ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇರು ಉದ್ಯಮ; ಹಾದಿ ದುರ್ಗಮ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಮಳೆಗಾಲ ಆರಂಭವಾಗಿದೆ. ಗೇರು ಬೀಜದ ಕೊಯ್ಲೂ ಮುಗಿದಿದೆ,   ಸಂಸ್ಕರಣಾ ಉದ್ಯಮ  ಚುರುಕಾಗಿದೆ. ನಮ್ಮ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು, ಹಣ, ಪ್ರಸಿದ್ಧಿ ಗಳಿಸಿಕೊಟ್ಟ, ಹಳೆಯ ಉದ್ಯಮಗಳಲ್ಲಿ ಗೇರು ಉದ್ಯಮ ಸಹ ಒಂದು.

ವಾರ್ಷಿಕ ಸುಮಾರು ರೂ 2800 ಕೋಟಿಗಳಷ್ಟು  ವಿದೇಶಿ ವಿನಿಮಯ ಗಳಿಕೆ ಇದರ ಹೆಗ್ಗಳಿಕೆ. ಈ ವರ್ಷ ಕಚ್ಚಾ ಬೀಜಕ್ಕೆ ದೊರೆತ ಐತಿಹಾಸಿಕ ಅತ್ಯುತ್ತಮ ಬೆಲೆ ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಿದೆ.

ಭಾರತದ ಗೇರುಬೀಜಕ್ಕೆ ಜಾಗತಿಕ ಮಟ್ಟದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ರುಚಿ, ಬಣ್ಣಗಳಲ್ಲಿ ಇದಕ್ಕೇ ಅಗ್ರಸ್ಥಾನ. ಸಂಸ್ಕರಣೆಯಲ್ಲೂ ಭಾರತೀಯರಿಗಿರುವ ಕೈಚಳಕಕ್ಕೆ ಬೇರೆ ಸಾಟಿುಲ್ಲ. ಭಾರತೀಯರು ಸಂಸ್ಕರಿಸಿದ ಬೀಜದಲ್ಲಿ ಅರ್ಧಕ್ಕಿಂತ ಹೆಚ್ಚು ಸುಮಾರು 1.25 ಲಕ್ಷ ಟನ್, ಸ್ಥಳೀಯ ಮಾರುಕಟ್ಟೆಯಲ್ಲಿಯೇ ಬಳಸಲಾಗುತ್ತಿದೆ. ಪ್ರತಿ ವರ್ಷ ಈ ಬೇಡಿಕೆಯೂ   ಏರುತ್ತಿದೆ.  ಹಲವು ದಶಕಗಳ ಜಾಗತಿಕ ಮಾರುಕಟ್ಟೆಯ ಅನುಭವವು ದೇಶಿ ಉದ್ಯಮಕ್ಕೆ ಸಾಕಷ್ಟು ಆತ್ಮವಿಶ್ವಾಸವನ್ನೂ ನೀಡಿದೆ.

ಉತ್ಪಾದನೆಯ ದೃಷ್ಟಿಯಿಂದ, ದೇಶದಲ್ಲಿ ನಮ್ಮ ಸಂಸ್ಕರಣಾ ಘಟಕಗಳ ಸಾಮರ್ಥ್ಯದ  ಅರ್ಧದಷ್ಟು (ಸುಮಾರು 6.5 ಲಕ್ಷ ಟನ್ ) ಕಚ್ಚಾಬೀಜ ಮಾತ್ರ ಉತ್ಪಾದನೆ ನಡೆಯುತ್ತಿದೆ.  ಕಚ್ಚಾ ಬೀಜಕ್ಕೆ  ತುಂಬಾ ಬೇಡಿಕೆ ಇದೆ.  ಈ ಬೆಳೆ ಹೆಚ್ಚು ಆರೈಕೆ ಬೇಡದ ಜನಸಾಮಾನ್ಯರ ಬೆಳೆಯಾಗಿದ್ದು, ಗುಡ್ಡ ಬೆಟ್ಟ, ಅರೆ ಒಣಭೂಮಿ ಪ್ರದೇಶದಲ್ಲೂ ಬೆಳೆಯಬಹುದಾದ ಅವಕಾಶಗಳೂ ಸಾಕ್ಟವೆ.

ಬೆಲೆಯ ದೃಷ್ಟಿಯಿಂದ ಈಗ ಈ ಬೆಳೆಗೆ  ಶುಕ್ರದೆಸೆ. ಕಳೆದ ಎರಡು ದಶಕಗಳಲ್ಲಿ ಕೆ.ಜಿಗೆ ರೂ 30-50   ದಾಟದಿದ್ದ ಕಚ್ಚಾ ಬೀಜದ ಬೆಲೆ ಈ ವರ್ಷ ರೂ 65-80ರ ದಾಖಲೆ ಏರಿಕೆ ಕಂಡಿದೆ.

ಇಂತಹ ಬೆಲೆ ಮುಂದೆಯೂ ಇರಬಹುದಾದ ಸೂಚನೆಗಳಿವೆ.   ದೇಶದಲ್ಲಿ ಗುಣಮಟ್ಟದ ಕಚ್ಚಾಬೀಜಗಳ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಆಫ್ರಿಕಾದ ದೇಶಗಳಿಂದ ಬರುವ ಕಚ್ಚಾ ಬೀಜದ ಪ್ರಮಾಣವೂ ಕಡಿಮೆಯಾಗಬಹುದು, ಅಲ್ಲದೇ ತುಟ್ಟಿಯೂ ಆಗಬಹುದು. ಹೀಗಾಗಿ ಸ್ಥಳೀಯ ಬೀಜಕ್ಕೆ ಒಳ್ಳೆ ಬೆಲೆ ಸಿಗುವುದರಲ್ಲಿ ಸಂಶಯವೇ ಇಲ್ಲ  ಎನ್ನುತ್ತಾರೆ ಕುಮಠಾದ ಗೇರು ಉದ್ಯಮಿ ಮುರಳೀಧರ ಪ್ರಭು. 

ಸವಾಲುಗಳ ಸರಮಾಲೆ: ಇತ್ತೀಚಿನವೆರೆಗೂ ಗೇರುಬೀಜ ಉತ್ಪಾದನೆ, ರಫ್ತು, ಬಳಕೆಯಲ್ಲಿ ಭಾರತಕ್ಕೆ ಮೊದಲ ಸ್ಥಾನವಿತ್ತು. ನಮ್ಮಿಂದಲೇ ಪಾಠ ಹೇಳಿಸಿಕೊಂಡ ವಿಯೆಟ್ನಾಂ ಈಗ ನಮಗೇ ಪೈಪೋಟಿ ನೀಡುತ್ತಿದೆ. ಸುಮಾರು ಒಂದೂಕಾಲು ಲಕ್ಷ ಟನ್ ಸಂಸ್ಕರಿತ ಬೀಜ ರಫ್ತು ಮಾಡಿ ವಿಯೆಟ್ನಾಂ ನಂಬರ್ ಒನ್ ಆಗಿದೆ!

ಅಲ್ಲಿಯ ಸರಕಾರ ಕಾಂಬೋಡಿಯಾದಂತಹ ಪಕ್ಕದ ದೇಶದಲ್ಲಿ, ಆಫ್ರಿಕಾದ ದೇಶಗಳಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಗೇರು ಉತ್ಪಾದನೆಗೆ ಒಪ್ಪಂದ ಮಾಡಿಕೊಂಡು  ಪ್ರೋತ್ಸಾಹಿಸಿದೆ.

ಸಂಸ್ಕರಣೆಯಲ್ಲಿ  ಪರಿಪೂರ್ಣ ತಂತ್ರಜ್ಞಾನಕ್ಕಾಗಿ ಕಾಯುತ್ತಿರುವ ಬ್ರೆಜಿಲ್ ನಮಗೆ ಇನ್ನೊಂದು ಪ್ರತಿಸ್ಪರ್ಧಿ ದೇಶವಾಗಿದೆ.

ನಮ್ಮ ದೇಶಕ್ಕೆ ಈ ಉದ್ಯಮ ರೂ 2800 ಕೋಟಿಗಳಷ್ಟು ವಿದೇಶಿ ವಿನಿಮಯ ತರುತ್ತಿದ್ದರೂ, ದುರಂತವೆಂದರೆ ನಾವು  ಸರಿಸುಮಾರು ಅಷ್ಟೇ ಹಣವನ್ನು ನಮ್ಮ ಸಂಸ್ಕರಣಾ ಘಟಕಗಳಿಗೆ ಅಗತ್ಯವಾದ ಕಚ್ಚಾ ಬೀಜ ಆಮದು ಮಾಡಿಕೊಳ್ಳಲು ಖರ್ಚು ಮಾಡುತ್ತಿದ್ದೆೀವೆ!

ಕಳೆದ ಕೆಲ ವರ್ಷಗಳಿಂದ ನಮ್ಮ ವಾರ್ಷಿಕ ಕಚ್ಚಾ ಬೀಜ ಉತ್ಪಾದನೆ ಏರುತ್ತ  ಹೋಗುವ ಬದಲು ಕುಂಟುತ್ತ ನಿಂತಿದೆ.   6.5 ಲಕ್ಷ ಟನ್ ಗಡಿ ದಾಟುತ್ತಿಲ್ಲ. ರಫ್ತು ಗಳಿಕೆಯೂ ್ಙ 2800-3000 ಕೋಟಿಗಳ  ಒಳಗೇ ತಿಣುಕಾಡುತ್ತಿದೆ. ಗೇರು ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳು ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಗೇರು ನೆಡುತ್ತಿವೆಯಾದರೂ ಲಾಭ ಮಾತ್ರ ಕಂಡಿಲ್ಲ.

ಗೇರು ತೋಟಗಳನ್ನು ನುಂಗಿ ರಬ್ಬರ ಏಳುತ್ತಿದೆ, ಗೇರು ಬೆಳೆಯ ಪರ ವಕಾಲತ್ತು ಮಾಡಬೇಕಾದವರು ಹಿಂದೇ ಉಳಿದಿದ್ದಾರೆ. ತೆಂಗು, ಕಾಫಿ,. ರಬ್ಬರ, ಏಲಕ್ಕಿ ಮುಂತಾದ ಬೆಳೆಗಳ ಸಹಾಯಕ್ಕೆ ವಾಣಿಜ್ಯ ಸಚಿವಾಲಯದ ವ್ಯಾಪ್ತಿಯಲ್ಲಿ  ಮಂಡಳಿ (ಬೋರ್ಡ್)ಗಳಿವೆ. ಗೇರು ಬೆಳೆಗೆ ಇನ್ನೂ ಆ ಭಾಗ್ಯವಿಲ್ಲ. ಮಂಡಳಿ ತಮಗೇ ಬೇಕೆಂಬ  ರಾಜಕೀಯ ಜಗಳದಲ್ಲಿ ಗೇರು ಬಡವಾಗಿರುವುದು ಸುಳ್ಳಲ್ಲ.

ನಮ್ಮಲ್ಲಿ ರಾಷ್ಟ್ರಮಟ್ಟದ ಗೇರು ಸಂಶೋಧನಾ ಕೇಂದ್ರವಿದೆ,  ತಂತ್ರಜ್ಞಾನ ಪ್ರಸಾರಕ್ಕೆ ತೋಟಗಾರಿಕಾ ಇಲಾಖೆಗಳಿವೆ. ಆರ್ಥಿಕ ಸಹಾಯಕ್ಕೆ ಕೊಕೊ ಮತ್ತು ಗೇರು ಅಭಿವೃದ್ಧಿ ನಿರ್ದೇಶನಾಲಯವಿದೆ. ಆದರೂ ರಾಷ್ಟ್ರೀಯ ಉತ್ಪಾದಕತೆ ಎರಡು ದಶಕಗಳಿಂದ ಪ್ರತಿ ಹೆಕ್ಟೆರಿಗೆ 650-800 ಕೆ.ಜಿ ದಾಟಿಲ್ಲ. ಅಭಿವೃದ್ಧಿ ದೂರ ಇದೆ!

ಈ ಸಂಸ್ಥೆಗಳು ಅಭಿವೃಧಿಗಾಗಿ ಒಬ್ಬರನ್ನೊಬ್ಬರು ಅವಲಂಬಿಸಿದ್ದರೂ, ಈ ಬೆಳೆಯನ್ನು  ರೈತಸ್ನೇಹಿ  ಮಾಡುವಲ್ಲಿ ವಿಫಲವಾಗಿದ್ದು, ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ.

ಏನಾಗಬೇಕು?: ಈ ಬೆಳೆಗೆ ಅಪಾರ ಬೇಡಿಕೆ ಇದ್ದರೂ, ಈ ಬೆಳೆ ಅವಲಂಬಿಸಿರುವ ಉದ್ಯಮ  ವೇಗವಾಗಿ ಬೆಳೆಯುತ್ತಿದ್ದರೂ, ಬೆಳೆಯ ವಿಸ್ತಾರಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಇದು ಜನಸಾಮಾನ್ಯರಿಗೆ ಆಪ್ತವಾಗಿಲ್ಲ. ಉದ್ಯಮ ಮತ್ತು ಕೃಷಿಯ ನಡುವಿನ ಕೊಂಡಿಯೇಕೆ ಬಲಗೊಂಡಿಲ್ಲ? ಮುಂತಾದ ವಿಷಯಗಳ ಕುರಿತು ಫಲಪ್ರದವಾಗಬಹುದಾದ ಚರ್ಚೆ, ಚಿಂತನೆ ಆಗಬೇಕಾಗಿದೆ.

ಮಹಾರಾಷ್ಟ್ರದಲ್ಲಿ ಈ ಬೆಳೆಗೆ, ಸಂಸ್ಕರಣೆಗೆ ಸಹಕಾರಿ ಕ್ಷೇತ್ರದ ಪ್ರೋತ್ಸಾಹವಿದೆ.  ಒಂದು ಸಾವಿರಕ್ಕೂ ಅಧಿಕ ಪುಟ್ಟ ಪುಟ್ಟ ಸಂಸ್ಕರಣಾ ಘಟಕಗಳು ಗೃಹ ಉದ್ಯಮವಾಗಿ ಬೆಳೆದಿವೆ. ಉತ್ಪಾದನೆಯಲ್ಲಿ ವೇಗ ವರ್ಧಿಸಿಕೊಳ್ಳುತ್ತಿರುವ ಒಡಿಶಾದಲ್ಲಿ  `ಒಪ್ಪಂದ ಕೃಷಿ~ಯ ಗಾಳಿ ಬೀಸುತ್ತಿದೆ. 

ವಿಯೆಟ್ನಾಂ ಮತ್ತು ಆಫಿ್ರಕಾದ ಕೆಲ  ದೇಶಗಳಲ್ಲಿ ಕೈಗಾರಿಕೆಗಳು ಸ್ವತಃ ಗೇರು ಬೆಳೆಗಾರರಿಗೆ ಆಧಾರ ನೀಡುತ್ತಿವೆ. ಅಂತಹ ಚಿಂತನೆ ನಮ್ಲಲೇಕ್ಲೆ ಆಗಬಾರದು ?
ಸಾವಯವ ಬೀಜಕ್ಕೆ ಹೆಚ್ಚಿನ ಬೆಲೆ, ವಿದೇಶಿ ಮಾರುಕಟ್ಟೆಯಿದೆ. ಮಂಗಳೂರಿನ ಅಚಲ್ ಇಂಡಸ್ಟ್ರೀಸ್‌ನ ಗಿರಿಧರ ಪ್ರಭು, ಗೋವಾದ 50ಕ್ಕೂ ಅಧಿಕ ರೈತರಿಗೆ ಮಾರ್ಗದರ್ಶನ ನೀಡಿ, ಅವರಿಂದ ಸಾವಯವ ಬೀಜ ಪಡೆಯುತ್ತಿದ್ದಾರೆ. ಆ ಬೀಜಗಳಿಗೆ ಶೇ 20-25 ರಷ್ಟು ಹೆಚ್ಚು ಬೆಲೆ ದೊರೆಯುತ್ತಿದೆ.

ಬೀಜಕ್ಕಿಂತ ಹತ್ತು ಪಟ್ಟು ತೂಕವಿರುವ ಗೇರು ಹಣ್ಣನ್ನು ನ್ನಿ, ಅಲ್ಕೊಹಾಲ್, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಬಳಸಿ ಗೇರು ಉದ್ಯಮದ ಸಾಧ್ಯತೆಗಳನ್ನೇಕೆ ವಿಸ್ತರಿಸಲು ಪ್ರಯತ್ನಿಸಬೇಕಾಗಿದೆ. 

 ಕಚ್ಚಾ ಬೀಜಕ್ಕೆ  ಪ್ರತಿ ಕೆ.ಜಿಗೆ ಕನಿಷ್ಠ  ್ಙ 75 ಸಿಗದಿದ್ದರೆ ರೈತರು ಇನ್ನು ಇದನ್ನು ನೆಚ್ಚಿಕೊಳ್ಳಲಾರರು,  ಎನ್ನುತ್ತಾರೆ ಕೇರಳದ ಖ್ಯಾತ ಉದ್ಯಮಿ ಶಶಿಶೇಖರನ್. ಸರಕಾರ ಈ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ.

ಉದ್ಯಮ-ಕೃಷಿಕ-ವಿಜ್ಞಾನಿ ತ್ರಿಕೋನ ಸಂಬಂಧ ಪಾರದರ್ಶಕವೂ, ವಿಶ್ವಾಸಪೂರ್ಣವೂ ಆಗಿ ಅರ್ಥಪೂರ್ಣವಾಗಬೇಕಿದೆ. ಇಂದಿನ ಎಚ್ಚರಿಕೆ ಗಂಟೆಯನ್ನೂ ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಇನ್ನೈದು ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿರುವ, ದೇಶದ ಹೆಮ್ಮೆಯ ಗೇರು ಉದ್ಯಮದಲ್ಲಿ ಸಮಸ್ಯೆ ತಾರಕಕ್ಕೇರುವ ಸಾಧ್ಯತೆಗಳಿವೆ.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT