ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ- 7 ವರ್ಷ ಕಠಿಣ ಶಿಕ್ಷೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾದ ಗೋ ಹತ್ಯೆಯ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿರುವ ಮಧ್ಯಪ್ರದೇಶ ಸರ್ಕಾರ, ಕಾನೂನು ಉಲ್ಲಂಘಿಸಿದವರಿಗೆ ಈಗಿರುವ ಮೂರು ವರ್ಷಗಳ ಕಠಿಣ ಸಜೆಯನ್ನು ಏಳು ವರ್ಷಗಳಿಗೆ ಏರಿಸಿದೆ.

ರಾಷ್ಟ್ರಪತಿ ಅವರ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, `ಮಧ್ಯಪ್ರದೇಶ ಗೋ ಹತ್ಯಾ ತಡೆ ಕಾಯ್ದೆ~ಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ. ಗೋ ಸಂತತಿ ರಕ್ಷಣೆಗಾಗಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದಿರುವ ಅಧಿಕಾರಿಗಳು, 2004ರಲ್ಲಿ ಜಾರಿಗೆ ತಂದ ಗೋವಂಶ ಪ್ರತಿಷೇಧ ಅಧಿನಿಯಮದಲ್ಲಿ ಹಲವು ಬದಲಾವಣೆಗಳನ್ನು ತರುವುದರೊಂದಿಗೆ 2010ರಲ್ಲಿ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಕಾಯ್ದೆಯಲ್ಲಿದ್ದ ಹಲವು ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ಅದನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಹೊಸ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ಗೋಹತ್ಯೆ ಮಾಡುವುದಾಗಲಿ, ಅದನ್ನು ಪ್ರೋತ್ಸಾಹಿಸುವುದಾಗಲಿ ಅಥವಾ ಹತ್ಯೆಗಾಗಿ ಗೋವುಗಳನ್ನು ನೀಡುವುದಾಗಲಿ ಅಪರಾಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT