ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡ್ಸ್ ವಾಹನದಲ್ಲಿ ಪ್ರವಾಸಕ್ಕೆ ಬಂದ ಮಕ್ಕಳು

Last Updated 6 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಕೂಡಲಸಂಗಮ: ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಗೂಡ್ಸ್ (407) ವಾಹನದಲ್ಲಿ ಕೂಡಲಸಂಗಮಕ್ಕೆ ತಂದಿದ್ದರು.
ಕೂಡಲಸಂಗಮಕ್ಕೆ ಇವರು ಬಂದಾಗ ವಾಹನದಲ್ಲಿ 48 ಮಕ್ಕಳು ಹಾಗೂ ಶಿಕ್ಷಕರು ಕುಳಿತುಕೊಂಡಿದ್ದರು.

ಸರಕು  ಸಾಗಾಣಿಕೆ ಮಾಡಲು ಬಳಸುವ ವಾಹನದಲ್ಲಿ 48 ಮಕ್ಕಳನ್ನು ಮೇಲೆ  ಕೆಳಗೆ ಕೂಡಿಸಿ ಕೊಂಡು ಬರಲಾಗಿತ್ತು

ಸರಕಾರ ಶಾಲಾ ಪ್ರವಾಸಕ್ಕೆ ಸರಕಾರಿ ವಾಹನಗಳನ್ನೆ ಬಳಸಬೇಕು ಎಂಬ ನಿಯಮ ಮಾಡಿದೆ ಜೊತೆಗೆ  ಗೂಡ್ಸ್  ವಾಹನಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಾರದು ಎಂಬ ನಿಯಮವಿದ್ದರೂ ಮಕ್ಕಳನ್ನು ಅಂತಹ ವಾಹನದಲ್ಲೇ ಕರೆ ತರಲಾಗಿತ್ತು. ಮಕ್ಕಳು ಬ್ಯಾಗ್‌ಗಳನು ಮೂಲೆಗೆ ಹಾಕಿ ಪ್ಕಕದಲ್ಲೇ ಕುಳಿತುಕೊಂಡಿದ್ದರು.

ಬೀದರ ಜಿಲ್ಲೆಯಿಂದ ಕೂಡಲಸಂಗಮ ಸುಮಾರು 400 ಕಿ.ಮೀ   ದೂರವಿದೆ. ಇಂತಹ ವಾಹನದಲ್ಲಿ 48 ಮಕ್ಕಳು ಬರಲು ಎಷ್ಟು ಸಮಸ್ಯೆಯನ್ನು ಎದುರಿಸಬಹುದು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಶಾಲೆಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಬಸವರಾಜ ಗುಗ್ಗರಿ ಹಾಗ ಶಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT