ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹಾದಿಗೆ ಮರಳಿದ ದೆಹಲಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಯಕ ಶಿಖರ್ ಧವನ್ (ಅಜೇಯ 116, 194ಎಸೆತ, 12 ಬೌಂಂಡರಿ, 1ಸಿಕ್ಸರ್) ಶತಕದ ನೆರವಿನಿಂದ ದೆಹಲಿ ತಂಡ ಇಲ್ಲಿ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮಹಾರಾಷ್ಟ್ರ ವಿರುದ್ಧದ `ಬಿ' ಗುಂಪಿನ ಲೀಗ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕಳೆದ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 159 ರನ್‌ಗಳ ಸೋಲು ಕಂಡಿದ್ದ ದೆಹಲಿ ಈ ಜಯದ ಮೂಲಕ ಗೆಲುವಿನ ಹಾದಿಗೆ ಮರಳಿತು.

ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರೂ, ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಆತಿಥೇಯ ತಂಡದವರು ಜಯ ಪಡೆದುಕೊಂಡರು. ಮೂರನೇ ದಿನವಾದ ಸೋಮವಾರದ ಅಂತ್ಯಕ್ಕೆ ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್‌ನಲ್ಲಿ 266 ರನ್‌ಗೆ ಆಲ್‌ಔಟ್ ಆಗಿತ್ತು. ದೆಹಲಿ ಗೆಲುವಿಗೆ 269 ರನ್‌ಗಳು ಅಗತ್ಯವಿದ್ದವು. ಈ ಗುರಿಯನ್ನು ಧವನ್ ಬಳಗ 65.3 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿತು.

ಆರಂಭಿಕ ಬ್ಯಾಟ್ಸ್‌ಮನ್ ಧವನ್ 297 ನಿಮಿಷ ಕ್ರೀಸ್‌ಗೆ ಅಂಟಿಕೊಂಡು ನಿಂತು ಮಹಾರಾಷ್ಟ್ರದ ಬೌಲರ್‌ಗಳ ತಾಳ್ಮೆಗೆ ಸವಾಲಾದರು. ನಾಲ್ಕನೇ ಓವರ್‌ನಲ್ಲಿ ಉನ್ಮುಕ್ತ ಚಾಂದ್ (2) ಅವರನ್ನು ಬೇಗನೇ ಕಳೆದುಕೊಂಡರೂ, ನಿಧಾನವಾಗಿ ದೆಹಲಿ ಆರಂಭಿಕ ಸಂಕಷ್ಟದಿಂದ ಪಾರಾಯಿತು. ನಂತರ ಬಂದ ಮೋಹಿತ್ ಶರ್ಮಾ (51, 91ಎಸೆತ, 9 ಬೌಂಡರಿ) ಹಾಗೂ ಮಿಥುನ್ ಮನ್ಹಾಸ್ (51, 40ಎಸೆತ, 5ಬೌಂಡರಿ, 3 ಸಿಕ್ಸರ್) ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗ್ವಾಲಿಯರ್ ವರದಿ:  ದೇವೀಂದ್ರ ಬುಂದೇಲ (ಅಜೇಯ 100) ಶತಕದ ಬಲದಿಂದ ಮಧ್ಯಪ್ರದೇಶ ತಂಡ ಇಲ್ಲಿ ನಡೆದ `ಎ' ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತು.

ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ 55.2 ಓವರ್‌ಗಳಲ್ಲಿ 196 ಮತ್ತು ದ್ವಿತೀಯ ಇನಿಂಗ್ಸ್ 90.4 ಓವರ್‌ಗಳಲ್ಲಿ 266. ದೆಹಲಿ 77 ಓವರ್‌ಗಳಲ್ಲಿ 193 ಹಾಗೂ ಎರಡನೇ ಇನಿಂಗ್ಸ್ 65.3 ಓವರ್‌ಗಳಲ್ಲಿ 3 ವಿಕೆಟ್‌ಗೆ 273. (ಶಿಖರ್ ಧವನ್ ಔಟಾಗದೆ 116, ಮೋಹಿತ್ ಶರ್ಮಾ 51, ಮಿಥುನ್ ಮನ್ಹಾಸ್ 51, ವಿಪ್ಲವ್ ರಾವಲ್ ಔಟಾಗದೆ 35; ಶ್ರೀಕಾಂತ್ ಮುಂದೆ 61ಕ್ಕೆ2). ಫಲಿತಾಂಶ: ದೆಹಲಿಗೆ 7 ವಿಕೆಟ್ ಗೆಲುವು ಹಾಗೂ ಆರು ಪಾಯಿಂಟ್.

ಮಧ್ಯ ಪ್ರದೇಶ 110.2 ಓವರ್‌ಗಳಲ್ಲಿ 323 ಹಾಗೂ ಎರಡನೇ ಇನಿಂಗ್ಸ್ 45. ಓವರ್‌ಗಳಲ್ಲಿ 2 ವಿಕೆಟ್‌ಗೆ 293. (ಜಲಜ್ ಸಕ್ಸೆನಾ ಔಟಾಗದೆ 72, ದೇವೀಂದ್ರ ಬುಂದೇಲ ಔಟಾಗದೆ 100; ಸಂದೀಪ್ ಶರ್ಮಾ 39ಕ್ಕೆ2). ಫಲಿತಾಂಶ: ಮಧ್ಯಪ್ರದೇಶಕ್ಕೆ ಎಂಟು ವಿಕೆಟ್ ಜಯ ಮತ್ತು ಆರು ಪಾಯಿಂಟ್.

ಹಿಮಾಚಲ ಪ್ರದೇಶ 126 ಓವರ್‌ಗಳಲ್ಲಿ 338 ಮತ್ತು ದ್ವಿತೀಯ ಇನಿಂಗ್ಸ್ 71.4 ಓವರ್‌ಗಳಲ್ಲಿ 237. ಗೋವಾ 143.3 ಓವರ್‌ಗಳಲ್ಲಿ ಪ್ರಥಮ ಇನಿಂಗ್ಸ್ 347. ಫಲಿತಾಂಶ: ಡ್ರಾ. ಗೋವಾಕ್ಕೆ 3, ಹಿಮಾಚಲ ಪ್ರದೇಶಕ್ಕೆ 1 ಅಂಕ.

ರೈಲ್ವೇಸ್ 145.2 ಓವರ್‌ಗಳಲ್ಲಿ 405 ಮತ್ತು ಎರಡನೇ ಇನಿಂಗ್ಸ್ 99 ಓವರ್‌ಗಳಲ್ಲಿ 258. ರಾಜಸ್ತಾನ 64 ಓವರ್‌ಗಳಲ್ಲಿ 135 ಮತ್ತು ದ್ವಿತೀಯ ಇನಿಂಗ್ಸ್ 99 ಓವರ್‌ಗಳಲ್ಲಿ 258. ಫಲಿತಾಂಶ: ರೈಲ್ವೇಸ್‌ಗೆ ಇನಿಂಗ್ಸ್ ಹಾಗೂ 12 ರನ್‌ಗಳ ಗೆಲುವು. ಏಳು ಅಂಕ.
ಮುಂಬೈ 162 ಓವರ್‌ಗಳಲ್ಲಿ 606ಕ್ಕೆ5 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 44 ಓವರ್‌ಗಳಲ್ಲಿ 5 ವಿಕೆಟ್‌ಗೆ 169. ಸೌರಾಷ್ಟ್ರ ಪ್ರಥಮ ಇನಿಂಗ್ಸ್ 131.5 ಓವರ್‌ಗಳಲ್ಲಿ 300. ಫಲಿತಾಂಶ: ಡ್ರಾ. ಮುಂಬೈ 3, ಸೌರಾಷ್ಟ್ರಕ್ಕೆ 1 ಪಾಯಿಂಟ್.

ಉತ್ತರ ಪ್ರದೇಶ 73 ಓವರ್‌ಗಳಲ್ಲಿ 227 ಹಾಗೂ ದ್ವಿತೀಯ ಇನಿಂಗ್ 11 ಓವರ್‌ಗಳಲ್ಲಿ 348. ಹರಿಯಾಣ 102.1 ಓವರ್‌ಗಳಲ್ಲಿ 276, ಎರಡನೇ ಇನಿಂಗ್ಸ್ 43 ಓವರ್‌ಗಳಲ್ಲಿ 3 ವಿಕೆಟ್‌ಗೆ 106. ಫಲಿತಾಂಶ: ಡ್ರಾ. ಹರಿಯಾಣ 3, ಉತ್ತರ ಪ್ರದೇಶ 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT