ಚು ಮಾಡಿದರೆ ನಂತರದ ವರ್ಷಗಳಲ್ಲಿ ಗುಲಾಬಿ ಬೇಸಾಯಕ್ಕೆ ಹೆಚ್ಚಿನ ಹಣ ಬೇಕಾಗುವುದಿಲ್ಲ ಎನ್ನುವುದು ಅವರ ಅನುಭವ.  ಮುನಿವೆಂಕಟರಮಣಪ್ಪ ತಮ್ಮ ಹೊಲದಲ್ಲಿನ ಗಿಡಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ.  ಪ್ರತಿ ಭಾಗದಲ್ಲಿ ಎರಡು ದಿನಗಳಿಗೊಮ್ಮೆ ಹೂ ಕೀಳುತ್ತಾರೆ. ದಿನಕ್ಕೆ ಸರಾಸರಿ 40ರಿಂದ 80 ಕೆ.ಜಿ. ಹೂ ಸಿಗುತ್ತಿದೆ. ಎರಡು ವರ್ಷಗಳಿಗೊಮ್ಮೆ  ಗಿಡಗಳ ಟಿಸಿಲುಗಳನ್ನು ಕತ್ತರಿಸುತ್ತಾರೆ. ಅದರಿಂದ ಗಿಡಗಳು ಹುಲುಸಾಗಿ  ಬೆಳೆಯುತ್ತವೆ. ಹೀಗೆ ಮಾಡುವುದರಿಂದ ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿ ಪಡೆಯಬಹುದು ಎನ್ನುವುದು ಅವರ ಅನುಭವ. 

 ಒಮ್ಮೆ ನಾಟಿ ಮಾಡಿದ ಗಿಡಗಳನ್ನು ಚೆನ್ನಾಗಿ ಪೋಷಣೆ ಮಾಡಿದರೆ 10ರಿಂದ 15 ವರ್ಷಗಳ ಕಾಲ ಫಸಲು ಪಡೆಯಬಹುದು. ಹೂಗಳನ್ನು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತೇವೆ. ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ಗುಲಾಬಿಗೆ ಉತ್ತಮ ಬೆಲೆ ಸಿಗುತ್ತದೆ. ಈಗ ಕೇಜಿಗೆ 90ರೂ ಬೆಲೆ ಇದೆ. ತಿಂಗಳಿಗೆ 20 ಸಾವಿರ ರೂಪಾಯಿ ಆದಾಯ ಸಿಗುತ್ತಿದೆ ಎನ್ನುತ್ತಾರೆ ಪಡೆಯುತ್ತಿರುವುದಾಗಿ ವೆಂಕಟರಮಣಪ್ಪ ಹೇಳುತ್ತಾರೆ.   ಗುಲಾಬಿ ಹೂಗಳಿಂದ ನಿರಂತರ ಆದಾಯವಿದೆ. ಕೆಲವು ಸಂದರ್ಭಗಳಲ್ಲಿ  ಕೇಜಿಗೆ 5ರೂಪಾಯಿ ಬೆಲೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಮುನಿ ವೆಂಕಟರಮಣಪ್ಪ ಅವರ ಮೊಬೈಲ್ ನಂಬರ್ 9900275389 
                                                                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT