ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗೆ ಸ್ಪಿನ್ನರ್‌ಗಳೇ ಕಾರಣ

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: `ಸ್ಪಿನ್ನರ್‌ಗಳಾದ ಕೆ.ಪಿ.ಅಪ್ಪಣ್ಣ ಹಾಗೂ ಅಮಿತ್ ವರ್ಮಾ ಅದ್ಭುತವಾಗಿ ಬೌಲ್ ಮಾಡಿದರು. ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ತಂಡ ಇನಿಂಗ್ಸ್ ಅಂತರದಿಂದ ಜಯ ಗಳಿಸಲು ಸಾಧ್ಯವಾಯಿತು~ ಎಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಆರ್.ವಿನಯ್‌ಕುಮಾರ್ ಹರ್ಷಿಸಿದರು.

ರೇಲ್ವೇಸ್ ವಿರುದ್ಧದ ರಣಜಿ ಸೂಪರ್ ಲೀಗ್ `ಎ~ ಗುಂಪಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸು ಅವರ ಮೊಗದಲ್ಲಿ ಲಾಸ್ಯವಾಡುತ್ತಿತ್ತು. `ನಿಧಾನಗತಿ ವಿಕೆಟ್ ಇದಾಗಿದ್ದರಿಂದ ವೇಗದ ಬೌಲರ್‌ಗಳಿಗೆ ಇಲ್ಲಿ ಹೆಚ್ಚಿನ ಕೆಲಸ ಇರಲಿಲ್ಲ. ಸ್ಪಿನ್ನರ್‌ಗಳು ಅದರಲ್ಲೂ ಅಪ್ಪಣ್ಣ ಅವರ ಬೌಲಿಂಗ್ ದಾಳಿ ಅತ್ಯಂತ ಮೊನಚಿನಿಂದ ಕೂಡಿತ್ತು. ಪಂದ್ಯದಲ್ಲಿ ಎಲ್ಲವೂ ನಮ್ಮ ನಿರೀಕ್ಷೆ ಪ್ರಕಾರವೇ ನಡೆಯಿತು~ ಎಂದು ಅವರು ಹೇಳಿದರು.

`ಇಂದಿನ ಇನಿಂಗ್ಸ್ ಗೆಲುವಿನಿಂದ ಉದಯಪುರದಲ್ಲಿ ಗೆಲ್ಲಲಾಗದ ನಿರಾಸೆ ಕಡಿಮೆಯಾಗಿದೆ~ ಎಂದು ಅವರು ತಿಳಿಸಿದರು. `ರಾಜಸ್ತಾನ ವಿರುದ್ಧದ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಅಪ್ಪಣ್ಣ, ನಮ್ಮ ಅನುಭವಿ ಸ್ಪಿನ್ನರ್ ಆಗಿದ್ದ ಸುನಿಲ್ ಜೋಶಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ~ ಎಂದು ಅವರು ಹೇಳಿದರು.

`ಎರಡು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಗಳಿಸಿರುವ ನಾವು ಮುಂದಿನ ಪಂದ್ಯವನ್ನು ಮುಂಬಯಿ ವಿರುದ್ಧ ಆಡಲಿದ್ದೇವೆ. ಈ ಗೆಲುವು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ~ ಎಂದರು ವಿನಯ್.

ಪಂದ್ಯವೊಂದರಲ್ಲಿ ಮೊದಲ ಸಲ ಹತ್ತು ವಿಕೆಟ್ ಗಳಿಸಿದ ಸಾಧನೆ ಮಾಡಿದ ಅಪ್ಪಣ್ಣ, `ನನ್ನ ಶ್ರೇಷ್ಠ ಸಾಧನೆ ತಂಡದ ಗೆಲುವಿಗೆ ಕಾರಣವಾಗಿದ್ದು ಸಂತಸ ತಂದಿದೆ~ ಎಂದರು. `ಮೊದಲ ಸಲ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಸಿಕ್ಕಿದ್ದೂ ಖುಷಿ ಕೊಟ್ಟಿದೆ~ ಎಂದು ಅವರು ಹೇಳಿದರು.

ರಣಜಿ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆಯನ್ನೂ ಅಪ್ಪಣ್ಣ ಈ ಪಂದ್ಯದ ಮೂಲಕ ಮಾಡಿದ್ದಾರೆ. ಆ ಸಂಭ್ರಮದಲ್ಲಿ ಕೂಡ ಅವರು ತೇಲಾಡುತ್ತಿದ್ದರು. ಕೋಚ್ ಕೆ.ಜಸ್ವಂತ್, ಮ್ಯಾನೇಜರ್ ಕೆ.ಸುಧಾಕರರಾವ್, ಸಹಾಯಕ ಕೋಚ್ ಸೋಮಶೇಖರ್ ಶಿರಗುಪ್ಪಿ, ಆಯ್ಕೆ ಸಮಿತಿ ಸದಸ್ಯ ಅಶೋಕಾನಂದ ತಂಡದ ಗೆಲುವಿನಿಂದ ಹರ್ಷಚಿತ್ತರಾಗಿ ಆಟಗಾರರನ್ನು ಆತ್ಮೀಯವಾಗಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT