ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಕಡತಗಳಿಗೆ ಬೆಂಕಿ

ಅವ್ಯವಹಾರ ಮರೆಮಾಚುವ ಹುನ್ನಾರದ ಶಂಕೆ: 16ಕ್ಕೆ ನಿಗದಿಯಾಗಿದ್ದ ಪರಿಶೀಲನೆ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಸೋಮೇನ­ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಕಡತಗಳ ಕೊಠಡಿಗೆ ಗುರುವಾರ ಮುಂಜಾನೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ನಡೆದಿದೆ.

ಮುಂಜಾನೆ ಐದು ಗಂಟೆ ಸಮಯ­ದಲ್ಲಿ ಗ್ರಾ.ಪಂ ಕಚೇರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದವರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಬೆಂಕಿ ನಂದಿಸಲು ಗ್ರಾಮಸ್ಥರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಚಿಕ್ಕಬಳ್ಳಾಪುರದಿಂದ ಅಗ್ನಿಶಾಮಕ­ದಳದ ವಾಹನ ಬಂದು ಬೆಂಕಿ ನಂದಿ­ಸಿದರೂ; ಕಚೇರಿಯಲ್ಲಿದ್ದ ದಾಖಲೆ­ಗಳು ಸುಟ್ಟು ಬೂದಿಯಾಗಿವೆ.

ಕಚೇರಿಯಲ್ಲಿದ್ದ ರಸೀದಿ ಪುಸ್ತಕ, ಲೆಕ್ಕಪತ್ರ ತಪಾಸಣೆ ವರದಿ, ಕಾಮಗಾರಿ, ವಸತಿ ಯೋಜನೆ, ಸಂಪೂರ್ಣ ಸ್ವಚ್ಛತಾ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ದಾಖಲೆ­ಗಳು, ಇತರ ಯೋಜನೆಗಳಿಗೆ ಸಂಬಂಧಿ­ಸಿದ ಎಲ್ಲಾ ದಾಖಲೆಗಳು ಸುಟ್ಟು ಕರಕಲಾಗಿವೆ. ಕೆಲ ದಾಖಲೆಗಳು ಅರ್ಧ ಸುಟ್ಟಿವೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಹುನ್ನಾರ: 13ನೇ ಹಣ­ಕಾಸು ಯೋಜನೆಯಡಿ ಗ್ರಾಮ ಪಂಚಾ­ಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದನ್ನು ಮುಚ್ಚಿ ಹಾಕಲು ಬೆಂಕಿ ಹಾಕಿ ಕಡತ­ಗಳನ್ನು ಸುಡಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಆದಿನಾರಾಯಣ ರೆಡ್ಡಿ ಆರೋಪಿಸಿದ್ದಾರೆ.

ಅವ್ಯವಹಾರ ಆರೋಪದ ಹಿನ್ನೆಲೆ­ಯಲ್ಲಿ ಹಿಂದಿನ ಗ್ರಾ.ಪಂ. ಕಾರ್ಯ­ದರ್ಶಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ.
ಡಿ. 16ರಂದು ವಿಶೇಷ ತನಿಖಾ ತಂಡ ಕಡತಗಳ ಪರಿಶೀಲನೆ ಮಾಡುವುದಿತ್ತು. ಈ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕ­ವಾಗಿ ದಾಖಲೆಗಳ ಕೊಠಡಿಗೆ ಬೆಂಕಿ ಹಾಕಿದ್ದಾರೆ ಎಂದು ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಪಿ.­­ಲಕ್ಷ್ಮಿನಾರಾಯಣ ದೂರಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಶಾರ್ಟ್ ಸರ್ಕೀಟ್‌ ಆಗಿಲ್ಲ ಎಂದಿದ್ದಾರೆ. ವ್ಯವಸ್ಥಿತ ಸಂಚು ರೂಪಿಸಿ ಬೆಂಕಿ ಹಚ್ಚಿದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಆಕ್ರೋಶ: ತಾ.ಪಂ. ಕಾರ್ಯ ನಿರ್ವ­ಹಣಾಧಿಕಾರಿ ಇಂದ್ರೇಶ ಸ್ಥಳಕ್ಕೆ ಬರು­ತ್ತಿದ್ದಂತೆ ಗ್ರಾಮಸ್ಥರು, ಸದಸ್ಯರು ಹರಿಹಾಯ್ದರು.

‘ನಿಮ್ಮ ಬೇಜವಾಬ್ದಾರಿ­ಯಿಂದಲೇ ಈ ಘಟನೆ ನಡೆದಿದೆ’ಎಂದು ದೂರಿ ಧಿಕ್ಕಾರ ಕೂಗಿದರು.

ಅವ್ಯವಹಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT