ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಷ್ಟೇ ನಮ್ಮಗುರಿ: ಪ್ರಸಾದ್‌

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಕ್ರಿಕೆಟ್‌ ಬದುಕಿನ ಎಲ್ಲಾ ಕನಸುಗಳು ಚಿಗುರೊಡೆದಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಇಲ್ಲಿ ನನಗೆ ಸಾಕಷ್ಟು ಮಧುರ ನೆನಪುಗಳಿವೆ. ಆದರೆ, ನಾನೀಗ ಇದೇ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಎದುರು ನಮ್ಮ ಆಟಗಾರರು ಉತ್ತಮ ಪ್ರದರ್ಶನ ತೋರಬೇಕೆಂದು ಬಯಸುತ್ತೇನೆ..’
–ಉತ್ತರ ಪ್ರದೇಶ ರಣಜಿ ತಂಡದ ತರಬೇತುದಾರರಾಗಿರುವ ಕನ್ನಡಿಗ ವೆಂಕಟೇಶ್‌ ಪ್ರಸಾದ್‌ ಹೇಳಿದ ಮಾತಿದು.

ವೇಗದ ಬೌಲರ್‌ ಪ್ರಸಾದ್‌ ಎರಡು ವರ್ಷಗಳಿಂದ ಉತ್ತರ ಪ್ರದೇಶಕ್ಕೆ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಹಿಂದೆಯೂ ಬೇರೆ ರಾಜ್ಯದ ತಂಡಗಳಿಗೆ ಕರ್ನಾಟಕದವರು ಕೋಚ್‌ ಆಗಿ ಕೆಲಸ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ.

‘ನಾನು ಇಲ್ಲಿಯವನೇ ಆದರೂ, ಸದ್ಯಕ್ಕೆ ಉತ್ತರ ಪ್ರದೇಶ ತಂಡದ ಕೋಚ್‌. ವೃತ್ತಿಪರನಾಗಿ ನನ್ನ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ. ಕರ್ನಾಟಕವೂ ಬಲಿಷ್ಠ ತಂಡ. ಬಲಿಷ್ಠರ ಎದುರು ನಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ’ ಎಂದು ವೇಗಿ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

ಅಸಮಾಧಾನ: ನ್ಯೂಜಿಲೆಂಡ್‌ ಎದುರಿನ ಸರಣಿಗೆ ಆಯ್ಕೆಯಾಗಿರುವ ರೈನಾ ಮತ್ತು ಭುವನೇಶ್ವರ್‌ ತಂಡದಲ್ಲಿ ಇಲ್ಲದಿರುವುದು ಪ್ರಸಾದ್‌ ಬೇಸರಕ್ಕೆ ಕಾರಣವಾಗಿದೆ.

ಕಿವೀಸ್‌ ಎದುರಿನ ಏಕದಿನ ಸರಣಿ ಜನವರಿ 19ರಿಂದ ಆರಂಭವಾಗಲಿದೆ. ಆದರೆ, ಭಾರತ ಏಳು ದಿನಗಳ (ಜ. 12) ಮುಂಚಿತವೇ ಅಲ್ಲಿಗೆ ತೆರಳುತ್ತಿದೆ.

ಬಿಸಿಸಿಐನ ಈ ತೀರ್ಮಾನಕ್ಕೆ ಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಕಳೆದ ವರ್ಷವೂ ಆರ್‌.ಪಿ. ಸಿಂಗ್‌ ಮತ್ತು ಪ್ರವೀಣ್‌ ಕುಮಾರ್‌ ರಾಷ್ಟ್ರೀಯ ತಂಡದಲ್ಲಿದ್ದ ಕಾರಣ ಕೆಲ ರಣಜಿ ಪಂದ್ಯಗಳನ್ನು ಆಡಿರಲಿಲ್ಲ.

‘ಒಂದು ವಾರ ಮುಂಚಿತ ಭಾರತ ತಂಡ ತೆರಳುತ್ತಿದೆ. ಜ. 12ರ ಬದಲು 13ರಂದು ತೆರಳಿದ್ದರೆ ಸೂಕ್ತವಿತ್ತು. ಇದರಿಂದ ನಮ್ಮ ತಂಡಕ್ಕೆ ಅನುಭವಿ ಆಟಗಾರರು ಸಿಗುತ್ತಿದ್ದರು’ ಎಂದು ಪ್ರಸಾದ್‌ ಇತ್ತೀಚಿಗೆ ಅಸಮಾಧಾನ ಹೊರ ಹಾಕಿದ್ದರು.

ಆಗ ಒಂದೇ ತಂಡ, ಈಗ ಎದುರಾಳಿ ಕೋಚ್‌!
ವೆಂಕಟೇಶ್‌ ಪ್ರಸಾದ್‌ 2003ರಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿದಾಗ, ಈಗ ಕರ್ನಾಟಕ ತಂಡದ ಬ್ಯಾಟಿಂಗ್‌ ತರಬೇತುದಾರ ಆಗಿರುವ ಅರುಣ್‌ ಕುಮಾರ್‌ ನಾಯಕರಾಗಿದ್ದರು. ಒಂದೇ ತಂಡದ ಆಟಗಾರರು ಈಗ ಬೇರೆ ಬೇರೆ ತಂಡಗಳಿಗೆ ಕೋಚ್‌ ಆಗಿದ್ದಾರೆ!

ಪಂದ್ಯಕ್ಕೆ ಉಚಿತ ಪ್ರವೇಶ

ಬೆಂಗಳೂರು: ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.  ಕ್ವೀನ್ಸ್‌್ ರಸ್ತೆಯಲ್ಲಿರುವ ಗೇಟ್‌ ಸಂಖ್ಯೆ 4ರಿಂದ ಕ್ರೀಡಾಂಗಣದ ಒಳಗೆ ಬರಲು ಅವಕಾಶವಿದೆ ಎಂದು ಕೆಎಸ್‌ಸಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT