ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡ್‌ಪ್ಲಸ್‌ನ ಚಿನ್ನದ ನ್ಯಾನೊ

Last Updated 19 ಸೆಪ್ಟೆಂಬರ್ 2011, 16:20 IST
ಅಕ್ಷರ ಗಾತ್ರ

ಮುಂಬೈ: ಟೈಟಾನ್ ಇಂಡಸ್ಟ್ರೀಸ್‌ನ ಚಿನ್ನಾಭರಣ ಬ್ರಾಂಡ್ ಆಗಿರುವ ಗೋಲ್ಡ್‌ಪ್ಲಸ್, ಚಿನ್ನಾಭರಣ ಬಳಸಿ ರೂಪಿಸಿರುವ ವಿಶ್ವದ ಮೊದಲ ಕಾರನ್ನು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರು ಸೋಮವಾರ ಇಲ್ಲಿ ಅನಾವರಣಗೊಳಿಸಿದರು.

ಚಿನ್ನಾಭರಣಗಳಿಂದ ಅಲಂಕೃತಗೊಂಡಿರುವ ಈ ನ್ಯಾನೊ ಕಾರಿನ ಪರಿಕಲ್ಪನೆ ಸಾಕಾರಗೊಳ್ಳಲು 30ಕ್ಕೂ ಹೆಚ್ಚು  ಕಲಾವಿದರು ಶ್ರಮಿಸಿದ್ದಾರೆ. 22 ಕ್ಯಾರೆಟ್‌ನ 80ಕೆ.ಜಿ ಚಿನ್ನ ಹಾಗೂ 15 ಕೆ.ಜಿಯಷ್ಟು ಬೆಳ್ಳಿ ಮತ್ತು ಹರಳು ಗಳಿಂದ ಈ ಕಾರು ಅಲಂಕೃತಗೊಂಡಿದೆ.   ಮೀನಕರಿ, ಕುಂದನ್  ಮೊದಲಾದ ಸಾಂಪ್ರದಾಯಿಕ  ಶೈಲಿಗಳು ಇಲ್ಲಿ ಬಳಕೆಯಾಗಿವೆ.

ದೇಶದಲ್ಲಿ ಚಿನ್ನಾಭರಣಗಳ ತಯಾರಿಕೆಯ 5000 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಈ  ವಿಶಿಷ್ಟ ಪರಿಕಲ್ಪನೆಯ ಕಾರು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಬೆಳಗಾವಿ, ಶಿವಮೊಗ್ಗ ಸೇರಿದಂತೆ ದೇಶದಾದ್ಯಂತ 29 ನಗರಗಳಲ್ಲಿ ಈ ಕಾರನ್ನು ಪ್ರದರ್ಶಿಸಲಾಗುವುದು. ಆನಂತರವಷ್ಟೇ ಇದನ್ನು ಮಾರಾಟ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸಲಾಗುವುದು. ಸದ್ಯಕ್ಕಂತೂ ಇದರ ಬೆಲೆ ಎಷ್ಟೆಂಬುದನ್ನು ಪ್ರಕಟಿಸಿಲ್ಲ. ಮಾರಾಟ ಮಾಡುವುದೇ ಆದರೆ, ಹರಾಜು ಹಾಕಬೇಕಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT