ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗಾ ಸಂಚಾರಿ ಪೀಠಕ್ಕೆ ಸೇರ್ಪಡೆಗೆ ವಿರೋಧ

Last Updated 9 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ಹೂವಿನಹಡಗಲಿ: ಬಳ್ಳಾರಿ, ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳನ್ನು ಗುಲ್ಬರ್ಗಾದ ಹೈಕೋರ್ಟ್ ಸಂಚಾರಿ ಪೀಠಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ತಾಲ್ಲೂಕಿನ ವಕೀಲರ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ಗುಲ್ಬರ್ಗಾ ಹೈಕೋರ್ಟ್ ಸಂಚಾರಿ ಪೀಠಕ್ಕೆ ತಮ್ಮ ಜಿಲ್ಲೆಯ ನ್ಯಾಯಾಲಯಗಳನ್ನು ಸೇರಿಸುವುದನ್ನು ವಿರೋಧಿಸುವ ಪತ್ರವನ್ನು ತಹಶೀಲ್ದಾರ ಅನಿರುದ್ಧ ಶ್ರವಣ ಅವರಿಗೆ ಸಲ್ಲಿಸಿದರು.

ಹೂವಿನಹಡಗಲಿಯಿಂದ ಗುಲ್ಬರ್ಗಾ 450 ಕಿ.ಮೀ. ದೂರದಲ್ಲಿದೆ. ಈಗಿರುವ ಧಾರವಾಡದ ಸಂಚಾರಿ ಪೀಠವು ಕೇವಲ 140 ಕಿ.ಮೀ. ಅಂತರದಲ್ಲಿದ್ದು, ಸಾರ್ವಜನಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಬಳ್ಳಾರಿ, ಕೊಪ್ಪಳ ಜಿಲ್ಲಾ ನ್ಯಾಯಾಲಯಗಳನ್ನು ಗುಲ್ಬರ್ಗಾ ಸಂಚಾರಿ ಪೀಠಕ್ಕೆ ಸೇರಿಸಬಾರದು ಎಂದು ವಕೀಲರ ಸಂಘ ಒತ್ತಾಯಿಸಿತು.

ಬಳ್ಳಾರಿ, ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳನ್ನು ಗುಲ್ಬರ್ಗಾ ಸಂಚಾರಿ ಪೀಠಕ್ಕೆ ಸೇರಿಸುವಂತೆ ಗುಲ್ಬರ್ಗಾ ವಕೀಲರು ಹೋರಾಟ ಮಾಡುತ್ತಿದ್ದಾರೆ. ಆದರೆ ಬಳ್ಳಾರಿ ಅಥವಾ ಕೊಪ್ಪಳಕ್ಕೆ ಗುಲ್ಬರ್ಗಾ ಯಾವುದೇ ರೀತಿಯಲ್ಲಿಯೂ ಅನುಕೂಲಕರ ಅಲ್ಲ. ಗುಲ್ಬರ್ಗಾ ವಕೀಲರು ತಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೆ ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಅವರ ಧೋರಣೆಯನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟಿಸಲಾಗಿದೆ ಎಂದು ವಕೀಲರ ಸಂಘದ ಮುಖಂಡರು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ, ಉಪಾಧ್ಯಕ್ಷ ಗುರುಬಸವರಾಜ, ಕಾಯದರ್ಶಿ ವಸಂತ, ವಕೀಲರಾದ ಶ್ರೀಪ್ರಕಾಶ್, ಕೊಟ್ರಯ್ಯ ಪ್ರಸಾದಿಮಠ, ಪರಮೇಶ್ವರಪ್ಪ, ಐಗೋಳ್ ಚಿದಾನಂದ, ಸಿ.ಕೆ.ಎಂ.ಬಸವಲಿಂಗಸ್ವಾಮಿ, ಸುಧಾಕರ ಶಾನಭೋಗ, ಅಟವಾಳಿಗಿ ಕೊಟ್ರೇಶ್, ಜೆ.ಮಲ್ಲಣ್ಣ, ಮಂಜುನಾಥ ಜೈನ್, ಚಂದ್ರಾನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT