ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಯಲ್‌ ವಿರುದ್ಧ ಮೊಯ್ಲಿ ಅತೃಪ್ತಿ

Last Updated 21 ಡಿಸೆಂಬರ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಪುನರ್‌ರಚನೆ ವಿಳಂಬ ಆಗುತ್ತಿರುವುದಕ್ಕೆ ಕೇಂದ್ರ ಪೆಟ್ರೋ ಲಿಯಂ ಸಚಿವ ಎಂ.ವೀರಪ್ಪಮೊಯಿಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಂಜೆ ಸಿದ್ದ ರಾಮಯ್ಯ ಅವರನ್ನು ಭೇಟಿ ಮಾಡಿದ ಮೊಯಿಲಿ ಈ ಬಗ್ಗೆ ಮಾತು ಕತೆ ನಡೆಸಿ ದರು ಎಂದು ಮೂಲಗಳು ತಿಳಿಸಿವೆ.

ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಇಬ್ಬರೂ ಚರ್ಚಿಸಿದ್ದು, ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷರ ನೇಮಕ ವಿಚಾರವೂ ಸಹ ಪ್ರಸ್ತಾಪವಾಗಿದೆ. ವಿಶ್ರಾಂತ ಕುಲಪತಿಯೊಬ್ಬರ ಹೆಸರನ್ನು ಈ ಹುದ್ದೆಗೆ ತಾವು ಶಿಫಾರಸು ಮಾಡಿ ಆರು ತಿಂಗಳಾದರೂ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜ ನೀಶ್‌ ಗೋಯಲ್‌ ಅವರು ಆದೇಶ ಹೊರಡಿಸಿಲ್ಲ ಎಂಬುದಾಗಿ ಮೊಯಿಲಿ ಅತೃಪ್ತಿ ಸೂಚಿಸಿದರು.

‘ಗೋಯಲ್‌ ಕೇಂದ್ರ ಸಚಿವರಾದ ನಮ್ಮ ಪತ್ರಗಳಿಗೂ ಬೆಲೆ ನೀಡುತ್ತಿಲ್ಲ.  ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂಬ ಬೇಡಿಕೆ ಮಾತುಕತೆ ವೇಳೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT