ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಗಳ ತಾಣ ಪಿಟಲ್‌ಖೋರಾ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಚ್ಚರಿ ಎನಿಸುವ ಗುಹಾಂತರ ದೇವಾಲಯಗಳ ಸಮೂಹ ಇರುವ ತಾಣ ಈ ಪಿಟಲ್‌ಖೋರಾ. ಇದು ಮಹಾರಾಷ್ಟ್ರಕ್ಕೆ ಸೇರಿದ ಸಹ್ಯಾದ್ರಿ ಬೆಟ್ಟ ಸಾಲುಗಳಲ್ಲಿ ಬರುವ ಸತಾಮಲಾ ಪ್ರದೇಶದಲ್ಲಿದೆ. ಅಲ್ಲಿ ಬೌದ್ಧ ಧರ್ಮಕ್ಕೆ ಸೇರಿದ 13 ಗುಹೆಗಳಿವೆ. ಅಲ್ಲಿರುವ ಬಹುತೇಕ ಗುಹೆಗಳು ಕಲಾತ್ಮಕ ಮತ್ತು ಚಿತ್ರಕಲೆಗಳಿಂದ ಆವೃತವಾಗಿದೆ. 1853ರಲ್ಲಿ ಪಿಟಲ್‌ಖೋರಾ ಗುಹೆಗಳ ಇರುವಿಕೆ ತಿಳಿದು ಬಂತು.

ಅಲ್ಲಿ ಒಂದನೇ ಶತಮಾನದ ರಚನೆಗಳನ್ನು ಕಾಣಬಹುದು. ಶಾತವಾಹನರ ಕಾಲದಲ್ಲಿ ಇವು ನಿರ್ಮಾಣವಾಗಿವೆ ಎನ್ನಲಾಗುತ್ತದೆ. ಇಂದು ಈ ಗುಹೆಗಳು ಹವಾಮಾನದ ವೈಪರೀತ್ಯಕ್ಕೆ ಸಿಲುಕಿ ಹಾಳಾಗುವ ಹಂತ ತಲುಪಿವೆ.

ಬೌದ್ಧರ ಹೀನಯಾನ ಕಾಲದಲ್ಲಿ ಈ ಗುಹೆಗಳು ನಿರ್ಮಾಣವಾಗಿವೆ ಎನ್ನಲಾಗಿದೆ. ಅಲ್ಲಿರುವ 13 ಗುಹೆಗಳನ್ನು ಎರಡು ವಿಭಾಗ ಮಾಡಲಾಗಿದೆ. 1-9 ಗುಹೆಗಳು ಉತ್ತರಕ್ಕೆ ಮುಖ ಮಾಡಿದ್ದರೆ, 10-14ನೇ ಗುಹೆಗಳು ದಕ್ಷಿಣಕ್ಕೆ ಮುಖಮಾಡಿವೆ.

ಮೊದಲ ಗುಹೆಯ ಪ್ರವೇಶ ದ್ವಾರ ನೈಸರ್ಗಿಕ ಎನಿಸುವಷ್ಟು ಸೊಗಸಾಗಿದೆ. ಎರಡನೇ ಗುಹೆ ವಿಹಾರದ ವಿನ್ಯಾಸ ಹೊಂದಿದೆ. ಮೂರನೇ ಗುಹೆ ಪ್ರಾರ್ಥನಾ ಮಂದಿರವಾದ ಕಾರಣ ಎರಡನೇ ಗುಹೆಯಲ್ಲಿ ಇರುವ ಬಂಡೆಯಲ್ಲಿ ಕೊರೆದ ಚರಂಡಿ, ನೀರು ಮುಂದಿನ ಗುಹೆಗೆ ಹರಿಯದಂತೆ ತಡೆ ಹಿಡಿಯಲು ನೆರವಾಗಿದೆ.

ಪ್ರಾರ್ಥನಾ ಮಂದಿರವಾದ ಮೂರನೇ ಗುಹೆಯಲ್ಲಿ ಅತ್ಯುತ್ತಮವಾದ ಚಿತ್ರಕಲೆಗಳಿವೆ. 37 ಕಂಬಗಳು ಮತ್ತು ಗೋಡೆಗಳ ಮೇಲಿನ ಕೆತ್ತನೆ ಆಕರ್ಷಕವಾಗಿವೆ. 10 ಮತ್ತು 11ನೇ ಕಂಬಗಳ ಮೇಲೆ ಪೈಥಾನ್ ದೊರೆಗಳು ಬರೆದ ಶಾಸನ ಇದೆ. ಆ ಕಂಬಗಳನ್ನು ಅವರು ದಾನ ಮಾಡಿದ್ದರು ಎಂಬ ಮಾಹಿತಿ ಕೂಡ ಅಲ್ಲಿದೆ.

ಅಲ್ಲಿ ಕೆತ್ತಿರುವ ಅಪರೂಪದ ಕಲಾಕೃತಿಗಳ ವರ್ಣನೆ ಅನನ್ಯ. ಜೊತೆಗೆ ಈ ಗುಹೆಗಳಲ್ಲಿ ಇರುವ ಯಕ್ಷ ಮತ್ತು ಹುಡುಗಿಯ ಚಿತ್ರಗಳಿಗೆ `ಅದ್ಭುತ~ ಎಂಬ ಬಣ್ಣನೆ ಸಿಕ್ಕಿದೆ. ಈ ಎಲ್ಲಾ ಗುಹೆಗಳ ಪ್ರವೇಶ ದ್ವಾರದಲ್ಲಿ ಇರುವ ಆನೆಗಳು, ಸರ್ಪಗಳ ಕೆತ್ತನೆಗಳೂ ಕೂಡ ವರ್ಣನಾತೀತ.

ಔರಂಗಾಬಾದ್ ಜಿಲ್ಲೆಗೆ ಸೇರಿದ ಈ ಗುಹಾಂತರ ದೇವಾಲಯಗಳು ಎಲ್ಲೋರದಿಂದ 40 ಕಿಮೀ ಮತ್ತು ಔರಂಗಾಬಾದ್‌ನಿಂದ 73 ಕಿಮೀ ದೂರ ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT