ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಟಿಟ್: ಬೆರಳ ತುದಿಯಲ್ಲಿ ಮಾಹಿತಿ

Last Updated 30 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಕು- ಸೇವೆಗಳ ಪೂರೈಕೆದಾರರು ಮತ್ತು ವಹಿವಾಟುದಾರರ ಮಾಹಿತಿಯನ್ನು ಗೆಟಿಟ್ ಇನ್ಫೊಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಈಗ ಬೆರಳ ತುದಿಯಲ್ಲಿಯೇ ಗ್ರಾಹಕರಿಗೆ  ಒದಗಿಸಲು ಮುಂದಾಗಿದೆ.

25 ವರ್ಷಗಳಿಂದ ಯೆಲ್ಲೊ ಪೇಜಸ್ ಮೂಲಕ ಗ್ರಾಹಕರು, ವಹಿವಾಟುದಾರರಿಗೆ ಅಗತ್ಯವಾದ ಮಾಹಿತಿ ಒದಗಿಸುತ್ತಿದ್ದ ಸಂಸ್ಥೆಯು, ಈಗ  ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೊಬೈಲ್ ನೆರವಿನಿಂದ ಧ್ವನಿ ಆಧಾರಿತ `ಗೆಟಿಟ್ ಫ್ರೀಆಡ್ಸ್~, `ಕಾಲ್ ಗೆಟಿಟ್~ ಸೌಲಭ್ಯಗಳಿಗೆ ಗುರುವಾರ ಇಲ್ಲಿ ಚಾಲನೆ ನೀಡಿತು.

 ಈ ಸೇವೆಗಳು ಹೊಸ ತಲೆಮಾರಿನ  ಮಾಹಿತಿ ಶೋಧ ಸೌಲಭ್ಯಗಳಾಗಿವೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ  ಸಿದ್ದಾರ್ಥ ಗುಪ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರಕುಗಳ ಖರೀದಿ ಮತ್ತು ಮಾರಾಟ ಚಟುವಟಿಕೆಗಳಿಗೆ ಈ ಸೌಲಭ್ಯಗಳು ಹೆಚ್ಚು ಉಪಯುಕ್ತವಾಗಿರಲಿವೆ. ದೇಶದ ಯಾವುದೇ ಮೂಲೆಯಲ್ಲಿ ಇರುವ  ಗ್ರಾಹಕರು ಈಗ 4444 4444  ಸಂಖ್ಯೆಗೆ ಕರೆ ಮಾಡಿ ತಮ್ಮ ನಗರ ಅಥವಾ ಇತರ ಪಟ್ಟಣಗಳಲ್ಲಿ ಲಭ್ಯ  ಇರುವ ಸರಕು -   ಸೇವೆಗಳ ಮಾಹಿತಿ ಪಡೆಯಬಹುದು. ಇದು ಸರಳ, ತ್ವರಿತ ಮತ್ತು ಉಚಿತ  ಸೇವೆ. ಗ್ರಾಹಕರು ಇನ್ನು ಮುಂದೆ ಗೃಹೋತ್ಪನ್ನ ವಸ್ತು, ಉದ್ಯೋಗ, ವಾಹನ, ಆಸ್ತಿ, ಶಿಕ್ಷಣ,, ಮನೆಪಾಠ, ವಹಿವಾಟು, ಸೇವೆ, ಕಂಪ್ಯೂಟರ್, ಮೊಬೈಲ್ ಫೋನ್, ಆರೋಗ್ಯ ರಕ್ಷಣೆ ಮತ್ತಿತರ  ವ್ಯಕ್ತಿಗತ ಸೇವೆ ಇತ್ಯಾದಿಗಳ ಕುರಿತು ತಮ್ಮ ಜಾಹೀರಾತನ್ನು ಉಚಿತವಾಗಿ ನೀಡಬಹುದು. ಇದರಿಂದಾಗಿ ಖರೀದಿ ಮತ್ತು ಮಾರಾಟ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲಿದೆ ಎಂದರು.

ಗೆಟಿಟ್ ಎಸ್‌ಎಂಎಸ್ ಅಪ್ಲಿಕೇಷನ್ ಮೂಲಕವೂ ಸ್ಮಾರ್ಟ್‌ಫೋನ್ ಇಲ್ಲದವರೂ ಸ್ಥಳೀಯವಾದ ಮಾಹಿತಿ ಪಡೆಯಬಹುದು. ಈ  ಎಸ್‌ಎಂಎಸ್ ಆಧಾರಿತ ಮೊಬೈಲ್ ಬ್ರೌಸರ್ (ಅಂತರಜಾಲ ದರ್ಶಕ) ಅನ್ನು ಶಾರ್ಟ್‌ಹ್ಯಾಂಡ್ ಮೊಬೈಲ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಸುಲಲಿತವಾಗಿ ಮತ್ತು ಸುಲಭವಾಗಿ ಮಾಹಿತಿ  ಶೋಧಿಸಲು ಇದು ಗ್ರಾಹಕರಿಗೆ ನೆರವಾಗುತ್ತದೆ.

`ಎಂಡಾಟ್‌ಗೆಟಿಟ್‌ಡಾಟ್‌ಇನ್~  (m.getit.in) ಸೇವೆಯಲ್ಲಿ ಗ್ರಾಹಕರು ಮೊಬೈಲ್‌ನಲ್ಲಿ ವಿವಿಧ ಕಂಪೆನಿಗಳು, ಬ್ರಾಂಡ್‌ಗಳು ಮತ್ತು ಸೇವೆಗಳಿಗಾಗಿ ಯಾವ ಸಮಯದಲ್ಲಿಯೂ, ಯಾವ ಕಡೆಯಿಂದಲೂ ಮಾಹಿತಿಯನ್ನು ಶೋಧಿಸಬಹುದು. `ಎಂಡಾಟ್‌ಫ್ರೀಆಡ್ಸ್‌ಡಾಟ್‌ಇನ್~ (m.free­ads.in) ಸೇವೆಯಲ್ಲಿ ಗ್ರಾಹಕರು ಮೊಬೈಲ್ ಮೂಲಕ ಯಾವುದೇ ಸರಕು ಮಾರಾಟ ಮಾಡಬಹುದು, ಖರೀದಿಸಬಹುದು.  ಸ್ಥಳೀಯವಾಗಿ ಮತ್ತು ರಾಷ್ಟ್ರಮಟ್ಟದಲ್ಲಿಯೂ ಉತ್ಪನ್ನಗಳನ್ನು ಖರೀದಿಸುವ ಸೌಲಭ್ಯ ಇಲ್ಲಿದೆ ಎಂದು ಸಿದ್ದಾರ್ಥ ಗುಪ್ತಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT