ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆರೆಥ್ ಬೇಲ್‌ಗೆ ರೂ 877 ಕೋಟಿ

Last Updated 2 ಸೆಪ್ಟೆಂಬರ್ 2013, 20:19 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವೇಲ್ಸ್‌ನ ಫುಟ್‌ಬಾಲ್ ಆಟಗಾರ ಗೆರೆಥ್ ಬೇಲ್ ವಿಶ್ವ ದಾಖಲೆಯ ಮೊತ್ತಕ್ಕೆ ರಿಯಲ್ ಮ್ಯಾಡ್ರಿಡ್ ತಂಡದ ಪಾಲಾಗಿದ್ದಾರೆ. ಈ ಮೊದಲು ಟೊಟೆನ್‌ಹ್ಯಾಮ್ ತಂಡದಲ್ಲಿದ್ದ ಅವರನ್ನು ಸುಮಾರು 877 ಕೋಟಿ ರೂಪಾಯಿ ನೀಡಿ ರಿಯಲ್ ಮ್ಯಾಡ್ರಿಡ್ ಆಡಳಿತ ಖರೀದಿಸಿದೆ.

ಈ ಮೊದಲು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ 810 ಕೋಟಿ ರೂಪಾಯಿ ನೀಡಿ ಸ್ಪೇನ್‌ನ ಲಾ ಲೀಗಾ ಕ್ಲಬ್ ರಿಯಲ್ ಮ್ಯಾಡ್ರಿಡ್ ಖರೀದಿಸಿತ್ತು. 2009ರಲ್ಲಿ ಈ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ರೊನಾಲ್ಡೊ ಆಗ ಎಸಿ ಮಿಲಾನ್ ತಂಡದಲ್ಲಿದ್ದರು.  24 ವರ್ಷ ವಯಸ್ಸಿನ ಗೆರೆಥ್ ಫ್ರೀ ಕಿಕ್ ಪರಿಣತ. ಅವರು ಸೋಮವಾರ ನೂತನ ಕ್ಲಬ್ ಸೇರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT