ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಗ್ಗಚನ್ನಬಸಯ್ಯನವರ 15ನೇ ಸ್ಮರಣೋತ್ಸವ

Last Updated 4 ಏಪ್ರಿಲ್ 2013, 6:14 IST
ಅಕ್ಷರ ಗಾತ್ರ

ಕಂಪ್ಲಿ: ಮಕ್ಕಳಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ ತಿರುಳು ಮತ್ತು ಸಂಸ್ಕಾರ ಬೋಧಿಸುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವಂತೆ ಹೊಸಪೇಟೆ ವಿಜಯನಗರ ಕಾಲೇಜಿನ ಉಪನ್ಯಾಸಕ ಮೃತ್ಯುಂಜಯ ರುಮಾಲೆ ಪೋಷಕರಲ್ಲಿ ಮನವಿ ಮಾಡಿದರು.

ಸ್ಥಳೀಯ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದ ಅನುಭವ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೊಗ್ಗ ಚನ್ನಬಸಯ್ಯನವರ 15ನೇ ಪುಣ್ಯಸ್ಮರಣೆ, 148ನೇ ಶಿವಾನುಭವ ಪ್ರವಚನದಲ್ಲಿ  `ಧರ್ಮಾಚರಣೆ ಮತ್ತು ಪುಣ್ಯಸ್ಮರಣೆ' ಕುರಿತು ಉಪನ್ಯಾಸ ನೀಡಿದರು.

ಗೊಗ್ಗ ಚನ್ನಬಸಯ್ಯನವರು ತಮ್ಮ ವೃತ್ತಿ ಜೊತೆಗೆ ಈ ಭಾಗದಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಪಟ್ಟಣದಲ್ಲಿ ವೈದಿಕ, ಜ್ಯೋತಿಷ, ಸಂಸ್ಕೃತ ಶಿಕ್ಷಣವನ್ನು ಪೋಷಿಸುವಲ್ಲಿ ಗೊಗ್ಗ ಮನೆತನ ಪ್ರಮುಖ ಪಾತ್ರವಹಿಸಿದೆ ಎಂದು ನೆನಪಿಸಿದರು.

ವಚನ ಸ್ಪರ್ಧೆ: ಗೊಗ್ಗ ಚನ್ನ ಬಸಯ್ಯನವರ ಸ್ಮರಣೋತ್ಸವ ಪ್ರಯುಕ್ತ ಧಾರವಾಡದ ಚಂದ್ರಿಕಾ ವಸ್ತ್ರದ ಅವರು 15ನೇ ವರ್ಷದ ವಚನ ಸ್ಪರ್ಧೆ ಆಯೋಜಿಸಿದ್ದರು. ಇದರಲ್ಲಿ ಪ್ರಥಮ ಬಹುಮಾನವನ್ನು ಜಿ.ಅನುಷಾ, ಕೆ. ಮೇಘಾ, ಜಿ. ಅಖಿಲಾ, ಪ್ರತಿಭಾ ಪ್ರಹ್ಲಾದ್. ದ್ವಿತೀಯ ಬಹುಮಾನವನ್ನು ಚಿನ್ಮಯ ಜವುಕಿನ್, ಕಲ್ಗುಡಿ ಪ್ರೇಕ್ಷಾ, ಜಿ. ರಾಜೇಶ್ವರಿ, ಗುಂಡದ ಅನುಷಾ ಪಡೆದರು.

ಶಿಷ್ಯ ವೇತನ ವಿತರಣೆ: ಸ್ಥಳೀಯ ಓದ್ಸೋ ಜಡೆಮ್ಮ ಗುರುಸಿದ್ಧಯ್ಯ ನವರ ಪ್ರೌಢಶಾಲೆ ಮತ್ತು ಶಾರದ ಶಾಲೆ ಬಡ ವಿದ್ಯಾರ್ಥಿ ಕೆ.ಎಂ. ಪ್ರಕಾಶ್, ಡಿ.ಸಂಜನ, ವಾರದ ಕಾವ್ಯ, ಕೆ.ಸಿ. ಐಶ್ವರ್ಯ, ವಿ. ರೋಹಿಣಿ ಅವರಿಗೆ ಗೊಗ್ಗ ಚನ್ನಬಸವರಾಜ ಶಿಷ್ಯ ವೇತನ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.

ಸನ್ಮಾನ: ಸದಾ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುವ, ನಿತ್ಯ ಜೀವನ ದಲ್ಲಿ ಸಂಪೂರ್ಣ ಕನ್ನಡ ಭಾಷೆಯನ್ನೇ ಅಳವಡಿಸಿಕೊಂಡು ಮಾದರಿಯಾಗಿ   ರುವ ಮಾದಗೊಂಡು ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು.

ಗಣ್ಯ ವರ್ತಕ ಓದ್ಸೋ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್.ಶಶಿಧರ ಶಾಸ್ತ್ರಿಗಳು, ಟ್ರಸ್ಟಿ ಗೊಗ್ಗ ಚನ್ನಬಸವ   ರಾಜ, ಮುಕ್ಕುಂದಿ ಬಸವರಾಜ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಪ್ರಕಾಶ್, ನಿವೃತ್ತ ಮುಖ್ಯಗುರು ಕೆ.ಎಂ. ರುದ್ರಮುನಿ, ಚಿನ್ನದ ಕಂತಿ ಪಟದಯ್ಯ, ಬಿ.ಎಂ. ವಿಶ್ವನಾಥ್, ಅಕ್ಕ ಮಹಾದೇವಿ ಮಹಿಳಾ ಮಂಡಳಿಯ ಮುಕ್ಕುಂದಿ ರುದ್ರಾಣಿ, ಎಂ. ಮಮತಾ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT