ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊತ್ತೇ ಇರದ ದ್ವೀಪದಲ್ಲಿ ಪಯಣ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದು ಧುತ್ತನೆ ಸಿಗುವ ದ್ವೀಪ. ಅದರ ಕುರಿತು ಮೊದಲು ತಿಳಿದವರೇ ಇಲ್ಲ. ಅದು ನಿಬ್ಬೆರಗಾಗಿಸುವ ಜಗತ್ತನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಸಿಲುಕಿದ ಮಲತಂದೆ ಹಾಗೂ ಮಗ ಏನೆಲ್ಲಾ ಸವಾಲಿನ ಕ್ಷಣಗಳನ್ನು ಎದುರಿಸುತ್ತಾರೆ ಎಂಬ ಹೂರಣ ಹೊತ್ತ `ಜರ್ನಿ 2~ ಇಂಗ್ಲಿಷ್ ಚಿತ್ರ ಜನಮಾನಸವನ್ನು ಗೆದ್ದಿದೆ.
 
ಆ ಗೆಲುವಿಗೆ ಮುಖ್ಯ ಕಾರಣ ಅದರಲ್ಲಿನ `3 ಡಿ~ ತಂತ್ರಜ್ಞಾನ ತೋರುವ ಕಾಡಿನ ಬೆರಗು. ಹಿಂದಿ ಚಿತ್ರಗಳಲ್ಲೂ ಕೆಲವು ನಿರ್ದೇಶಕರು ಇತ್ತೀಚೆಗೆ `3 ಡಿ~ ತಂತ್ರಜ್ಞಾನವನ್ನು ಅಳವಡಿಸಲು ಪ್ರಾರಂಭಿಸಿದ್ದಾರೆ. `ಡಾನ್ 2~ ಅದಕ್ಕೆ ಇತ್ತೀಚಿನ ಉದಾಹರಣೆ. ನಾಯಕ ಶಾರುಖ್ ಖಾನ್ ಬಂದೂಕಿನ ಕೊಳವೆಯನ್ನು ಮುಂದೆಮಾಡಿದಾಗ ಅದು ಕಣ್ಣೆದುರೇ ಬಂದಿತೇನೋ ಎಂಬಂತೆ ಕಾಣುವಷ್ಟಕ್ಕೇ ಬಾಲಿವುಡ್‌ನವರ `3 ಡಿ~ ಮೋಹ ಸೀಮಿತ.

ಆದರೆ, `ಜರ್ನಿ 2~ ಒಂದು ಅದ್ಭುತವಾದ `3 ಡಿ~ ಪಯಣ. 2008ರಲ್ಲಿ ತೆರೆಕಂಡಿದ್ದ `ಜರ್ನಿ ಟು ದಿ ಸೆಂಟರ್ ಆಫ್ ದಿ ಅರ್ಥ್~ನ ಎರಡನೇ ಭಾಗವಿದು. ಡಬ್ಲ್ಯುಡಬ್ಲ್ಯುಎಫ್ ಅಖಾಡದಲ್ಲಿ `ರಾಕ್~ ಎಂದೇ ಜನಪ್ರಿಯರಾಗಿರುವ ಡ್ವೇನ್ ಜಾನ್ಸನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. `ಜರ್ನಿ 2: ದಿ ಮಿಸ್ಟೀರಿಯಸ್ ಐಲೆಂಡ್~ ಚಿತ್ರವು ಇಂಗ್ಲಿಷ್ ಅಷ್ಟೇ ಅಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಡಬ್ ಆಗಿ ತೆರೆಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT