ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟ್‌ಯೇತರ ನೌಕರರಿಗೆ ರೂ 3,500 ಬೋನಸ್

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗೆಜೆಟ್‌ಯೇತರ ಕೇಂದ್ರ ಸರ್ಕಾರಿ ನೌಕರರಿಗೆ 2011-12ನೇ ಸಾಲಿನಲ್ಲಿ ಹಬ್ಬದ ಕೊಡುಗೆಯಾಗಿ 3,500 ರೂವರೆಗೆ ಬೋನಸ್ ಘೋಷಿಸಲಾಗಿದೆ.

ಉತ್ಪಾದನೆಗೆ ಸಂಬಂಧಿಸಿದ ಯಾವುದೇ ಬೋನಸ್ ಯೋಜನೆಗೆ ಒಳಪಡದ `ಗ್ರೂಪ್ `ಸಿ~ ಮತ್ತು `ಡಿ~ ನೌಕರರು ಹಾಗೂ ಗ್ರೂಪ್ `ಬಿ~ಯ ಗೆಜೆಟೆಯೇತರ ನೌಕರರಿಗೆ ಒಂದು ತಿಂಗಳ ವೇತನದಷ್ಟು ಬೋನಸ್ ನೀಡಲಾಗುತ್ತದೆ~ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪತ್ರದಲ್ಲಿ ತಿಳಿಸಲಾಗಿದೆ.

ಕೇಂದ್ರ ಪೊಲೀಸ್, ಅರೆಸೇನಾ ಪಡೆ ಹಾಗೂ ಸಶಸ್ತ್ರ ಪಡೆ ಸಿಬ್ಬಂದಿಗೂ ಬೋನಸ್ ಸಿಗಲಿದೆ. 2012ರ ಮಾರ್ಚ್ 31ರ ವರೆಗೆ ಸೇವೆಯಲ್ಲಿದ್ದವರು ಹಾಗೂ 2011-12ನೇ ಸಾಲಿನಲ್ಲಿ ಕನಿಷ್ಠ 6 ತಿಂಗಳು ನಿರಂತರ ಸೇವೆಯಲ್ಲಿ ಮುಂದುವರಿದ ನೌಕರರು ಈ ಬೋನಸ್ ಪಡೆಯುವುದಕ್ಕೆ ಅರ್ಹರು.

ಕೇಂದ್ರ ಸರ್ಕಾರವು ಕಳೆದ ತಿಂಗಳು 80 ಲಕ್ಷ ನೌಕರರು ಹಾಗೂ ಪಿಂಚಣಿದಾರರಿಗೆ ಶೇ 7ರಷ್ಟು ಡಿಎ ಹೆಚ್ಚಿಸಿತ್ತು. ಇದರಿಂದಾಗಿ ವಾರ್ಷಿಕವಾಗಿ ಬೊಕ್ಕಸಕ್ಕೆ  9,700 ಕೋಟಿ ರೂಪಾಯಿ ಹೊರೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT