ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಆಟೊ ಬಂದ್‌ ಪರಿಣಾಮ: ಪ್ರಯಾಣಿಕರ ಪರದಾಟ
Last Updated 7 ಜನವರಿ 2014, 6:57 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಕೇಂದ್ರ ಸರ್ಕಾರದ ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ‘ಆಟೊ ಬಂದ್‌’ ಹಿನ್ನೆಲೆಯಲ್ಲಿ ಆಟೊ ಮಾಲೀಕರ ಮತ್ತು ಚಾಲಕರ ಸಂಘದಿಂದ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಂತರ ತಹಶೀಲ್ದಾರ್‌ ಹನುಮಂತಪ್ಪ ಬಡಿದಾಳೆ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯು ಹೆಸ್ಕಾಂ ಗಣೇಶ ದೇವಸ್ಥಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕೋರ್ಟ್ ಎದುರು ರಾಷ್ಟ್ರೀಯ ಹೆದ್ದಾರಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಆಟೊ ಬಂದ್ ಸಂಪೂರ್ಣ ಯಶಸ್ವಿಗೊಂಡಿತು. ಇದರಿಂದಾಗಿ ಸಾರ್ವಜನಿಕರು ಪರದಾಡಿದರು.  ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ವಾಪಸ್ಸು ಕರೆದುಕೊಂಡು ಬರಲು ಪಾಲಕರು ಪರದಾಡಿದರು.

ಕೆಲವರು ಬೈಕ್‌ ಮೇಲೆ ಐದಾರು ಮಕ್ಕಳನ್ನು ಕುಳ್ಳಿರಿಸಿಕೊಂಡು ಶಾಲೆಗೆ ಬಿಟ್ಟು ಬಂದರು. ಪರ ಊರಿನಿಂದ ಬಂದ ಪ್ರಯಾಣಿಕರು ಸುಡು ಬಿಸಿಲಿನಲ್ಲಿ ನಡೆದುಕೊಂಡೇ ಗೊಣಗುತ್ತ ಸಾಗಿದರು.ಆಟೊ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಿ.ಎಂ.ಜಯದೇವ ಮಾತನಾಡಿ, ಆಟೊಗಳಿಗೆ ಬಳಸುವ ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ಗೆ ಶೇ.50 ರಷ್ಟು ಸಬ್ಸಿಡಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡ ಬೇಕು, ಇದರಿಂದ ಜನರ ಮೇಲೆ ಬೀಳುವ ಹೆಚ್ಚಿನ  ಹೊರೆಯನ್ನು ತಪ್ಪಿಸಿದಂತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಆಟೊ ಚಾಲಕರಿಗೆ ನಗರಸಭೆಯಿಂದ ನಿವೇಶನಗಳನ್ನು ನೀಡಬೇಕು ಎಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಸುರೇಶ ತಳವಾರ, ಮಹಾಂತೇಶ ಮರಿಯಪ್ಪನವರ, ರಂಗಣ್ಣ, ವಿರೇಶ ಕೋರಿಶೆಟ್ರ, ರಾಜೇಶ ಬಸೆನಾಯಕ, ಪ್ರದೀಪ ಕಬ್ಬೂರು, ನಾಗರಾಜ, ಕೊಟ್ರೇಶ, ಚೌಡಪ್ಪ, ಜಗದೀಶ  , ರೆಹಮಾನ್‌, ಅಜೇಯ , ಹನುಮಂತಪ್ಪ  ್ಳಿ, ರಾಜು, ರಮೇಶ, ನಾಗರಾಜ, ಶೇರ್‌ಅಲಿಖಾನ್‌, ಕೊಟ್ರೇಶ, ಚಂದ್ರಶೇಖರ, ಪರಮೇಶಪ್ಪ, ಗುರುಶಾಂತಪ್ಪ, ರಾಜಕುಮಾರ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT