ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ರಾಜೀನಾಮೆ ಬೇಡ- ಸಿಎಂ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ~ಭೂ ಹಗರಣ~ದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಗೃಹ ಸಚಿವ ಆರ್. ಅಶೋಕ್ ಅವರಿಂದ ಸದ್ಯಕ್ಕೆ ರಾಜೀನಾಮೆ ಪಡೆಯದೆ ಇರಲು ತೀರ್ಮಾನಿಸಿರುವ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ,  ಲೋಕಾಯುಕ್ತ ಪೊಲೀಸರ ತನಿಖೆ ಮುಗಿಯುವವರೆಗೂ ಕಾಯುವುದಾಗಿ ಹೇಳಿದ್ದಾರೆ.

`ಮಾಜಿ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ವಿರುದ್ಧ ಬಂದಿರುವ ಆರೋಪಗಳಿಂದ ಪಕ್ಷಕ್ಕೆ ಮುಜುಗರವಾಗಿದೆ. ಇದರಿಂದ ಸ್ವಲ್ಪ ಮಟ್ಟಿಗೆ ವರ್ಚಸ್ಸೂ ಕುಗ್ಗಿದೆ. ಆದರೆ, ಸರ್ಕಾರಕ್ಕೆ ಧಕ್ಕೆ ಆಗಿಲ್ಲ~ ಎಂದು ಸದಾನಂದಗೌಡ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಒಪ್ಪಿಕೊಂಡರು.

ಕೆಲವು ಕಿಡಿಗೇಡಿಗಳು `ನಿರ್ದಿಷ್ಟ ಕಾರ್ಯಸೂಚಿ~ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ನಿರಂತರ ದಾಳಿ ನಡೆಸಿದ್ದಾರೆ. ಇಂಥ ಆರೋಪಗಳಿಗೆ ಬೆಲೆ ಕೊಟ್ಟು ಪಕ್ಷದ ನಾಯಕರನ್ನು ಬಲಿ ಕೊಡುವುದು ಸರಿಯಾದ ಕ್ರಮ ಅಲ್ಲ ಎಂದರು.

ಗೃಹ ಸಚಿವರ ಮೇಲೆ ಮೊಕದ್ದಮೆ ಹೂಡಲು ಹಿಂದೆಯೂ ರಾಜ್ಯಪಾಲರ ಅನುಮತಿ ಕೇಳಲಾಗಿತ್ತು. ಈ ಮನವಿಯನ್ನು ಅವರು  ತಿರಸ್ಕರಿಸಿದ್ದರು. ಹೈಕೋರ್ಟ್ ಕೂಡಾ ಅನುಮತಿ ಕೊಡಲಿಲ್ಲ. ಇಷ್ಟಾದ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸದಾನಂದಗೌಡ ಟೀಕಿಸಿದರು.

`ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಗೃಹ ಸಚಿವರು ಹಸ್ತಕ್ಷೇಪ ಮಾಡುವುದಿಲ್ಲ. ಆ ಬಗ್ಗೆ ಆತಂಕ ಬೇಡ. ಲೋಕಾಯುಕ್ತ ಪೊಲೀಸರು ಸರ್ಕಾರದ ಅಧೀನದಲ್ಲಿ ಇರುವುದಿಲ್ಲ. ಪೊಲೀಸರು ಒಮ್ಮೆ ಲೋಕಾಯುಕ್ತಕ್ಕೆ ವರ್ಗವಾದರೆ ಮುಗಿಯಿತು. ನಮ್ಮ ಪಾತ್ರ ಏನೂ ಇರುವುದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT