ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದಲ್ಲಿ ಶಿವರಾತ್ರಿ ಸಂಭ್ರಮ

Last Updated 20 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ಕುಮಟಾ (ಗೋಕರ್ಣ):  ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ಶಿವನ ಆತ್ಮಲಿಂಗವಿರುವ ಪ್ರಮುಖ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಫೆ. 15 ರಿಂದಲೇ ಶಿವರಾತ್ರಿ ಆಚರಣೆಯ ಪ್ರಕ್ರಿಯೆ ಆರಂಭವಾಗಿದ್ದು, ದಿ. 23ರಂದು ಮುಕ್ತಾಯವಾಗಲಿದೆ.

ಶಿವನ ಆತ್ಮಲಿಂಗ ಸ್ಪರ್ಶಿಸಿ ಭಕ್ತರಿಗೆ ಪೂಜೆಗೆ ಅವಕಾಶವಿರುವ ಏಕೈಕ ಪುಣ್ಯ ಕ್ಷೇತ್ರ ಎಂಬ ಹೆಗ್ಗಳಿಕೆಯ ಗೋಕರ್ಣ ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ. ರಾಜ್ಯ, ಹೊರ ರಾಜ್ಯದಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಿದ್ದು, ಮಹಾಶಿವರಾತ್ರಿಯ ಫೆ. 23 ರವರೆಗೆ ಧಾರ್ಮಿಕ ಕಾರ್ಯ ಕ್ರಮ ನಡೆಯಲಿದೆ.

ವಿಶಿಷ್ಟ ಆಚರಣೆ: ಭಕ್ತಯಿಂದ ಶಿವ ನನ್ನು ಒಲಿಸಿಕೊಂಡು ಆತನ ಆತ್ಮಲಿಂಗ ವನ್ನೇ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ರಾವಣನಿಂದ ಆತ್ಮಲಿಂಗ ವನ್ನು ಉಪಾಯವಾಗಿ ಉಳಿಸಿಕೊಂಡ ಗಣಪತಿಯಿಂದಾಗಿಯೇ ಗೋಕರ್ಣಕ್ಕೆ ಇಷ್ಟೆಲ್ಲ ಖ್ಯಾತಿ ಬಂದಿರುವುದು ಎಲ್ಲರಿಗೂ ಗೊತ್ತು.

ಹಾಗೇಯೇ ಗೋಕರ್ಣದ 9 ದಿನಗಳ ಶಿವರಾತ್ರಿ ಆಚರಣೆ ಕೂಡ ವಿಶಿಷ್ಟ. ಶಿವರಾತ್ರಿಯ ಮೊದಲ ದಿನ ಒಂಬತ್ತು ಜಾತಿಯ ಧಾನ್ಯಗಳನ್ನು ಮಣ್ಣಿನಲ್ಲಿ ಬಿತ್ತುತ್ತಾರೆ. ನಂತರದ ಎಲ್ಲ ದಿನಗಳಲ್ಲಿ ಸಾಂಪ್ರದಾ ಯಿಕ ಪೂಜೆ, ಧಾರ್ಮಿಕ ಕಾರ್ಯಕ್ರಮ ಗಳು ನಡೆಯುತ್ತದೆ. ಫೆ. 20 ರ ಮಹಾಶಿವರಾತ್ರಿಯಂದು ಮನೆ, ಮನೆ ಗಳಲ್ಲಿ ಅವರವರ  ಶಕ್ತ್ಯಾನುಸಾರ ದಿನ-ರಾತ್ರಿಯಿಡಿ ಶಿವ ಭಜನೆ, ಪೂಜೆ ನಡೆಯುತ್ತದೆ.

ಮಹಾಪೂಜೆಯನ್ನು  ಗೋಕರ್ಣದ ಅಡಿ ಹಾಗೂ ಹಿರೇಭಟ್ಟರ ಮನೆತನ ದವರು ನಡೆಸಿಕೊಂಡು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.  ಈ ವರ್ಷ ಮಹಾಪೂಜೆಯ ಸರದಿ  ಅಡಿ ಮನೆ ತನದವರಿಗೆ ಲಭಿಸಿದೆ ಎಂದು ಗೋಕರ್ಣದ ಹಿರಿಯರಾದ ಉಮಾ ಕಾಂತ ಗೋಪಿ ತಿಳಿಸುತ್ತಾರೆ.

ಮಹಾಬಲೇಶ್ವರ ದೇವಾಲಯದಲ್ಲಿ ಬೆಳಗಿನ ಜಾವ ಎರಡು ಗಂಟೆಯವರೆಗೆ ಭಕ್ತಾದಿಗಳು ಪೂಜೆ ಸಲ್ಲಿಸಬಹುದಾ ಗಿದೆ. ಮಹಾ ಪೂಜೆ ನಡೆದ ನಂತರ ಮಹಾಬಲೇಶ್ವರ ದೇವರ ಪಲ್ಲಕ್ಕಿ ತೆಪ್ಪೋತ್ಸವಕ್ಕೆ ಕೋಟಿತೀರ್ಥಕ್ಕೆ ತೆರಳು ತ್ತದೆ.

ಅಲ್ಲಿ ಅಲಂಕೃತ ದೋಣಿಯ ಮೇಲೆ ಪಲ್ಲಕಿಯನ್ನು ಇಟ್ಟು ಕೋಟಿ ತೀರ್ಥದ ಪ್ರದಕ್ಷಣೆ ಹಾಕಲಾಗುತ್ತದೆ. ಮರುದಿನ ಅಮವಾಸ್ಯೆಯಂದು ಭಕ್ತಾ ದಿಗಳು ಸಮುದ್ರ ಸ್ನಾನ ಮಾಡಿ ಮಡಿದ ತಮ್ಮ ಹಿರಿಯ ಅಪರಕ್ರಿಯೆಗಳನ್ನು ನೆರವೇರಿ ಸುವುದು ಸಂಪ್ರದಾಯ.

ಫೆ. 22 ರಂದು  ಮಹಾಬಲೇಶ್ವರ ದೇವರ ರಥೋತ್ಸವ ನಡೆಯುತ್ತದೆ. ಈ ರಥ ಜಿಲ್ಲೆಯಲ್ಲಿಯೇ ಅತಿ ದೊಡ್ಡ ರಥ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಫೆ. 23 ರಂದು ಓಕಳಿ ಹಾಗೂ ಶಿವ ರಾತ್ರಿಯ ಹಬ್ಬದ  ಮುಕ್ತಾಯ ಕಾರ್ಯಕ್ರಮ.

ಮೊದಲನೇ ಬಿತ್ತಿದ ನವ ಧಾನ್ಯಗಳ ಮೊಳೆಕೆ ಸಸಿಯನ್ನು ಮಹಾಬಲೇಶ್ವರನಿಗೆ ಅರ್ಪಿಸುವ ಮೂಲಕ ಶಿವರಾತ್ರಿ ಕ್ರಿಯೆಗೆ ಮಂಗಳ ಹಾಡಲಾಗುತ್ತದೆ.

ಶಿವರಾತ್ರಿಗೆಂದು ಹೊರಗಿನಿಂದ ಗೋಕರ್ಣದಲ್ಲಿ ವಾಸ್ತವ್ಯ ಹೂಡುವವರೂ ಈಗಲೂ ಇದ್ದಾರೆ. ಬಂದ ಭಕ್ತಾದಿಗಳಿಗೆ ಎಲ್ಲ ಸೌಕರ್ಯ ಕಲ್ಪಿಸುವುದೇ ಗೋಕರ್ಣ ಕ್ಷೇತ್ರಕ್ಕೆ ಎದುರಾಗುವ ದೊಡ್ಡ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT