ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರಾದವರಿಗೆ ಟೀಕಿಸುವ ಹಕ್ಕಿಲ್ಲ– ವಿಶ್ವನಾಥ್‌

ಕಸ್ತೂರಿ ರಂಗನ್‌ ವರದಿ ಕುರಿತ ಸಭೆ
Last Updated 4 ಜನವರಿ 2014, 4:49 IST
ಅಕ್ಷರ ಗಾತ್ರ

ಮಡಿಕೇರಿ: ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿಗಳು ಕರೆದಿದ್ದ ಸಭೆಗೆ ಪಾಲ್ಗೊಳ್ಳದ ಬಿಜೆಪಿಯ ಪ್ರಮುಖರಿಗೆ ಸಂಸದರ (ನನ್ನ) ಪಾತ್ರದ ಬಗ್ಗೆ ಪ್ರಶ್ನಿಸುವ ಹಕ್ಕಿಲ್ಲ ಎಂದು ಸಂಸದ  ಎಚ್‌. ವಿಶ್ವನಾಥ್‌ ಟೀಕಾಕಾರರಿಗೆ ತೀರುಗೆಟು ನೀಡಿದರು.

ಮಡಿಕೇರಿ ಸಮೀಪದ ಗಾಳಿಬೀಡು ಜವಾಹರ್‌ ನವೋದಯ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಕಸ್ತೂರಿ ರಂಗನ್‌ ವರದಿಯನ್ನು ತಡೆಯುವಲ್ಲಿ ಸಂಸದರ ಕೊಡುಗೆ ಶೂನ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನುಮುತ್ತಪ್ಪ ಟೀಕಿಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದರು.

ಅರಣ್ಯ ಸಚಿವ ರಾಮನಾಥ್‌ ರೈ ಸೇರಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ನಾನು ಸಭೆ ಕರೆದಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಆದರೆ, ಸಭೆಯಲ್ಲಿ ಪಾಲ್ಗೊಳ್ಳದ ಈ ವ್ಯಕ್ತಿಗಳು ಈಗ ಸಂಸದರ ಪಾತ್ರ ಶೂನ್ಯ ಎನ್ನುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಕಸ್ತೂರಿ ರಂಗನ್ ವರದಿಯಲ್ಲಿರುವ ಎಲ್ಲ ಮಾರಕ ಅಂಶಗಳನ್ನು ತೆಗೆದು ಹಾಕಲಾಗುವುದು. ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳ ಜನರು ನಿಶ್ಚಿತೆಯಿಂದ ಇರಬಹುದು ಎಂದು ಅವರು ತಿಳಿಸಿದರು.

ನವೋದಯ ಶಾಲೆಯ ಅಭಿವೃದ್ಧಿಗೆ ಕ್ರಮ: ಇಲ್ಲಿನ ಜವಹಾರ್‌ ನವೋದಯ ವಿದ್ಯಾಲಯದ ಹಲವು ಕಾರ್ಯಗಳಿಗೆ ರೂ.1 ಕೋಟಿ ಹಣದ ಅವಶ್ಯಕತೆ ಇರುವುದಾಗಿ ಶಾಲೆಯ ಆಡಳಿತ ಮಂಡಳಿಯು ಕೋರಿತ್ತು. ಈಗಾಗಲೇ  ಸಂಸದರ ಅನುದಾನದಲ್ಲಿ ರೂ. 5 ಲಕ್ಷ ನೀಡಲಾಗಿದ್ದು, ತುರ್ತು ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಟಿ. ಪ್ರದೀಪ್‌, ವಕ್ತಾರ ಬಿ.ಎಸ್‌. ತಮ್ಮಯ್ಯ, ಶಾಲೆಯ ಪ್ರಾಂಶುಪಾಲರಾದ ಪಿ.ಎಂ. ಐಸಾಕ್‌, ಪೋಷಕ ಸಮಿತಿಯ ಕಾರ್ಯದರ್ಶಿ ಕೆ.ಎಸ್‌. ರಮೇಶ್‌, ಪ್ರಮುಖರಾದ ಸತೀಶ್‌, ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT