ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್ ಬಿರುಗಾಳಿಗೆ `ಪುಣೆ' ತತ್ತರ

Last Updated 23 ಏಪ್ರಿಲ್ 2013, 18:46 IST
ಅಕ್ಷರ ಗಾತ್ರ

ಬೆಂಗಳೂರು : ಅಕ್ಷರಶ: ಬೆಂಗಳೂರಿನಲ್ಲಿ ಬೀಸಿದ್ದು `ಗೇಲ್' ಬಿರುಗಾಳಿ. ಅದಕ್ಕೆ ತೂರಿ ಹೋದದ್ದು `ಪುಣೆ'. ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕ್ರಿಸ್ ಗೇಲ್ ಗಳಿಸಿದ್ದು 175 ರನ್! ಒಟ್ಟಾರೆ ಪುಣೆಗೆ ಬೆಂಗಳೂರು ನೀಡಿದ ಗುರಿ 264 ! ಅಂತಿಮವಾಗಿ ಬೆಂಗಳೂರಿಗೆ 130 ರನ್ ಗಳ ಭರ್ಜರಿ ಜಯ ಒಲಿಯಿತು.

ತಾವು ಎದುರಿಸಿದ 66 ಎಸೆತಗಳಲ್ಲಿ 17 ಭರ್ಜರಿ ಸಿಕ್ಸರ್ ಹಾಗೂ 13 ಬೌಂಡರಿಗಳನ್ನು ಒಳಗೊಂಡಂತೆ ಗೇಲ್ ಗಳಿಸಿದ್ದು ಬರೋಬರಿ 175 ರನ್‌ಗಳು. ಇದು ಟ್ವೆಂಟಿ-20 ಟೂರ್ನಿಯಲ್ಲಿ ಅತಿ ದೊಡ್ಡ ವೈಯಕ್ತಿಕ ರನ್ ದಾಖಲೆ ಹಾಗೂ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದ್ದು ಅತಿ ವೇಗದ ಶತಕ ಎಂಬ ದಾಖಲೆಯನ್ನು ಬರೆದಿದೆ.

ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿದ್ದು 263 ರನ್‌ಗಳು ಇದೂ ಕೂಡ ಟ್ವೆಂಟಿ-20 ಟೂರ್ನಿಯಲ್ಲಿ ದಾಖಲೆಯಾಯಿತು.

ಇದಕ್ಕೆ ಪ್ರತಿಯಾಗಿ ಪುಣೆ ವಾರಿಯರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ಬೆಂಗಳೂರು 130 ರನ್ ಗಳಷ್ಟು ಭಾರಿ ಅಂತರಲ್ಲಿ ಜಯ ಸಾಧಿಸಿತು. ಹೆಚ್ಚಿನ ವಿವರಗಳಿಗೆ  ...

http://www.prajavani.net/cricket?cbzmid=11895

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT