ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊದ್ರೇಜ್ ಪ್ರಾಪರ್ಟೀಸ್ `ಇ-ಸಿಟಿ'ಗೆ ಚಾಲನೆ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿ ಗೊದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ (ಜಿಪಿಎಲ್) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ 2ನೇ ಹಂತದ ವಸತಿ ಯೋಜನೆ `ಗೋದ್ರೇಜ್ ಇ-ಸಿಟಿ'ಗೆ ಚಾಲನೆ ನೀಡಿದೆ.

ಈ ಯೋಜನೆ 5 ಅಂತಸ್ತು ಒಳಗೊಂಡಿದ್ದು, ಗ್ರಾಹಕರು 2 ಮತ್ತು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬೆಲೆ 42 ಲಕ್ಷದಿಂದ  ಪ್ರಾರಂಭವಾಗುತ್ತದೆ.

ಎಲೆಕ್ಟ್ರಾನಿಕ್ ಕಾರ್ ರಿಚಾರ್ಜ್ ವ್ಯವಸ್ಥೆ, ಮಳೆ ನೀರು ಸಂಗ್ರಹ, ಸೌರ ಶಕ್ತಿ ಬಳಕೆ ಸೇರಿದಂತೆ ಹಲವು ಪರಿಸರ ಸ್ನೇಹಿ ಸೌಲಭ್ಯಗಳಿವೆ. ಶೇ 70ರಷ್ಟು ಪ್ರದೇಶ ಉದ್ಯಾನಕ್ಕೆ ಮೀಸಲಿಡಲಾಗಿದೆ  ಎಂದು ಗೋದ್ರೇಜ್ ಪ್ರಾಪರ್ಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಪಿರೋಜ್ ಷಾ ಗೋದ್ರೇಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿಸಿಎಸ್: 16,500 ನೇಮಕ

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ್ಙ1,350 ಕೋಟಿ ಹೂಡಿಕೆಯಲ್ಲಿ ಅಸ್ತಿತ್ವಕ್ಕೆ ಬರಲಿರುವ `ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕ್ಯಾಂಪಸ್' 2014-   15ನೇ ಸಾಲಿನ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇಲ್ಲಿ ಒಟ್ಟು 16,500 ಐ.ಟಿ ಮತ್ತು ಹೊರಗುತ್ತಿಗೆ (ಬಿಪಿಒ) ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಹೇಳಿದೆ.

`ಕೋಲ್ಕತ್ತ ಬಳಿ 40 ಎಕರೆಯಲ್ಲಿ  ಈ ಕ್ಯಾಂಪಸ್ ಅಸ್ತಿತ್ವಕ್ಕೆ ಬರಲಿದೆ ಎಂದು     `ಟಿಸಿಎಸ್' ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಮಹಾಲಿಂಗಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT